14 ಕೋಟಿ ಅನುದಾನ, 148 ಶಾಲೆಗಳಲ್ಲಿ ನಿರ್ಮಾಣ!.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆ ಅಡಿಯಲ್ಲಿ ಮೈಸೂರು ಜಿಲ್ಲೆಯ 272 ಸರಕಾರಿ ಶಾಲೆಗಳಿಗೆ ಹೊಸ ಕೊಠಡಿ ಭಾಗ್ಯ ಲಭಿಸಿದ್ದು, 148 ಶಾಲೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ.ಜಿಲ್ಲೆಯಲ್ಲಿ ಸಾಕಷ್ಟು ಶಾಲೆಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿತ್ತು. ಇದೀಗ ವಿವೇಕ ಕೊಠಡಿ ಯೋಜನೆಯಡಿ ಜಿಲ್ಲೆಯ 272 ಸರಕಾರಿ ಶಾಲೆಗಳಿಗೆ ಹೊಸ ಕೊಠಡಿಗಳು ನಿರ್ಮಾಣವಾಗುತ್ತಿವೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ತಲಾ ಒಂದೊಂದು ಕೊಠಡಿ ನಿರ್ಮಾಣವಾಗಲಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳ ಕೊಠಡಿಯೂ ಏಕರೂಪದ ಬಣ್ಣವಾಗಿ ಮಾರ್ಪಡಲಿದೆ. ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಇಡಲಾಗುತ್ತಿದೆ. 1 ಕೊಠಡಿಯನ್ನು 15 ಲಕ್ಷ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ 124 ಶಾಲೆಗಳಿಗೂ ಟೆಂಡರ್‌ ಆಗಿದ್ದು, ಎರಡನೇ ಹಂತದಲ್ಲಿಕಾಮಗಾರಿ ಶುರುವಾಗಲಿದೆ.ಸರಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣ ಕಾರ್ಯಕ್ಕೆ ಪಂಚಾಯತ್‌ ರಾಜ್‌ ಎಂಜಿನಿಯರ್‌ ಇಲಾಖೆಯಡಿ ಪಿಆರ್‌ಡಿ ಏಜೆನ್ಸಿ ನೇಮಿಸಲಾಗಿದೆ. ಈಗಾಗಲೇ ಸರಕಾರದಿಂದ 14.65 ಕೋಟಿ ರೂ. ಬಿಡುಗಡೆ ಆಗಿದೆ. ಮೈಸೂರು ಹಾಗೂ ಕೆ.ಆರ್‌.ನಗರದ ಎರಡು ವಿಭಾಗಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೈಸೂರು ವಿಭಾಗಕ್ಕೆ 8.43 ಕೋಟಿ, ಕೆ.ಆರ್‌.ನಗರ ವಿಭಾಗಕ್ಕೆ 6.21 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಮೈಸೂರು ತಾಲೂಕು, ನಂಜನಗೂಡು, ತಿ.ನರಸೀಪುರ, ವರುಣಾ, ಚಾಮರಾಜ ಹಾಗೂ ಕೃಷ್ಣರಾಜ, ನಂಜನಗೂಡು ಭಾಗದಲ್ಲಿ 100 ಕೊಠಡಿ ಹಾಗೂ ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಹಾಗೂ ಕೆ.ಆರ್‌.ನಗರದಲ್ಲಿ 48 ಕೊಠಡಿ ಕಾಮಗಾರಿ ಶುರುವಾಗಿದೆ. ನಂಜನಗೂಡಿಗೆ ಗರಿಷ್ಠ 35 ಹಾಗೂ ನರಸಿಂಹರಾಜ ಕ್ಷೇತ್ರ ಮತ್ತು ತಿ.ನರಸೀಪುರಕ್ಕೆ ಕನಿಷ್ಠ 20 ಕೊಠಡಿ ಮಂಜೂರಾಗಿವೆ.ಕೊಠಡಿ ನಿರ್ಮಾಣಕ್ಕೆ ಜಾಗದ ಕೊರತೆ ಇಲ್ಲ. ಈಗಾಗಲೇ ಪ್ಲ್ಯಾನ್‌ ಅಪ್ರೂವಲ್‌ ಆಗಿದೆ. ಗುತ್ತಿಗೆದಾರರಿಗೆ ವರ್ಕ್ ಆರ್ಡರ್‌ ಕೊಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಶೇ. 50ರಷ್ಟು ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಾಲ್ಕು ಹಂತಗಳಲ್ಲಿ ವಿವೇಕ ಶಾಲಾ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಕೊಠಡಿ ಅಗತ್ಯ ಇರುವ ಶಾಲೆಗಳಲ್ಲಿ ಖಾಲಿ ಜಾಗವಿದ್ದರೆ ಮಾತ್ರ ಕೊಠಡಿ ನಿರ್ಮಾಣ ಅನುಮೋದನೆ ನೀಡಿದ್ದು, ಸ್ಥಳಾವಕಾಶವಿದ್ದರೆ ಎರಡು ಅಂತಸ್ತಿನಲ್ಲಿ ಕೊಠಡಿ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ, ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್‌ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಚುತ್ತಿದೆ ಬೇಸಿಗೆಯ ಧಗೆ; ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ

Mon Feb 27 , 2023
ಬೆಂಗಳೂರು, ಫೆಬ್ರವರಿ 27;ಆರಂಭದಲ್ಲೇ ಜನರು ಬಿಸಿಲಿಗೆ ಕಂಗೆಟ್ಟಿದ್ದಾರೆ. ಮಾರ್ಚ್ 3ನೇ ವಾರದಲ್ಲಿ ದೇಶಾದ್ಯಂತ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಅಂದಾಜಿಸಿದ್ದಾರೆ. ಈ ನಡುವೆ ಬೇಸಿಗೆಯ ಧಗೆ ಕಡಿಮೆ ಮಾಡುವ ಸುದ್ದಿಯೊಂದಿದೆ. ಹೌದು ದೇಶದ ಕೆಲವು ರಾಜ್ಯಗಳಲ್ಲಿ ಮಾರ್ಚ್ 2ರ ತನಕ ಮಳೆಯಾಗುವ ನಿರೀಕ್ಷೆ ಇದೆ. ಫೆಬ್ರವರಿ ಅಂತ್ಯದಲ್ಲಿಯೇ ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಿದೆ. ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸರಾಸರಿಗಿಂತ ಹೆಚ್ಚಿನ […]

Advertisement

Wordpress Social Share Plugin powered by Ultimatelysocial