ಟಿಕೆಟ್ ತಪ್ಪಿದ್ದಕ್ಕೂ ಬಿ.ಎಲ್ ಸಂತೋಷ್ ಗೂ ಯಾವುದೇ ಸಂಬಂಧವಿಲ್ಲ: ಮುಂದೆ ಎಂಎಲ್‌ಎ ಟಿಕೆಟ್ ಕೊಡ್ತಾರೆ; ವಿಜಯೇಂದ್ರ

ಮೈಸೂರು: ವಿಧಾನ ಪರಿಷತ್ ಚುನಾವಣೆ ಕೈ ತಪ್ಪಿದ್ದು ಪಕ್ಷದ ರಾಜಕಾರಣಕ್ಕೆ ಮಾತ್ರ ವಿಜಯೇಂದ್ರ ಸೀಮಿತ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಬಿಜೆಪಿಯಲ್ಲಿ ನನ್ನ ಹಾಗೆ ಕೆಲಸ ಮಾಡಿದ ಸಾವಿರಾರು ಕಾರ್ಯಕರ್ತರಿದ್ದಾರೆ. ಸ್ವಂತ ದುಡ್ಡು ಖರ್ಚು ಮಾಡಿ ಪಕ್ಷದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿದ್ದಾರೆ. ಪರಿಷತ್ ಚುನಾವಣೆಗೆ ಸುಮಾರು 20 ಜನರು ಹೆಸರು ಶಿಫಾರಸ್ಸು‌ ಮಾಡಲಾಗಿತ್ತು. ಆದರೆ ಆಯ್ಕೆ ಆಗಬೇಕಿರೋದು ಕೇವಲ ನಾಲ್ಕು ಜನ. ಅದನ್ನ ಹೈಕಮಾಂಡ್ ಈಗಾಗಲೇ ತೀರ್ಮಾನ ಮಾಡಿದೆ.ರಾಜ್ಯಾದ್ಯಂತ ಯುವ ಕಾರ್ಯಕರ್ತರು ನನ್ನನ್ನ ಪ್ರೀತಿ ಮಾಡ್ತಾರೆ.ನನಗೆ ಟಿಕೆಟ್ ಸಿಗದಿದ್ದಕ್ಕೆ ಕೆಲವರು ಬೇಸರವಾಗಿದ್ದಾರೆ. ನಾನು ಕೂಡಾ ರಾಜಕಾರಣಕ್ಕೆ ಈಗ ಅಂಬೆಗಾಲಿಡುತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಉತ್ತಮ ಜವಾಬ್ದಾರಿ ನೀಡಲಿದೆ. ಪರಿಷತ್ ಟಿಕೆಟ್ ಸಿಗದಿದ್ದಕ್ಕೆ ಇಲ್ಲಿಗೆ ಎಲ್ಲಾ ಮುಗಿದುಹೋಗಲ್ಲ ಎಂದರು.ತಮಗೆ ಬಿ.ಎಲ್.ಸಂತೋಷ್ ರಿಂದ ಟಿಕೆಟ್ ಕೈತಪ್ಪಿದೆ ಎಂಬ ವದಂತಿ ಬಗ್ಗೆ ಮಾತನಾಡಿ, ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ.ಅಭ್ಯರ್ಥಿ ಆಯ್ಕೆ ಮಾಡೋದು ಕೋರ್ ಕಮಿಟಿ ಹಾಗೂ ಕೇಂದ್ರ ನಾಯಕರು. ಇದರಲ್ಲಿ ಯಾರೋ ಒಬ್ಬರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಮೈಸೂರಿನಲ್ಲಿ ಬಿ.ವೈ.ವಿಜಯೇಂದ್ರ ಹೇಳಿದರು.ಚುನಾವಣಾ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಭಾವಚಿತ್ರ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಫೋಟೋನ ಯಾರು ಕೈ ಬಿಟ್ಟಿದ್ದಾರೋ ಆ ಮಹಾನುಭಾವರನ್ನೇ ಕೇಳಬೇಕು. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು.ಎಂ‌ಎಲ್‌ಸಿ ಟಿಕೆಟ್ ಕೈ ತಪ್ಪಿದ್ದರಿಂದ ಅವರಿಗೆ ಹಿನ್ನೆಡೆ ಆಗಲ್ಲ. ನನ್ನ ಮಗನನ್ನು ಎಂಎಲ್‌ಸಿ ಮಾಡಿ ಎಂದು ಅವ್ರು ಯಾರ ಹತ್ರಾನು ಅವರು ವಕಾಲತ್ತು ಮಾಡಿಲ್ಲ.ವಿಜಯೇಂದ್ರ ಏನಾಗಬೇಕೆಂದು ಎಂಬುದನ್ನ ಪಕ್ಷ ಮುಂದೆ ತೀರ್ಮಾನ ಮಾಡುತ್ತೆ ಎಂದರು.ಕುಟುಂಬ ರಾಜಕಾರಣದ ಆರೋಪ ಮುಕ್ತರಾಗಲು ವಿಜಯೇಂದ್ರಗೆ ಕೋಕ್ ಎಂಬ ಚರ್ಚೆ ಹಿನ್ನೆಲೆ ಮಾತನಾಡಿ, ಬಿಎಸ್‌ವೈ ಮಗ ಅಂತ ನನಗೆ ಮುಂದೆ ಎಂಎಲ್‌ಎ ಟಿಕೆಟ್ ಕೊಡ್ತಾರೆ ಅಂದ್ರೆ ಕುಟುಂಬ ರಾಜಕಾರಣ ಎನ್ನಬಹುದು.ನಾನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಎಲ್ಲವನ್ನ ಗುರುತಿಸಿದೆ, ಮುಂದೆ ಎಲ್ಲದಕ್ಕೂ ಉತ್ತರ ಸಿಗಲಿದೆ.ವರುಣಾ ಕ್ಷೇತ್ರದ ಟಿಕೆಟ್ ಬಗ್ಗೆ ನಾನು ನಿರೀಕ್ಷೆ ಇಟ್ಕೊಂಡಿಲ್ಲ‌ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಪ್ರವೇಶಕ್ಕೆ ನಿರ್ಬಂಧ ಇಲ್ಲ: ಶಿಕ್ಷಣ ಇಲಾಖೆ

Thu May 26 , 2022
 ಬೆಂಗಳೂರು: ರಾಜ್ಯ ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಯಾವುದೇ ರೀತಿಯ ನಿರ್ಬಂಧ ವಿಧಿಸದಿರಲು ನಿರ್ಧರಿಸಿರುವ ಶಿಕ್ಷಣ ಇಲಾಖೆ, ಪ್ರವೇಶ ಕಲ್ಪಿಸುವಾಗ ಮೂಲಸೌಕರ್ಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಸೂಚಿಸಿದೆ.2022-23ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸದ ಕಾರಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ.ಜತೆಗೆ, ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಬಯಸುವವರಿಗೆ ಅನುಕೂಲವಾಗಲಿ ಎನ್ನುವ […]

Advertisement

Wordpress Social Share Plugin powered by Ultimatelysocial