ರಾತ್ರಿ ಗುಡಿಸಲುಗಳಿಗೆ ಬೆಂಕಿ‌ ಹಚ್ಚಿದ ದುಷ್ಕರ್ಮಿಗಳು ಜಮೀನು ಕಬಳಿಸಲು ಬೆಂಕಿ ಹಚ್ಚಿರುವ ಅನುಮಾನ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕನಕೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ‌ ದುಷ್ಕರ್ಮಿಗಳು ಗುಡಿಸಲುಗಳಿಗೆ‌ ಬೆಂಕಿ ಹಚ್ಚಿದ್ದು, ಜಮೀನು ಕಬಳಿಸುವ ಸಂಚಿನಿಂದ ಬಲಾಡ್ಯರು ಈ ಕೃತ್ಯ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ..

ವಸತಿ‌ ಸೌಲಭ್ಯ ಕಲ್ಪಿಸಿಕೊಡುವಂತೆ 20ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದ‌ ಸರ್ಕಲ್ ಬಳಿ ಇರುವ ಸರ್ಕಾರಿ ಭೂಮಿಯಲ್ಲಿ‌ ಗುಡಿಸಲು ಹಾಕಿಕೊಂಡಿದ್ದರು. ನಿವೇಶನ ನೀಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ‌ ಹಲವು ಬಾರಿ ಮನವಿ ಸಲ್ಲಿಸಿದ್ರು.. ಇದೇ ವಾರದಲ್ಲಿ ತಾಲೂಕು ಕಚೇರಿ ಮುಂದೆ‌ ಪ್ರತಿಭಟನೆ‌ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಕೂಡ‌ ಸಲ್ಲಿಸಿದ್ರು..
ಮಂಗಳವಾರ ರಾತ್ರಿ ಕೆಲ‌ ದುಷ್ಕರ್ಮಿಗಳು ಎಲ್ಲ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಗುಡಿಸಲುಗಳಲ್ಲಿ ಯಾರೂ ವಾಸವಿರಲಿಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸರ್ಕಾರಿ ಜಮೀನು ಲಪಟಾಯಿಸಲು ಸಂಚು‌ ನಡೆದಿದೆ‌ ಎಂಬುದನ್ನು ತಿಳಿದ‌ ಮೇಲೆ ಇಲ್ಲಿ ನಿವೇಶನ ರಹಿತರು ಗುಡಿಸಲು ಹಾಕಿಕೊಂಡು‌ ವಸತಿ ಸೌಲಭ್ಯಕ್ಕೆ ಆಗ್ರಹಿಸಿದ್ರು.. ಸರ್ಕಾರಿ ಜಮೀನನ ಮೇಲೆ ಕಣ್ಣಿಟ್ಟಿದ್ದ ಕೆಲವು ಬಲಾಡ್ಯರೇ‌ ಈ ಕೃತ್ಯ‌ ಮಾಡಿಸಿರಬಹುದು‌ ಎಂದು ಗ್ರಾಮಸ್ಥರು‌ ಆರೋಪಿಸುತ್ತಿದ್ದಾರೆ. ಶಾಸಕ‌‌ ಟಿ.ವೆಂಕಟರಮಣಯ್ಯ ಅವರ ಗ್ರಾಮದ ಪಕ್ಕದಲ್ಲೇ ಈ ದುಷ್ಕೃತ್ಯ‌ ನಡೆದಿದೆ. ತಕ್ಷಣವೇ ದುಷ್ಕರ್ಮಿಗಳನ್ನು‌ ಪತ್ತೆಹಚ್ಚಿ ನಮಗೆ ನ್ಯಾಯ‌ ದೊರಕಿಸಿಕೊಡಬೇಕು ಎಂದು‌ ಇಲ್ಲಿ ಗುಡಿಸಲು ಹಾಕಿಕೊಂಡಿದ್ದ‌ ಕುಟುಂಬಗಳು‌ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಐಡಿ ಅಧಿಕಾರಿಗಳ ಮುಂದೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಪ್ರಭು ಹೇಳಿಕೆ!

Thu May 5 , 2022
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಿಐಡಿ ಅಧಿಕಾರಿಗಳ ತನಿಖೆ ,ಆರೋಪಿಗಳನ್ನ ಅರೆಸ್ಟ್ ಮಾಡಿರೋದನ್ನ ನೋಡಿ‌ಯೆ ಬೆಚ್ಚಿ ಬಿದ್ದಿದ್ದ ಪ್ರಭು ಎಮ್ ಎಸ್ ಐ ಇರಾನಿ ಕಾಲೇಜ್‌ನಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಪಾಸ್ ಆಗಿದ್ದ ಪ್ರಭು ಇಂದಲ್ಲ ನಾಳೆ ನನ್ನನ್ನು ಅರೆಸ್ಟ್ ಮಾಡ್ತಾರೆ ಅಂತಾ ಮನಸಲ್ಲೆ‌ ಕೊರಗ್ತಿದ್ದನಂತೆ ಪ್ರಭು ಸರಿಯಾಗಿ ಊಟವು ಮಾಡ್ತಿರಲಿಲ್ಲ , ನಿದ್ದೆನು ಬರ್ತಿರಲಿಲ್ಲವಂತೆ ನೀವು ನನ್ನ ಅರೆಸ್ಟ್ ಮಾಡೋದು ಗ್ಯಾರೆಂಟಿ ಅಂತಾ ಅಂದುಕೊಂಡಿದ್ದೆ ನಾನು ತಪ್ಪು ಮಾಡಿರೋದಕ್ಕೆ […]

Advertisement

Wordpress Social Share Plugin powered by Ultimatelysocial