ಬಿಬಿಎಂಪಿಯ 27 ಕಚೇರಿಗಳ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ..

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ರಾಜಧಾನಿ ಬೆಂಗಳೂರಿನಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿ, ವಲಯ ಕಚೇರಿ, ಜಂಟಿ ಆಯುಕ್ತರ ಕಚೇರಿ ಸೇರಿ ನಗರದ 27 ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಒಟ್ಟು ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು ಹನ್ನೊಂದು ಸ್ಥಳಗಳಲ್ಲಿ ಈ ದಾಳಿ ನಡೆದಿದೆ.

ಕಳೆದೊಂದು ವರ್ಷದಿಂದ ಎಸಿಬಿಗೆ ಬರುತ್ತಿದ್ದ ದೂರುಗಳ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ. ದಾಳಿ ವೇಳೆ ಕೋಟ್ಯಂತರ ಮೌಲ್ಯದ ವ್ಯವಹಾರದ ಕಡತಗಳು ಪತ್ತೆಯಾಗಿದ್ದು, ದಾಖಲೆಗಳ ಪರಿಶೀಲನೆ ಜತೆಗೆ ಬಿಬಿಎಂಪಿ ಅಧಿಕಾರಿ-ಸಿಬ್ಬಂದಿಯ ವಿಚಾರಣೆ ಕೂಡ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್' ಜನರು ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರನ್ನು ಕೇಳುತ್ತಾರೆ!

Fri Feb 25 , 2022
ಲಾಸ್ ಏಂಜಲೀಸ್‌ನ ಸ್ಟುಡಿಯೋ ಸಿಟಿ ನೆರೆಹೊರೆಯಲ್ಲಿ ಗುರುವಾರ ನಡೆದ ಪ್ರದರ್ಶನದಲ್ಲಿ ಜನರು ಉಕ್ರೇನ್‌ನ ರಷ್ಯಾದ ಆಕ್ರಮಣವನ್ನು ಪ್ರತಿಭಟಿಸಿದರು. ಗುರುವಾರ ಲಾಸ್ ಏಂಜಲೀಸ್‌ನ ಸ್ಟುಡಿಯೋ ಸಿಟಿ ನೆರೆಹೊರೆಯಲ್ಲಿ ನಡೆದ ಪ್ರದರ್ಶನದಲ್ಲಿ ಜನರು ಉಕ್ರೇನ್‌ನ ರಷ್ಯಾದ ಆಕ್ರಮಣವನ್ನು ಪ್ರತಿಭಟಿಸಿದರು. ಗುರುವಾರ ದೇಶದ ಮೇಲೆ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಜನರು ಉಕ್ರೇನ್ ಅನ್ನು ಬೆಂಬಲಿಸುವ ಪ್ರದರ್ಶನದಲ್ಲಿ ಭಾಗವಹಿಸಿದರು. ಸಿಯಾಟಲ್‌ನಲ್ಲಿ ಗುರುವಾರ, ಫೆಬ್ರವರಿ 24, 2022 ರಂದು ರಷ್ಯಾ ದೇಶದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್‌ಗೆ ಬೆಂಬಲವಾಗಿ […]

Advertisement

Wordpress Social Share Plugin powered by Ultimatelysocial