ರಾಜ್ಯ ವಿಧಾನಸಭಾ ಚುನಾವಣೆ ಸಮೀಪಸುತ್ತಿರುವ ಹಿನ್ನಲೆ.

ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮದ್ಯ ಪಕ್ಷೇತರ ಅಭ್ಯರ್ಥಿ ರಾಜಾಹುಲಿ ದಿನೇಶ್ ಪರ ಅಭಿಮಾನಿಗಳು ಪತ್ರಿಕಾಗೋಷ್ಠಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜಾಹುಲಿ ಅಭಿಮಾನಿಗಳಿಂದ ನೆಡೆದ ಪತ್ರಿಕಾಗೋಷ್ಠಿಬಿಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಗವಿರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿಇದೇ ತಿಂಗಳು 12ರ ಭಾನುವಾರ ರಾಜಾಹುಲಿ ದಿನೇಶ್ ಅಭಿಮಾನಿಗಳ ಬಳಗ ತಾಲ್ಲೂಕು ಘಟಕದ ವತಿಯಿಂದ ಸ್ವಾಭಿಮಾನಿ ಬೃಹತ್ ಸಮಾವೇಶತಾಲೂಕಿನ ತಾ.ಪಂ.ಮಾಜಿ‌ ಸದಸ್ಯ ಹಾಗೂ ಸಮಾಜ ಸೇವಕ ರಾಜಾಹುಲಿ ದಿನೇಶ್ ಅವರ ಅಭಿಮಾನಿಗಳು ಪಕ್ಷೇತರವಾಗಿ ಚುನಾವಣೆಗೆ ಸಕಲ ಸಿದ್ಧತೆಅಭಿಮಾನಿಗಳು ಹಿತೈಷಿಗಳು ಹಾಗೂ ಸ್ನೇಹಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬ್ಯಾಲದಕೆರೆ ಹರೀಶ್ ಹಾಗೂ ಕೊರಟೀಕೆರೆ ಕೃಷ್ಣೇಗೌಡ ತಾಲೋಕಿನ ಮತದಾರರಲ್ಲಿ ಮನವಿಅವರು ಕೆ ಆರ್ ಪೇಟೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ರಾಜಾಹುಲಿ ದಿನೇಶ್ ಅಭಿಮಾನಿಗಳು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರುರಾಜಾಹುಲಿ ದಿನೇಶ್ ರಾಜಕೀಯಕ್ಕೆ ಬರುವ ಮುಂಚಿನಿಂದಲೂ ರೈತರಿಗೆ, ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.ತಾ.ಪಂ.ಸದಸ್ಯರಾಗಿ ಸಂತೆಬಾಚಹಳ್ಳಿ ಹೋಬಳಿಯಲ್ಲಿ ಸರ್ಕಾರದ ಅನುದಾನವನ್ನು ಕಾಯದೇ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.ಮಹಾಮಾರಿ ಕೊರೋನದ ಸಂಕಷ್ಟದ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟದ ಕೆಲಸವಾಗಿತ್ತು.ಅಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ,ನಿರ್ಗತಿಕರಿಗೆ,ಬಡವರಿಗೆ ಪುಡ್ ಕಿಟ್ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಎಡೆಬಿಡದೆ ಸುರಿದ ಬಿರುಗಾಳಿ ಮಳೆಗೆ ಸಾಕಷ್ಟು ಮನೆಗಳು, ಬೆಳೆಗಳು ಹಾನಿಯಾಗಿದ್ದವು.ಅಂತಹ ಮನೆಗಳ ವಾರಸುದಾರನ್ನು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವ ಮೂಲಕ ಸಹಾಯಹಸ್ತ ಚಾಚಿದ್ದರು.ಆದ್ದರಿಂದ ಅವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಸತ್ಯ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಾಜಾಹುಲಿ‌ ದಿನೇಶ್ ಅವರನ್ನು ತಾಲೂಕಿನ ಎಲ್ಲಾ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಿ ಸಿ ಮಹದೇವ್,ಅಕ್ಕಿಹೆಬ್ಬಾಳು ರಾಜು, ಮನು ಶ್ಯಾರಹಳ್ಳಿ,ಬ್ಯಾಲದಕೆರೆ ಹರೀಶ್, ಪ್ರಸನ್ನ, ಕೃಷ್ಣೇಗೌಡ, ಬಳ್ಳೇಕೆರೆ ನಂದೀಶ್,ಭಾರತಿಪುರ ಸಂತೋಷ್, ಮಂಜು, ಸಿಂಗನಹಳ್ಳಿ ಪ್ರಕಾಶ್,ಕೊಮ್ಮೇನಹಳ್ಳಿ ಅನಿಲ್ ಚಿಕ್ಕೊಸಹಳ್ಳಿ ಸಂದೀಪ್, ರಾಕೇಶ್,ಕೊರಟೀಕೆರೆ ಹರೀಶ್ ಟೈಲರ್,ಮನು ಶ್ಯಾರಹಳ್ಳಿ,ಸಾಗರ ಗೊರವಿ,ಅಘಲಯ ಪ್ರತಾಪ್, ಆನಂದ್,ಸಂಜು,ರಂಜಿತ್,ನಾರಾಯಣಪುರ ಅಭಿಲಾಷ್,ಮನು ಸೇರಿದಂತೆ ಇತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಗರಸಭೆಯ 2023 -24ನೇ ಸಾಲಿನ ಆಯವ್ಯಯ ಮಂಡನೆ.

Thu Feb 9 , 2023
ನಂಜನಗೂಡು ನಗರಸಭೆಯಲ್ಲಿ 2023- 24ನೇ ಸಾಲಿಗೆ ಎರಡು ಕೋಟಿ 3, ಲಕ್ಷದ 12,ಸಾವಿರ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು .ನಗರಸಭಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆ . ಸುಮಾರು ಎರಡು ಕೋಟಿ ಮೂರು ಲಕ್ಷಕ್ಕೂ ಹೆಚ್ಚು ಉಳಿತಾಯ ಬಜೆಟ್ ಮಂಡನೆ ಮಂಡಿಸಿದ ನಗರಸಭಾ ಅಧ್ಯಕ್ಷರು ಮೂರನೇ ವರ್ಷದ ಹ್ಯಾಟ್ರಿಕ್ ಬಜೆಟ್ ಮಂಡನೆ ಮಾಡಿದ ನಗರಸಭಾಧ್ಯಕ್ಷ ಮಹಾದೇವಸ್ವಾಮಿ.ಕಳೆದ ಸಾಲಿನಲ್ಲಿ 50 ಕೋಟಿ ಮಂಡಿಸಿದ್ದ ನಗರಸಭೆಯಲ್ಲಿ ಈ ಬಾರಿ […]

Advertisement

Wordpress Social Share Plugin powered by Ultimatelysocial