ಎಸ್. ರಾಮಚಂದ್ರ ಐತಾಳ್ ಚಿತ್ರರಂಗದ ಅಪ್ರತಿಮ ಛಾಯಾಗ್ರಾಹಕರು

ಎಪ್ಪತ್ತರ ದಶಕದಿಂದ ಪ್ರಾರಂಭಗೊಂಡಂತೆ ಕನ್ನಡ ಚಿತ್ರರಂಗವು ರಾಷ್ಟೀಯ ಮಟ್ಟದ ಪ್ರಶಸ್ತಿಗಳಲ್ಲಿ ನಿರಂತರವಾಗಿ ಹೆಸರು ಮಾಡುತ್ತಾ ಇನ್ನಿತರ ಶಕ್ತಿಶಾಲಿ ಭಾಷಾ ಚಿತ್ರರಂಗಗಳಿಗೆ ಸವಾಲೊಡ್ಡುತ್ತಾ ನಡೆದಿದೆ. ಚಿತ್ರಗಳಿಗೆ ಪ್ರಶಸ್ತಿ ಬರುವುದು ಚಿತ್ರಗಳಲ್ಲಿನ ಕಥಾಶಕ್ತಿಯಿಂದ, ನಿರ್ದೇಶಕನ ಜಾಣ್ಮೆಯಿಂದ, ಕಲಾವಿದರ ಅಭಿನಯ ಕೌಶಲ್ಯದಿಂದ ಇವೆಲ್ಲವೂ ನಿಜ. ಆದರೆ ಅವಕ್ಕೆಲ್ಲಾ ಸಿನೀಮಯ ಸಂವಹನ ಸೃಷ್ಟಿಯಾಗುವುದು ಒಬ್ಬ ಛಾಯಾಗ್ರಾಹಕರು ಸೃಷ್ಟಿಸುವ ದೃಶ್ಯರೂಪಕವಾದ ಸಂಪರ್ಕಾಭಿವ್ಯಕ್ತಿಯಿಂದ ಎಂಬುದು ಮಾತ್ರ ಅಷ್ಟೇ ನಿಜ. ಇಂತಹ ಮಹಾನ್ ಛಾಯಾಗ್ರಾಹಕರನ್ನು ಭಾರತೀಯ ಚಲನಚಿತ್ರರಂಗ ಕಂಡಿದೆ. ಆ ಸಾಲಿನಲ್ಲಿ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ ಎಸ್. ರಾಮಚಂದ್ರ ಐತಾಳರು.
ಕನ್ನಡ ಚಿತ್ರರಂಗ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಿಂಹಪಾಲು ಚಿತ್ರಗಳಲ್ಲಿ ಎಸ್ ರಾಮಚಂದ್ರರ ಛಾಯಾಗ್ರಹಣವಿದೆ ಎಂಬುದು ನಮ್ಮ ನೆನಪನ್ನು ತುಂಬುವ ಮಹತ್ವದ ಅಂಶ. ರಾಮಚಂದ್ರ ಅವರು ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಅಪೂರ್ವ ಚಿತ್ರ ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’. ಇದು ಅವರಿಗೆ ಭಾರೀ ಹೆಸರು ತಂದು ಕೊಟ್ಟಿತ್ತು. ಸತ್ಯಜಿತ್ ರೇ ಅವರ ಸಿನಿಮಾಗಳ ಖಾಯಂ ಛಾಯಾಗ್ರಾಹಕ ಸುಬ್ರತೋ ಮಿತ್ರಾ ಅವರಿಂದ ಪ್ರಭಾವಿತರಾಗಿದ್ದ ರಾಮಚಂದ್ರರದ್ದು ನೈಜ ಶೈಲಿ.
1971ರ ಸಮಯಕ್ಕೆ ಬಂದ ‘ವಂಶವೃಕ್ಷ’ ಚಿತ್ರದಲ್ಲಿ ರಾಮಚಂದ್ರರು ಸಹಾಯಕ ಛಾಯಾಗ್ರಾಹಕರಾಗಿದ್ದರು. 1972ರಲ್ಲಿ ತೆರೆಕಂಡ ನಂಜರಾಜ ಅರಸ್ ಅವರ ‘ಸಂಕಲ್ಪ’ ರಾಮಚಂದ್ರರು ಸ್ವತಂತ್ರರಾಗಿ ಛಾಯಾಗ್ರಾಹಣ ಮಾಡಿದ ಪ್ರಥಮ ಚಿತ್ರ. 1977ರಲ್ಲಿ ತೆರೆಕಂಡ ‘ಋಷ್ಯಶೃಂಗ’ ಚಿತ್ರಕ್ಕೆ ರಾಮಚಂದ್ರರಿಗೆ ರಾಷ್ಟ್ರಪ್ರಶಸ್ತಿ ಸಂದಿತು. ಮುಂದೆ ‘ಸಾವಿತ್ರಿ’, ‘ಚೋಮನದುಡಿ’, ‘ಘಟಶ್ರಾದ್ಧ’. ‘ಅನ್ವೇಷಣೆ’, ‘ಪಲ್ಲವಿ’, ‘ಮನೆ’, ‘ಗೀಜಗನಗೂಡು’, ‘ಗ್ರಹಣ’, ‘ಆಕ್ರಮಣ’, ‘ಸಂತ ಶಿಶುನಾಳ ಶರೀಫ’, ‘ಪರಸಂಗದ ಗೆಂಡೆತಿಮ್ಮ’, ‘ಹೊಂಬಿಸಿಲು’, ‘ಬಂಗಾರದ ಜಿಂಕೆ’, ‘ಎಲ್ಲಿಂದಲೋ ಬಂದವರು’, ‘ಭುಜಂಗಯ್ಯನ ದಶಾವತಾರ’, ‘ಸಂಗೀತ’, ‘ಅವಸ್ಥೆ’, ‘ದೇವೀರಿ’, ‘ನಾಯಿ ನೆರಳು’, ‘ಮಲೆಯ ಮಕ್ಕಳು’, ‘ವಿಮುಕ್ತಿ’, ‘ಮುಖಪುಟ’, ‘ಕ್ರೌರ್ಯ’, ‘ಬೇರು’, ‘ಹಸೀನಾ’, ‘ಗುಲಾಬಿ ಟಾಕೀಸ್‌’, ‘ಬ್ಯಾಂಕರ್ ಮಾರ್ಗಯ್ಯ’, ‘ಮುದುಡಿದ ತಾವರೆ ಅರಳಿತು’, ‘ಉಂಡುಹೋದ ಕೊಂಡು ಹೋದ’, ‘ಗಂಧರ್ವಗಿರಿ’, ‘ಅಲೆಮಾರಿ’, ‘ವಾತ್ಸಲ್ಯಪಥ’, ‘ಕಾಡ ಬೆಳದಿಂಗಳು’ ಹೀಗೆ ರಾಮಚಂದ್ರರು ಸುಮಾರು 75 ಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ವಿಶೇಷವೆಂಬಂತಹ ಆಹ್ವಾನಗಳು ಬಂದಾಗ ಇತರ ಭಾಷೆಗಳಲ್ಲೂ ಅದ್ಬುತ ಕಾರ್ಯ ಮಾಡಿಬಂದಿದ್ದರು. ಹಿಂದಿಯ ಜನಪ್ರಿಯ ‘ಯಾದೇ’ ಚಿತ್ರದಲ್ಲಿನ ಛಾಯಾಗ್ರಹಣ ಅವರ ಅಪೂರ್ವ ರೀತಿಯ ಕೆಲಸಕ್ಕೆ ಮತ್ತೊಂದು ಸಾಕ್ಷಿಯಂತಿದೆ. ಶಂಕರ್‌ನಾಗ್‌ ನಿರ್ದೇಶನದ ಹಿಂದಿಯ ‘ಮಾಲ್ಗುಡಿ ಡೇಸ್‌’ ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಳ್ಳು-ಬೆಲ್ಲ ಸೇವನೆ ಮಾಡುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

Tue Jan 10 , 2023
ಇನ್ನೇನು ಸಂಕ್ರಾಂತಿ ಬಂದೇ ಬಿಡ್ತು. ವರ್ಷದ ಮೊದಲ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಹಬ್ಬದಂದು ಎಳ್ಳು-ಬೆಲ್ಲ ಒಟ್ಟಿಗೆ ಸೇವಿಸುವ ರೂಢಿ ಮೊದಲಿನಿಂದಲೂ ನಡೆದು ಬಂದಿದೆ. ಆದ್ರೆ ವೈಜ್ಞಾನಿಕವಾಗಿ ಇದರ ಪ್ರಯೋಜನ ಏನೆಂದು ನೋಡಿ.. ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ ವಾತಾವರಣದಲ್ಲಿ ಚಳಿ ಏರುತ್ತಾ ಹೋಗುತ್ತದೆ. ಅಂತಹ ಸಮಯದಲ್ಲಿ ಚರ್ಮಕ್ಕೆ ಕೊಬ್ಬಿನ ಅಂಶದ ಅಗತ್ಯ ಹೆಚ್ಚು. ಚರ್ಮಕ್ಕೆ ಅಗತ್ಯವಿರುವ ಎಣ್ಣೆ ಹಾಗು ಪೋಷಕಾಂಶ ಒದಗಿಸುವಲ್ಲಿ ಎಳ್ಳು ಸಹಕಾರಿ. ಎಳ್ಳಿನ ಸೇವನೆ ಆರೋಗ್ಯಕ್ಕೆ […]

Advertisement

Wordpress Social Share Plugin powered by Ultimatelysocial