ನಾನೂ ತರಕಾರಿ ಮಾರುಕಟ್ಟೆ ನಿರ್ಮಿಸುವೆ: ಸತೀಶ ಜಾರಕಿಹೊಳಿ

ಬೆಳಗಾವಿ: ‘ನಗರದಲ್ಲಿ ನಾನೂ ಒಂದು ಸಗಟು ತರಕಾರಿ ಮಾರುಕಟ್ಟೆ ನಿರ್ಮಿಸಲಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಗರದಲ್ಲಿ ನಿರ್ಮಿಸಲಾಗಿರುವ ಖಾಸಗಿ ಸಗಟು ತರಕಾರಿ ಮಾರುಕಟ್ಟೆಗೆ ಸರ್ಕಾರದಿಂದ ಕಾನೂನುಬದ್ಧವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸರ್ಕಾರಿ ಎಪಿಎಂಸಿಯ ವರ್ತಕರು ಗೊಂದಲಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು. ‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿ ಮೇಲೆ ಕಾನೂನಿನ ಮೂಲಕ ಬಲ ಪ್ರಯೋಗ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆದಿರುವುದು ದೇಶದಲ್ಲೇ ಹೊಸ ಪ್ರಯೋಗವಾಗಿದೆ. ಸದ್ಯದ ಸ್ಥಿತಿಯಲ್ಲಿ ಎರಡು ಮಾರುಕಟ್ಟೆಗಳೂ ಅಧಿಕೃತವಾಗಿವೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ವರ್ತಕರ ಸಮಸ್ಯೆ ಬಗೆಹರಿಸಬೇಕಾಗುತ್ತದೆ’ ಎಂದು ತಿಳಿಸಿದರು. ‘ನಮ್ಮ ಮಂದಿಯನ್ನು ಉಳಿಸುವುದಕ್ಕಾಗಿ ವರ್ತಕರಿಗೆ ಮಳಿಗೆಗಳನ್ನು ನೀಡಲು ಪರ್ಯಾಯವಾಗಿ ಮಾರುಕಟ್ಟೆ ಕಟ್ಟಿಕೊಡಲು ನಿರ್ಧರಿಸಿದ್ದೇನೆ. ಅವರನ್ನು ಉಳಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನನ್ನು ನಂಬಿ ಮಳಿಗೆಗಳಿಗಾಗಿ ಹಣ ಹಾಕಿದ್ದಾರೆ. ಸರ್ಕಾರ ಈಗ ಆ ಹಣ ವಾಪಸ್‌ ಕೊಡುವಂತೆ ಪಟ್ಟು ಹಿಡಿದಿದ್ದಾರೆ. 2-3 ಕಡೆಗಳಲ್ಲಿ ಜಾಗ ನೋಡಿದ್ದೇವೆ. ₹ 30 ಲಕ್ಷದಿಂದ ₹ 40 ಲಕ್ಷದಲ್ಲಿ ಮಾರುಕಟ್ಟೆ ನಿರ್ಮಿಸುತ್ತೇವೆ’ ಎಂದು ಮಾಹಿತಿ ನೀಡಿದರು. ‘ಅನಧಿಕೃತ ಎಂದು ಹೇಳಿದ್ದವರೇ ಖಾಸಗಿ ಮಾರುಕಟ್ಟೆಗೆ ಅನುಮತಿ ಕೊಡಿಸಿ, ಉದ್ಘಾಟನೆ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಇಗ್ನೋ ಕೋರ್ಸ್‌ಗಳ: ಪ್ರವೇಶ ಪ್ರಾರಂಭ

Fri Feb 4 , 2022
ಬೆಳಗಾವಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಯ(ಇಗ್ನೋ)ದಲ್ಲಿ 2020ನೇ ಸಾಲಿನಲ್ಲಿ ದೂರ ಶಿಕ್ಷಣದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.’ನಗರದ ಆರ್.ಪಿ.ಡಿ. ಕಾಲೇಜಿನಲ್ಲಿ ಅಧ್ಯಯನ ಕೇಂದ್ರವಿದೆ.ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಹಾಗೂ ಡಿಪ್ಲೊಮಾ ಜೊತೆಗೆ ಎಂ.ಕಾಂ., ಎಂಬಿಎ, ಎಂಸಿಎ, ಬಿ.ಸಿ.ಎ., ಎಂ.ಎ. ಸೇರಿದಂತೆ 58 ವಿವಿದ ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಎಲ್ಲ ಕೋರ್ಸ್‌ಗಳ ಶುಲ್ಕದಲ್ಲಿ ರಿಯಾಯತಿ ದೊರೆಯಲಿದೆ. ಅನೇಕ ಕೋರ್ಸ್‌ಗಳು ಪರಿಶಿಷ್ಠ ಜಾತಿ ಹಾಗೂ […]

Advertisement

Wordpress Social Share Plugin powered by Ultimatelysocial