ಬಂಜಾರ ಸಮುದಾಯದ ಬೇಡಿಕೆ ಈಡೇರಿಸುವಂತೆ ರಾಷ್ಟ್ರಪತಿಗೆ ಮನವಿ!

 

ಬೆಂಗಳೂರು,ಏ.5- ಬಂಜಾರ ಸಮುದಾಯದ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಮತ್ತು ಸೂಕ್ತ ಪ್ರಾತಿನಿಧ್ಯ ನೀಡುವ ಸಂಬಂಧ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಿ. ರಾಮನಾಯಕ ಮತ್ತು ಪದಾಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು, ರಾಷ್ಟ್ರೀಯ ತಾಂಡ ಅಭಿವೃದ್ಧಿ ನಿಗಮದ ರಚನೆ, ಹಿಂದುಳಿದ ಜಾತಿ-ಪಂಗಡಗಳಲ್ಲಿರುವ ಇತರ ರಾಜ್ಯಗಳಲ್ಲಿನ ಬಂಜಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು.

ದೇಶದ ಎಲ್ಲ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವುದು, ಜನಗಣತಿಯ ಸಂದರ್ಭದಲ್ಲಿ ಸಮನಾರ್ಥಕ ಹೆಸರುಗಳನ್ನು ‘ಬಂಜಜಾರ’ ಹೆಸರಿನ ವ್ಯಾಪ್ತಿಯಲ್ಲಿ ತರುವುದು, ನವದೆಹಲಿಯ ಒಂದು ಮಾರ್ಗಕ್ಕೆ ಲಕ್ಕಿ ಷಾ ಬಂಜಾರ ಅವರ ಹೆಸರಿಡುವುದು ಹಾಗೂ ಅವರ ಮೂರ್ತಿ ಸ್ಥಾಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಇವುಗಳ ಅಗತ್ಯ ಬಗ್ಗೆ ರಾಷ್ಟ್ರಪತಿಗಳಿಗೆ ಸುಮಾರು 20 ನಿಮಿಷಗಳಿಗೆ ಹೆಚ್ಚು ಕಾಲ ಸವಿಸ್ತರವಾಗಿ ಮನದಟ್ಟು ಮಾಡಿಕೊಟ್ಟಲಾಯಿತು ಎಂದು ರಾಮನಾಯಕ್ ತಿಳಿಸಿದ್ದಾರೆ. ರಾಷ್ಟ್ರಪತಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಸಮಸ್ತ ದೇಶದ ಬಂಜಾರ ಸಮುದಾಯದ ಪರವಾಗಿ ಧನ್ಯವಾದ ಹಾಗೂ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಿಯೋಗದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಪೃಥ್ವಿಸಿಂಗ್ ರಾಥೋಡ್, ಕಾರ್ಯದರ್ಶಿ ತುಕಾರಾಂ ಪವಾರ್ ಸೇರಿದಂತೆ ಮತ್ತಿತರರು ಇದ್ದರು.
ಇಂತಹ ಕೆಲಸವನ್ನು ಸಮುದಾಯದಿಂದ ಇದುವರೆಗೆ ಬಂದು ಹೋದ ಮುಖ್ಯಮಂತ್ರಿಗಳು, ಸಂಸದರೂ ಸಹ ಮಾಡಿಲ್ಲ ಎಂಬುದು ಸೂಚನೀಯ ಸಂಗತಿ ಎಂದು ಬರಹಗಾರ ಹಾಗೂ ಚಿಂತಕ ಡಾ.ಎ.ಆರ್. ಗೋವಿಂದಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಜ್‍ವೆಸ್ಟ್ ಎಂಡ್ ಹೊಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ!

Tue Apr 5 , 2022
ಬೆಂಗಳೂರು,ಏ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಆರ್‌ಎಸ್‌ಎಸ್‌ ನಿಯಂತ್ರಣ ಮಾಡುತ್ತಿದೆ ಎಂದು ಹೇಳುವ ನೀವು ಪದ್ಮನಾಭನಗರದ ಅಣತಿ ಇಲ್ಲದೆ ಯಾವ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಸಿ ಎಂ.ಪಿ.ರೇಣುಕಾಚಾರ್ಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಶ್ರೀಮಂತರ ಪಕ್ಷ ಎನ್ನುವುದಾದದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಅಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತೀರಾ? ತಾಜ್‍ವೆಸ್ಟ್ ಎಂಡ್ ಹೊಟೆಲ್ ಅನ್ನೇ […]

Advertisement

Wordpress Social Share Plugin powered by Ultimatelysocial