ಸಮುದ್ಯತಾ ವೆಂಕಟರಾಮು ಅವರು ಗಮಕ ಕಲಾವಿದೆ.

 

ಸಮುದ್ಯತಾ ವೆಂಕಟರಾಮು ಅವರು ಗಮಕ ಕಲಾವಿದೆಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾದವರು.ಫೆಬ್ರುವರಿ 28 ಸಮುದ್ಯತಾ ಅವರ ಜನ್ಮದಿನ. ಅವರ ತಂದೆ ಮಹಾನ್ ಗಮಕಿಗಳಾಗಿದ್ದ ಸುಬ್ರಾವ್ ಮನೆ ಘಟ್ಟ ಅವರು. ತಂದೆಯವರ ಗಮಕ ವಾಚನ ಕಲೆ ಸಮುದ್ಯತಾ ಅವರ ಮೇಲೂ ಅಪಾರ ಪ್ರಭಾವ ತಂದಿದೆ. ಇವರದು ಸಾಗರ ಸಮೀಪದ ಶೆಡ್ತೀಗೆರೆ ಗ್ರಾಮದಲ್ಲಿನ ಕೃಷಿ ಕುಟುಂಬ. ಬಿ.ಎ ಪದವಿ ಪಡೆದಿರುವ ಇವರು ಗಮಕ ಕಲೆಯ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಮೂಡಿಸಿಕೊಂಡವರು. ಗಮಕ ವಾಚನದ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಇವರ ಕಾವ್ಯ ವಾಚನಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಆಸಕ್ತರನ್ನು ಸೆಳೆದಿವೆ.
ಸಮುದ್ಯತಾ ಅವರು ಅಚ್ಚುಕಟ್ಟಾದ ಆಕರ್ಷಕ ಶೈಲಿಯ ಬರಹಗಳಿಂದಲೂ ಗಮನ ಸೆಳೆದಿದ್ದಾರೆ. ಅನೇಕ ನಿಯತಕಾಲಿಕಗಳಲ್ಲಿ ಇವರ ಬರಹಗಳು ಮೂಡಿವೆ. ಕಥಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ಇವರ ಹವ್ಯಕ ಭಾಷೆಯ ಕಥೆಗೆ ಕೊಡಗಿನ ಗೌರಮ್ಮ ಪ್ರಶಸ್ತಿ ಸಂದಿದೆ.ಸಮುದ್ಯತಾ ಅವರ ಕವನಗಳು ‘ಭಾನುಮತಿಯ ಮುತ್ತುಗಳು’ ಮತ್ತು ‘ಯೋಜನಗಂಧಿಯ ಸ್ವಗತ’ ಎಂಬ ಎರಡು ಕಾವ್ಯ ಸಂಕಲನಗಳಾಗಿ ಪ್ರತಿಷ್ಠಿತ ಅಕ್ಷರ ಪ್ರಕಾಶನದಿಂದ ಪ್ರಕಟಗೊಂಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವತಂತ್ರ ಭಾರತ ಇಂಥಾ ವಚನ ಭ್ರಷ್ಟ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ: ಸಿದ್ದರಾಮಯ್ಯ!

Wed Mar 1 , 2023
ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತನ್ನು ಸ್ಥಳದಲ್ಲಿಯೇ ಮರೆಯುವಂಥಾ ವ್ಯಕ್ತಿ. ಸ್ವತಂತ್ರ ಭಾರತ ಇಂಥಾ ವಚನ ಭ್ರಷ್ಟ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನ ಮಂತ್ರಿ ನರೇಮದ್ರ ಮೋದಿ ಅವರು ಆಡಿದ ಮಾತಿನಂತೆ ನಡೆದುಕೊಂಡ ಒಂದೇ ಒಂದು ಉದಾಹರಣೆ […]

Advertisement

Wordpress Social Share Plugin powered by Ultimatelysocial