ಆಂಧ್ರ ಹುಡುಗನನ್ನು ಮದುವೆಯಾದ ಟರ್ಕಿ ಮಹಿಳೆ

ಆಂಧ್ರ ಹುಡುಗನನ್ನು ಮದುವೆಯಾದ ಟರ್ಕಿ ಮಹಿಳೆ: ಗುಂಟೂರಿನಲ್ಲಿ ನಡೆಯಿತು ಸಂಪ್ರದಾಯ ಬದ್ಧ ವಿವಾಹ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ವಿಶೇಷ ಕ್ಷಣ. ಋಣಾನುಬಂಧ ಎನ್ನುವುದು ಎಲ್ಲೊ ಇರುವವರನ್ನು ಇನ್ನೆಲ್ಲೂ ಸೇರಿಸುತ್ತದೆ. ಭಾಷೆ, ದೇಶ, ಜಾತಿ, ಗಡಿ ಈ ರೀತಿಯ ಯಾವುದೇ ಕಟ್ಟುಪಾಡಿಲ್ಲದ ಸುಂದರ ಸಂಬಂಧ ಪ್ರೀತಿ. ಹೀಗಾಗಿ ಕೆಲವರು ಸಂಗಾತಿ ಹುಡುಕಲು ವಿದೇಶಕ್ಕೂ ತೆರಳಬೇಕಾದೀತು.

ಅಂತಹ ಒಂದು ಪ್ರೀತಿಯ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೌದು, ಟರ್ಕಿ ದೇಶದ ಯುವತಿಯೊಬ್ಬಳು ಆಂದ್ರಪ್ರದೇಶದ ಯುವಕನನ್ನು ಭಾರತೀಯ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಆಂದ್ರ ಪ್ರದೇಶದ ಗುಂಟೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಗುಂಟೂರು ಮೂಲದ ವರ ಮಧು ಸಂಕೀರ್ತ್ ಹಾಗೂ ಟರ್ಕಿಯ ವಧು ಜಿಜೆಮ್​ ವಿವಾಹವಾಗಿದ್ದಾರೆ. ಮಧು 2016ರಲ್ಲಿ ಜಿಜೆಮ್​ ಅವರನ್ನು ಭೇಟಿಯಾಗಿದ್ದರು. ಮಧು ಕೆಲಸದ ಪ್ರಯುಕ್ತ ಟರ್ಕಿಗೆ ತೆರಳಿದ ವೇಳೆ ಜಿಜೆಮ್​​ ಪರಿಚಯವಾಗಿದ್ದು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ನಡುವೆ ಸ್ನೇಹ ಬೆಳೆದಿದೆ. ಸದ್ಯ ಈ ದಂಪತಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ನೇಹವಾಗಿ ಕೆಲವೇ ದಿನಗಳಲ್ಲಿ ಅವರಲ್ಲಿ ಪ್ರೀತಿ ಹುಟ್ಟಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇಬ್ಬರ ಮನೆಯಲ್ಲೂ ಪೋಷಕರ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಪೋಷಕರ ಒಪ್ಪಿಗೆ ಪಡೆದು 2019ರಲ್ಲಿ ಮಧು ಹಾಗೂ ಜಿಜೆಮ್​ ನಿಶ್ಷಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ 2020ರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೋನಾ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಇಬ್ಬರೂ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇನ್ನೊಂದು ವಾರ ಕರ್ನಾಟಕದಲ್ಲಿ ವಿಪರೀತ ಚಳಿ; ಅಕಾಲಿಕ ಮಳೆಗೆ ತಮಿಳುನಾಡು ತತ್ತರ

Fri Dec 31 , 2021
ಇಂದು ಮತ್ತು ಜನವರಿ 1ರಂದು ತಮಿಳುನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಜನವರಿ 1 ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಆಂಧ್ರಪ್ರದೇಶದಾದ್ಯಂತ ವ್ಯಾಪಕವಾಗಿ ಮಳೆಯಾಗಲಿದೆಬೆಂಗಳೂರು: 2022 ಬರಲು ಇನ್ನು ಕೇವಲ ಒಂದೇ ದಿನ ಬಾಕಿಯಿದೆ. ಕರ್ನಾಟಕದಲ್ಲಿ ಮಳೆಗಾಲ ಮುಗಿದು ಚಳಿ ಹೆಚ್ಚಾಗಿದೆ. ಜನವರಿ ಮೊದಲ ವಾರದವರೆಗೂ ರಾಜ್ಯಾದ್ಯಂತ ಚಳಿ ಮುಂದುವರೆಯಲಿದೆ. ಇದರ ನಡುವೆ ನೆರೆಯ ರಾಜ್ಯಗಳಾದ ತಮಿಳುನಾಡಿನಲ್ಲಿ ಅಕಾಲಿಕವಾಗಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ಚೆನ್ನೈನಲ್ಲಿ […]

Advertisement

Wordpress Social Share Plugin powered by Ultimatelysocial