ಕಿಮ್‌ ಜಾಂಗ್‌ ಉನ್‌:ಉತ್ತರ ಕೊರಿಯಾ ಸರ್ವಾಧಿಕಾರಿ ಕುರಿತು ಸಂಗತಿ;

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾನೆ. ಆತನ ವಿಚಿತ್ರ ಸ್ವಭಾವ, ಜನರನ್ನು ಗೋಳು ಹೊಯ್ದುಕೊಳ್ಳುವ ರೀತಿ, ಸೇನಾಧಿಕಾರಿಗಳ ಗೌಪ್ಯ ಹತ್ಯೆ ಸಂಬಂಧ ಆತ ಸುದ್ದಿಯಲ್ಲಿಇದ್ದೇ ಇರುತ್ತಾನೆ.

ಈ ಬಾರಿ ಆತನ ಖಾಸಗಿ ಶೌಚಾಲಯದ ಕುರಿತು ವಿಶೇಷ ಹಾಗೂ ಭಯಹುಟ್ಟಿಸುವ ಸುದ್ದಿ ಬಯಲಾಗಿದೆ.

ತನ್ನ ಸಂಚಾರಕ್ಕಾಗಿ ಕಿಮ್‌ ಬಳಸುವುದು ಮರ್ಸಿಡಿಸ್‌ ಬೆಂಜ್‌ ಕಂಪನಿಯ ಸಾಲು ಸಾಲು ಕಾರುಗಳನ್ನು. ಅವುಗಳಲ್ಲಿ ಹಲವು ಖಾಲಿ ಇರುತ್ತವೆ. ವೈರಿಗಳಿಗೆ ತಾನು ಯಾವ ಕಾರಲ್ಲಿ ಕುಳಿತಿದ್ದೇನೆ ಎಂದು ತಿಳಿಯಬಾರದು ಎಂದು ಬೆಂಜ್‌ ಕಾರುಗಳನ್ನು ಒಂದೇ ರೀತಿಯಾಗಿ ಇರಿಸಿದ್ದಾನೆ. ಒಂದೇ ನಂಬರ್‌ ಪ್ಲೇಟ್‌, ಒಂದೇ ರೀತಿಯ ಬಣ್ಣದ ಸುಮಾರು 10ಕ್ಕೂ ಹೆಚ್ಚು ಕಾರುಗಳಿವೆ.

ಆದರೆ, ವಿಚಾರದ ಅದಲ್ಲ. ಈ ಸಾಲುಸಾಲು ಕಾರುಗಳ ಪೈಕಿ ಒಂದರಲ್ಲಿ ಕಿಮ್‌ ಬಳಸುವ ಖಾಸಗಿ ಟಾಯ್ಲೆಟ್‌ ಇದೆ ! ಹೌದು, ಕಾರನ್ನೇ ಶೌಚಾಲಯದ ರೀತಿಯಲ್ಲಿ ಮಾರ್ಪಡಿಸಿದ್ದಾನೆ. ಇದರಲ್ಲಿ ತನ್ನ ಮಲ-ಮೂತ್ರಗಳನ್ನು ಶೇಖರಿಸಿಡುವ ಹುಚ್ಚು ಚಟ ಈತನದ್ದು. ಅಪ್ಪಿತಪ್ಪಿ ಕೂಡ ಕುಟುಂಬಸ್ಥರು ಅಥವಾ ಬಾಡಿಗಾರ್ಡ್‌ಗಳು ಕಿಮ್‌ನ ಶೌಚಾಲಯ ಬಳಸುವಂತಿಲ್ಲ. ಕಿಮ್‌ ತನ್ನ ಮಲ ಮೂತ್ರವನ್ನು ಇಷ್ಟು ಗುಟ್ಟಾಗಿಡಲು ಕಾರಣವೇನೆಂದರೆ ಇದು ಶತ್ರು ರಾಷ್ಟ್ರಗಳಿಗೆ ಸಿಕ್ಕರೆ ಅದರ ಮೂಲಕ ತನ್ನ ಆರೋಗ್ಯದ ಕುರಿತ ಹಲವು ಸತ್ಯಗಳು ಬಹಿರಂಗವಾಗಬಹುದು ಎಂಬ ಭಯವಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ: ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರ ಯತ್ನ; ಆರೋಪಿ ಬಂಧನ

Sun Jan 30 , 2022
  ವೃದ್ಧನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಳಿಕ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಜನರು ಸ್ಥಳಕ್ಕಾಗಮಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.ಆರೋಪಿ ವೃದ್ಧನನ್ನು ಪೊಲೀಸರು ಬಂಧಿಸಿದ್ದು, ವೃದ್ಧನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial