ಸೀರೆಯುಟ್ಟು ಬಂದ ಮಲೈಕಾ ಅರೋರಾ: ಪೌಡರ್ ಆಂಟಿ ಎಂದಿದ್ದೇಕೆ ?

 

ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ತಮ್ಮ ಫ್ಯಾಷನ್‌ನಿಂದ ಸದ್ದು ಮಾಡುತ್ತಿರುತ್ತಾರೆ. ಎಲ್ಲಾದರೂ ಪಾರ್ಟಿ ಇದೆ ಎಂದರೆ, ಅಥವಾ ಬಾಲಿವುಡ್ ಮಂದಿ ಒಂದಾಗುತ್ತಾರೆ ಎಂದರೆ ಅಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಾರೆ.ಇನ್ನು ಯಾವಾಗ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಕೂಡ ನಟಿ ಮಲೈಕಾ ಅರೋರಾ ತಮ್ಮ ವಿಭಿನ್ನ ಅವತಾರದ ಮೂಲಕ, ಹಾಟ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ.ಜೊತೆಗೆ ಕೆಲವೊಂದು ವಿಚಾರಗಳಿಗೆ ಆಗಾಗ ಟ್ರೋಲ್ ಆಗುತ್ತಲೂ ಇರುತ್ತಾರೆ.ಮಲೈಕಾ ಅರೋರಾ ಅವ್ರಿಗೆ ಟ್ರೋಲ್ ಆಗುವುದು ಹೊಸದೇನಲ್ಲ. ಮಲೈಕಾ ಏನೇ ಮಾಡಿದರೂ ಕೂಡ ಒಂದಲ್ಲ, ಒಂದು ವಿಚಾರಕ್ಕೆ ಟ್ರೋಲ್‌ಗೆ ತುತ್ತಾಗುತ್ತಾರೆ. ಆದರೆ ಈ ಬಾರಿ ಸೀರೆಯುಟ್ಟು ಕಾಣಿಸಿಕೊಂಡರು ಕೂಡ ಈ ಬಾಲಿವುಡ್ ಬೆಡಗಿ ಕಟ್ರೋಲ್ ಆಗಿದ್ದಾರೆ.ಬಿಳಿ ಸೀರೆಯಲ್ಲಿ ಮಿಂಚಿದ ನಟಿ!ನಟಿ ಮಲೈಕಾ ಅರೋರಾ ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದಾರೆ. ಈ ಪಾರ್ಟಿಯಲ್ಲಿ ಮಲೈಕಾ ಬಿಳಿ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ನೆಟ್ ಸೀರೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಮಲೈಕಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಯಾವುದೋ ವಿಚಿತ್ರ ಬಟ್ಟೆ ಎಂದರೆ ಓಕೆ, ಆದರೆ ಸೀರೆಯುಟ್ಟರು ಮಲೈಕಾ ಯಾಕೆ ಟ್ರೋಲ್ ಆದರೂ ಎಂದುಕೊಂಡಿರಾ. ಈ ಬಾರಿ ಮಲೈಕಾ ತನ್ನ ಉಡುಪಿನಿಂದ ಅಲ್ಲ, ತಮ್ಮ ಮೇಕಪ್‌ನಿಂದ ಟ್ರೋಲ್ ಆಗಿದ್ದಾರೆ.ಪೌಡರ್ ಕಡಿಮೆ ಹಾಕಿ ಎಂದ ನೆಟ್ಟಿಗರು!ಬಿಳಿ ಬಣ್ಣದ ಚೆಂದದ ಸೀರೆಯ ಜೊತೆಗೆ ದಪ್ಪನೆಯ ಬಿಳಿ ಬಣ್ಣದ ಕಿವಿಯೋಲೆಗಳನ್ನು ಕೂಡ ಧರಿಸಿದ್ದರು. ಸಿಂಪರ್ ಆಗಿ ಕಂಳಿಸಿದ್ದಾರೆ. ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಟ್ರೋಲ್ ಆಗಲು ಕಾರಣ ಅವರು ಮಾಡಿಕೊಂಡಿದ್ದ ಮೇಕಪ್. ಕ್ಯಾಮೆರಾ ಕಣ್ಣಿಗೆ ಮಲೈಕಾ ಮೇಕಪ್ ಕೊಂಚ ಹೆಚ್ಚಾಗಿಯೇ ಕಾಣಿಸಿದೆ. ಹಾಗಾಗಿ ಮಲೈಕಾಗೆ ಕಡಿಮೆ ಪೌಡರ್ ಹಾಕಿಕೊಳ್ಳಿ ಆಂಟಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಫೌಂಡೇಷನ್ ಕೊಂಚ ಜಾಸ್ತಿಯಾಗಿದೆ ಮೇಕಪ್ ಸರಿಯಾಗಿ ಮಾಡಿಕೊಳ್ಳಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೊಸ ಮನೆ ಖರೀದಿಸಿದ ರಣ್ವೀರ್-ದೀಪಿಕಾ;

Tue Jul 12 , 2022
      ಬಾಲಿವುಡ್‌ನ ಸ್ಟಾರ್ ಜೋಡಿ ರಣ್‌ವೀರ್ ಮತ್ತು ದೀಪಿಕಾ ಪಡುಕೋಣೆ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಹೊಸ ಪ್ಲ್ಯಾಂಟ್ ಅನ್ನು ಖರೀದಿಸಿದೆ. 119 ಕೋಟಿಯ ದುಬಾರಿ ಮನೆಯನ್ನ ರಣ್‌ವೀರ್ ಸಿಂಗ್ ದಂಪತಿ ಖರೀದಿ ಮಾಡಿದ್ದಾರೆ. ಜೋಡಿ ಹಕ್ಕಿಗಳಾಗಿ ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರೋ ದೀಪಿಕಾ ಮತ್ತು ರಣ್‌ವೀರ್ ನಿಜಜೀವನದಲ್ಲೂ ಬೆಸ್ಟ್ ಜೋಡಿಯಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದಾರೆ. ಇದೀಗ […]

Advertisement

Wordpress Social Share Plugin powered by Ultimatelysocial