ಕೋಟಿಗೊಬ್ಬ 3 ಟ್ರೇಲರ್‌ ನೋಡಿ ರಮ್ಯಾ ಶಾಕ್‌ – ಕಿಚ್ಚನ ಪ್ರತಿಕ್ರಿಯೆ

ಸ್ಯಾಂಡಲ್‌ ವುಡ್‌ ಮೋಹಕತಾರೆ ರಮ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಸದಾ ಚುರುಕಿರುತ್ತಾರೆ. ಯಾವುದಾದರು ಸಿನಿಮಾದ ಟೀಸರ್‌,ಟ್ರೇಲರ್‌, ಮೂವಿ ನೋಡಲು ಮಸ್ತ್‌ ಆಗಿದ್ರೆ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ. ಹೀಗೆ ಮೊನ್ನೆ ಅಷ್ಟೇ ಕಿಚ್ಚ ಸುದೀಪ ಅಭಿನಯದ ಕೋಟಿಗೊಬ್ಬ 3 ಚಿತ್ರದ  ಟ್ರೈಲರ್ ವೀಕ್ಷಣೆ ಮಾಡಿದ್ದ ರಮ್ಯಾ, ಸುದೀಪ್ ಅವರನ್ನು ಹಾಲಿವುಡ್ ಸಿನಿಮಾದಲ್ಲಿ ಬರುವ ಬೆಂಜಮಿನ್ ಬಟನ್ ಪಾತ್ರಕ್ಕೆ ಹೋಲಿಸಿದ್ರು. ”ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್, ನಿಮಗೆ ವಯಸ್ಸೇ ಆಗಲ್ವಾ? ವಾಹ್ ಅದ್ಭುತ ಟ್ರೈಲರ್’ ಎಂದು ರಮ್ಯಾ ಇನ್ಸ್ಟಾಗ್ರಾಂದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್‌ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಸುದೀಪ್, ”ಸಿನಿಮಾದಿಂದ ದೂರವಿದ್ದು ರಾಜಕೀಯದಲ್ಲಿದ್ದರೂ ನಮ್ಮ ಬಗ್ಗೆ ಮಾತನಾಡಿರುವುದು ನಿಜಕ್ಕೂ ಖುಷಿ ತಂದಿದೆ” ಎಂದರು. ಹಾಗೆ ವಯಸ್ಸಿನ ಬಗ್ಗೆ ಮಾತನಾಡಿರುವ ರಮ್ಯಾ ಅವರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ”50 ವಯಸ್ಸು ದಾಟಿದ್ರೂ ಕೆಲವು ನಟರು ಅಷ್ಟು ಫಿಟ್ ಆಗಿರುವುದು ನಮಗೆ ಸ್ಫೂರ್ತಿ. ಕೆಲವರು 30 ವಯಸ್ಸು ಆಗಿದ್ದರೂ 50 ಆಗಿರೋಥರ ಆಗಿರ್ತಾರೆ. ಎರಡೂ ನಮಗೆ ಒಂದು ರೀತಿ ಸ್ಫೂರ್ತಿಯಾಗಿದೆ” ಎಂದರು.

ಅಂದ್ಹಾಗೆ, ರಮ್ಯಾ ಅವರು ಹೇಳಿರುವ  ಬೆಂಜಮಿನ್ ಬಟನ್ ಪಾತ್ರ ಏನಪ್ಪಾ ಅಂದ್ರೆ ಹಾಲಿವುಡ್‌ ಚಿತ್ರವೊಂದರಲ್ಲಿ ಮುದುಕನಾಗಿ ಹುಟ್ಟಿ ಮಗುವಾಗಿ ಅಂತ್ಯವಾಗುವ ಕಥೆ ಇದಾಗಿದೆ. ಅಂದ್ರೆ ದಿನ ಕಳೆದಂತೆ ವಯಸ್ಸು ಹೆಚ್ಚಾಗಬೇಕು ಆದರೆ ಈ ಪಾತ್ರದಲ್ಲಿ ವಯಸ್ಸು ಕಡಿಮೆಯಾಗಿ ಹ್ಯಾಂಡ್ಸಮ್‌ಆಗಿ ಕಾಣುತ್ತಿದ್ದಾರೆ. ಅದನ್ನೆ ಸುದೀಪ್ ಅವರಿಗೆ ರಮ್ಯಾ ಹೋಲಿಸಿ, ಸುದೀಪ್ ಚಿರುಯುವಕನಂತೆ ಕಾಣ್ತಿದ್ದಾರೆ ಎಂಬ ಅರ್ಥದಲ್ಲಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿ ವಿದ್ಯುತ್‌ ಕೊರತೆ ಇಲ್ಲ;ವಿದ್ಯುತ್ ಪೂರೈಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿದ ಕೇಂದ್ರ ಸರ್ಕಾರ

Tue Oct 12 , 2021
ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದೂರು ಹೇಳುವ ಒಂದೂ ಅವಕಾಶವನ್ನು ಬಿಡುವುದಿಲ್ಲ. ಇದೀಗ ದೇಶದ ಕೆಲವು ರಾಜ್ಯಗಳಿಗೆ ಕಲ್ಲಿದ್ದಲಿನ ಪೂರೈಕೆ ಕಡಿಮೆಯಾಗಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಕೇಜ್ರಿವಾಲ್​ ಕೂಡ ವಿದ್ಯುತ್​ ಉತ್ಪಾದಕ ಘಟಕಗಳಿಗೆ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕಡಿಮೆ ಆಗಿ ದೆಹಲಿಗೆ ವಿದ್ಯುತ್​ ಅಭಾವ ಎದುರಾಗುವ ಚಿಂತಾಜನಕ ಸ್ಥಿತಿ ಇದೆ […]

Advertisement

Wordpress Social Share Plugin powered by Ultimatelysocial