ಉದ್ಯಮಿಗಳೆಂದರೆ ರಿಯಲ್ ಎಸ್ಟೇಟ್ ಅಲ್ಲ.

 

ಉದ್ಯಮಿಗಳೆಂದರೆ ರಿಯಲ್ ಎಸ್ಟೇಟ್ ಅಲ್ಲ. ಸಬ್ಸಿಡಿ ಪಡೆಯುವುದಲ್ಲ. ಉದ್ಯೋಗಗಳನ್ನು ಸೃಷ್ಠಿಸುವಂತಾಗ ಬೇಕು,ಸರ್ಕಾರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಲವಾರು ಯೋಜನೆಗಳಿವೆ ಅದರೆ ಇವುಗಳನ್ನು ನಾವು ಎಷ್ಟು ಮಾತ್ರ ಸದ್ಬಳಿಸಿ ಕೊಳ್ಳುತ್ತಿವೆ ಎಂಬುದರ ಕುರಿತು ಚಿಂತಿಸುವಂತಾಗ ಬೇಕು ಎಂದು ಸಹಕಾರ ಸಂಘಗಳ ಚುನಾವಣಾ ಆಯುಕ್ತ ಎನ್.ಸಿ.ಮುನಿಸ್ವಾಮಿ ವಹಿಸಿ ಮಾತನಾಡಿದರು.ದಲಿತ್ ಇಂಡಿಯನ್ ಚೆಂಬರ್ ಆಫ್ ಕಾಮರ್‍ಸ್ ಅಂಡ್ ಇಂಡಸ್ಟ್ರಿವತಿಯಿಂದ ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಉದ್ಯಮಿದಾರರ ಜಿಲ್ಲಾ ಸಮಾವೇಶವನ್ನು ಅಧ್ಯಕ್ಷತೆವಹಿಸಿ ಅವರು ಮಾತನಾಡಿಇಂದಿನ ೪೬ ಸಾವಿರ ಕೋಟಿ ರೂ ಬಜೆಟ್‌ನಲ್ಲಿ ದಲಿತರಿಗೆ ಶೇ ೧ ರಷ್ಟು ಅನುವುಂಟಾಗಿಲ್ಲ. ಭೂಮಿ ಪಡೆದ ಮಾತ್ರಕ್ಕೆ ಉದ್ಯಮಿಗಳಾಗಲು ಸಾಧ್ಯವಿಲ್ಲ. ಪದವಿ ಪಡೆದವರಿಗೆ ಉದ್ಯೋಗ ಇಲ್ಲ, ಬ್ಯಾಕ್ ಲಾಗ್ ಇಲ್ಲ. ಖಾಸಗೀಕರಣದಲ್ಲಿ ಮೀಸಲಾತಿ ಇಲ್ಲದೆ ಎಲ್ಲಾ ಹುದ್ದೆಗಳು ಭರ್ತಿಯಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸುಮಾರು ೧೨ ಕೋಟಿ ದಲಿತ ಕುಟುಂಬಗಳು ಬೀದಿಪಾಲಾಯಿತು, ನಿಜವಾದ ದಲಿತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದರು.ಭಾರತವು ವಿಶ್ವದಲ್ಲಿ ೬ನೇ ಶ್ರೀಮಂತರಾಷ್ಟ್ರವಾಗಿದೆ. ಸುಮಾರು ೧೬೩ ಮಂದಿ ಬಿಲಿಯನ್‌ರ್‍ಸ್‌ಗಳಿದ್ದಾರೆ. ಅದರೆ ಇದರಲ್ಲಿ ಓರ್ವ ದಲಿತ ವರ್ಗದವರು ಬಿಲಿಯನ್‌ರ್‍ಸ್‌ಗಳಿಲ್ಲ. ೫ ಕೋಟಿ ರೂ ಅದಾಯ ತೆರಿಗೆ ಪಾವತಿಸುವಂತ ದಲಿತರು ಭಾರತದಲ್ಲಿ ಇಲ್ಲ. ರಾಜಕಾರಣಿಗಳು ರೋಚಕ,ರಂಜನೀಯ, ವೈಭವೀಕರಣವಾಗಿ ವೇದಿಕೆಗಳಲ್ಲಿ ಭಾಷಣಗಳು ಮಾಡಿ ತಮ್ಮ ಬೆನ್ನು ತಾವೇ ತಟ್ಟಿ ಕೊಳ್ಳುತ್ತಿದ್ದಾರಷ್ಟೆ ಅದರೆ ವಾಸ್ತಾವಿಕೆ ಬಗ್ಗೆ ನೇರವಾಗಿ ಸಂವಾದ ಚರ್ಚೆಗಳಾಗ ಬೇಕಾಗಿದೆ, ದಲಿತರು ಇಂದಿಗೂ ಸಾಲಕ್ಕಾಗಿ ಪರದಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರುದಲಿತರ ಸಬಳೀಕರಣಕ್ಕೆ ಪೂರಕವಾಗಿ ಸಂಶೋಧನೆಗಳನ್ನು ಮಾಡಿ ೪ ಪುಸ್ತಕಗಳನ್ನು ಬರೆದಿರುವುದಾಗಿ ತಿಳಿಸಿದ ಅವರು ದಲಿತ ವರ್ಗದವರಿಗೆ ಶೇ ೭೫ ರಷ್ಟು ಸಬ್ಸಿಡಿ ಪಡೆಯುವಂತ ಯೋಜನೆಗಳನ್ನು ಸರ್ಕಾರವು ನೀಡಿದೆ.ದಲಿತರ ಹಕ್ಕುಗಳಿಗೆ ಒತ್ತಾಯಿಸ ಬೇಕು. ಸೂಕ್ತವಾದ ಸ್ಥಳಗಳಲ್ಲಿ ಸಮಯದಲ್ಲಿ ಮಂಡಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕು ಎಂದರು,
ಈ ಹಿಂದೆ ಕಾರ್ಯನಿರ್ವಹಿಸಿದ ಸರ್ಕಾರದಲ್ಲಿ ಉನ್ನತವಾದ ವಿವಿಧ ಹುದ್ದೆಗಳಲ್ಲಿನ ಅನುಭವಗಳನ್ನು ಸಮಾವೇಶದಲ್ಲಿ ಹಂಚಿ ಕೊಳ್ಳುವ ಮೂಲಕ ವಿಶೇಷವಾದ ಅರಿವುಂಟು ಮಾಡಿ ತಾವು ರಚಿಸಿರುವ ಪುಸ್ತಕವನ್ನು ಸಭೆಯಲ್ಲಿ ಉಚಿತವಾಗಿ ವಿತರಿಸಿದರು ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ ದಲಿತರು ಅರ್ಥಿಕವಾಗಿ ಸ್ವಾವಲಂಭಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಈ ಸಂಸ್ಥೆಯಿಂದ ದಲಿತ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ರವಾನಿಸುವಂತೆ ಕಾರ್ಯನಿರ್ವಹಿಸುವಂತಾಗ ಬೇಕು ಎಂದು ಕರೆ ನೀಡಿದರು.ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿ ಪಡೆಯಲು ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಇರುವಂತ ನಿಯಮಗಳು ಕ್ಲಿಷಕರವಾಗಿದ್ದು ನಾವುಗಳು ಶಾಸಕರಾಗಿದ್ದ ಅವಧಿಯಲ್ಲೇ ಸಾಲ ಹಾಗೂ ಸಬ್ಸಿಡಿ ಪಡೆಯಲು ಸಾಧ್ಯವಾಗಲಿಲ್ಲ. ಬ್ಯಾಂಕ್‌ಗಳು ಸಾಲಕ್ಕೆ ಸೆಕ್ಯೂರಿಟಿ ಇಲ್ಲದೆ ನೀಡುವುದಿಲ್ಲ ಸರ್ಕಾರದ ಒತ್ತಡ ಮತ್ತು ಆದೇಶಗಳಿಗೆ ಬ್ಯಾಂಕ್‌ಗಳು ಕಿಮ್ಮತ್ತಿನ ಬೆಲೆಯೂ ನೀಡುವುದಿಲ್ಲ ಎಂದು ಅನುಭವನ್ನು ಹಂಚಿಕೊಂಡರು ಡಿ.ಐ.ಸಿ.ಸಿ.ಐ ರಾಷ್ಟ್ರೀಯ ಉಪಾಧ್ಯಕ್ಷ ಡಾ.ರಾಜಾ ನಾಯಕ್ ಮಾತನಾಡಿ ದಲಿತ ವರ್ಗವು ಅರ್ಥಿಕವಾಗಿ ಸಧೃಡರಾದರೆ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳಲ್ಲಿ ದಲಿತ ವರ್ಗದವರು ಉದ್ಯಮಿಗಳಾಗಲು ಇದ್ದ ಅಡೆತಡೆಗಳನ್ನು ಪರಿಹರಿಸಿ ಕೊಳ್ಳಲು ಪರ್ಯಾಯವಾಗಿ ಡಿಕ್ಕಿಯನ್ನು ಪ್ರಾರಂಭಿಸಲಾಯಿತು, ಸ್ಟಾಂಡ್ ಅಪ್ ಇಂಡಿಯಾ ಹಾಗೂ ಮುದ್ರಾ ಯೋಜನೆಗಳು, ಕೆ.ಎಸ್.ಐ.ಡಿ.ಸಿ. ಮತ್ತು ಕೆ.ಎಸ್.ಎಫ್.ಸಿ. ಹಾಗೂ ಬ್ಯಾಂಕ್‌ಗಳಲ್ಲಿ ಸಾಲದ ವ್ಯವಸ್ಥೆಗಳಲ್ಲಿ ಇತಿಮಿತಿಗಳು, ಸಹಾಯ ಧನ, ಮಾರ್ಜಿನ್ ಮನಿ ಇತ್ಯಾದಿಗಳ ಬಗ್ಗೆ ಇರುವ ಸಮಸ್ಯೆಗಳನ್ನು ವಿವರಿಸಿದರು,
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಕ ಪಿಚ್ಚಯ್ಯ ರಾಪುರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಎಸ್.ಮಂಜುನಾಥ, ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕ ಕೆ.ಅಮರೇಶ, ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಬಿ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು ಜಿಲ್ಲಾ ಸಂಯೋಜಕ ಎಸ್.ನಾರಾಯಣಸ್ವಾಮಿ ಪ್ರಸ್ತಾವನೆ ನುಡಿಗಳಾಡಿ, ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕರಾವಳಿಯಾದ್ಯಂತ ಮಂಜು ಮುಸುಕಿದ ವಾತಾವರಣ.

Thu Feb 23 , 2023
ಕಾಪು: ಕರಾವಳಿಯಾದ್ಯಂತ ಗುರುವಾರ ಮುಂಜಾನೆ ಭಾರೀ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಈ ಬಾರಿ ಚಳಿಗಾಲದುದ್ದಕ್ಕೂ ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದ್ದು ಚಳಿಯ ಕಾರಣದಿಂದಾಗಿ ಎಲ್ಲೆಡೆ ಮುಸುಕಿದ ವಾತಾವರಣ ಕಂಡು ಬಂದಿದೆ.ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಡಕುಂಟಾಗಿದೆ.ಸೂರ್ಯೋದಯದ ವೇಳೆಯಲ್ಲಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.ಅನಿರೀಕ್ಷಿತವಾಗಿ ಕಾಣಿಸಿಕೊಂಡಿರುವ ಮಂಜು […]

Advertisement

Wordpress Social Share Plugin powered by Ultimatelysocial