ಪತಿಯೂ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ

 

ಚಿತ್ರದುರ್ಗ: ಪತಿಯೂ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆ ಪೈಕಿ ಪತಿ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಚಿತ್ರದುರ್ಗ ನಗರದ ಚೋಳಗುಡ್ಡ ನಿರ್ಜನ ಪ್ರದೇಶದಲ್ಲಿ 17 ವರ್ಷದವಳೊಬ್ಬಳ ಮೇಲೆ ಈ ನಾಲ್ವರು ಅತ್ಯಾಚಾರ ಎಸಗಿದ್ದಾರೆ.

ಇದರಲ್ಲಿ ಈಕೆಯನ್ನು ಮದುವೆಯಾಗಿದ್ದವನೇ ಭಾಗಿಯಾಗಿರುವುದು ವಿಪರ್ಯಾಸ. ಈತ ಒಂದು ವರ್ಷದ ಹಿಂದೆ ಬೆದರಿಸಿ ಮದುವೆಯಾಗಿರುವ ಆರೋಪವಿದೆ.

ಪತಿ ಶಹಬಾಜ್ (28), ದಾದಾಪೀರ್ (20) ಬಂಧಿತ ಆರೋಪಿಗಳು. ಮದುವೆ ಬಳಿಕ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದವ, ಜೂನ್ 7ರಂದು ನಗರದ ಹೊರವಲಯಕ್ಕೆ ಕರೆದೊಯ್ದು ಮೂವರು ಸ್ನೇಹಿತರ‌ ಜತೆಗೂಡಿ ಹಲ್ಲೆ ಮಾಡಿದ್ದಲ್ಲದೆ, ಗ್ಯಾಂಗ್ ರೇಪ್ ಮಾಡಿರುವ ಆರೋಪವಿದೆ. ಅಲ್ಲದೆ ದೂರು ನೀಡದಂತೆ ಕೊಲೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಸರ್ಕಾರಕ್ಕೆ ಕುಮಾರಣ್ಣ ಕೊಟ್ಟ 'ಕರೆಂಟ್' ಶಾಕ್

Tue Jun 28 , 2022
ಬೆಂಗಳೂರು, ಜೂನ್ 28: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯು ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಈಗ ಬೆಲೆಯನ್ನು ಹೆಚ್ಚಿಸುವ ಸರ್ಕಾರ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ದರ ಇಳಿಸುವ ಸಾಹಸ ಮಾಡುವುದಕ್ಕೆ ಸ್ಕೆಚ್ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಎಚ್. ಡಿ. ಕುಮಾರಸ್ವಾಮಿ, ವೆಚ್ಚ ಮತ್ತು ಹೊಂದಾಣಿಕೆಯ ಹೊಸ ಐಡಿಯಾ ಎಂದರೆ ಇದೇನಾ ಎಂದು ಪ್ರಶ್ನೆ […]

Advertisement

Wordpress Social Share Plugin powered by Ultimatelysocial