ಶ್ರೀ ಎನ್.ಹೆಚ್. ಕೋನರಡ್ಡಿ ದಂಪತಿ ಸಮೇತ ಬಾಗಿನ ಅರ್ಪಣೆ!

ಭೂಮಿ ಖರಿದಿಸಲು ಹಣ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.ಅಣ್ಣಿಗೇರಿ ನಗರದ ಸಾರ್ವಜನಿಕರಿಗೆ 8 ರಿಂದ 10 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ‌ ಕಂಡುಕೊಳ್ಳುವ ನಿಟ್ಟಿನಲ್ಲಿ ಬಸಾಪುರ ಗ್ರಾಮದ ವ್ಯಾಪ್ತಿಯ ಮಲಪ್ರಭಾ ಮುಖ್ಯ ಕಾಲುವೆ ಹತ್ತಿರ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲಿ 76 ಎಕರೆ ಜಮೀನು ಖರೀದಿಸಿ ನೂತನ ಬೃಹತ್ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ‌ ನೀಡಿದ್ದು ಈಗ ಕೆರೆ ಸಂಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿ ನೀರು ತುಂಬಿಸಿದ್ದು ಕಣ್ಮನ ಸೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.ಈ ಕೆರೆ ನಿರ್ಮಾಣಕ್ಕೆ ಮೊದಲು ಡಿಪಿಎಆರ್ ಅಂದಾಜು ಪಟ್ಟಿಯಲ್ಲಿ ಕೆರೆ ಸುತ್ತಲು ಒಡ್ಡು ಹಾಕಿ ನೀರು ನಿಲ್ಲಿಸುವ ಬದಲು ಕಾಲುವೆಯಿಂದ ನಿಸರ್ಗದ ಮೂಲಕ (Natural flow) ನೀರು ಬರುವಂತೆ ಡಿಪಿಎಆರ್ ಬದಲಾವಣೆ ಮಾಡಲು ಅಂದಿನ ಪುರಸಭೆ ಅಧ್ಯಕ್ಷರು, ಸದಸ್ಯರೊಂದಿಗೆ ಠರಾವು ಪಾಸ್ ಮಾಡಿ ನೀರು ಬರುವಂತೆ ತಿರ್ಮಾನ ಕೈಗೊಳ್ಳಲಾಯಿತು.ಶ್ರೀ ಎನ್.ಹೆಚ್. ಕೋನರಡ್ಡಿ ಅವರು ಶಾಸಕರಾಗುವುದಕ್ಕಿಂತ ಮೊದಲು ಹಿಂದಿನ ಸರ್ಕಾರದಲ್ಲಿ ಈ ಯೋಜನೆ ಮಂಜೂರಾಗಿ ಕೇವಲ ಕಾಗದಲ್ಲಿಯೇ ಉಳಿದಿತ್ತು. ಭೂಮಿ ಖರೀದಿಸಲು ಪುರಸಭೆ ಹಣ ನೀಡಬೇಕು ಎಂದು ಕರಾರು ಹಾಕಿದ್ದರು. ಆದರೆ ಪುರಸಭೆಯಲ್ಲಿ ಹಣ ಇರಲಿಲ್ಲ. ಆದರೆ ಕೋನರಡ್ಡಿ ಅವರು‌ ಶಾಸಕರಾದ ನಂತರ ಭೂಮಿ ಖರಿದಿಸಲು ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ ಶ್ರೀ #Siddaramayya ಅವರಿಂದ ಕೊಟಿಗಟ್ಟಲೇ ಹಣ ಮಂಜೂರು ಮಾಡಿಸಿಕೊಂಡು ಕೆರೆಗೆ ಅವಶ್ಯಕವಿರುವ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಯಿತು.ಈ ಕೆರೆ ನಿರ್ಮಿಸಲು ಭೂಮಿ ನೀಡಿದ ಬಸಾಪುರ ಗ್ರಾಮದ ರೈತರನ್ನು ಎಂದೂ ಮರೆಯಲು ಸಾಧ್ಯವಿಲ್ಲ, ಅಣ್ಣಿಗೇರಿ ನಗರದ ಜನತೆಯ ದಾಹ ತೀರಿಸಲು ತಮ್ಮ ಜಮೀನನ್ನು ನೀಡಿದ ಅವರೆಲ್ಲರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.ಈಗ ಕೆರೆ ತುಂಬಿ ಅಣ್ಣಿಗೇರಿ ನಗರಕ್ಕೆ ಸತತವಾಗಿ ನೀರು ಬೇಕಾಗುವಷ್ಟು ಸಂಗ್ರವಾಹಿದ್ದು ಕೆರೆ ಭರ್ತಿಯಾಗಿದ್ದರಿಂದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ಪೂಜೆ ಸಲ್ಲಿಸಿ ಬಾಗೀನ ಅರ್ಪಣೆ ಮಾಡಿದ್ದು ವಿಶೇಷ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಆದೇಶಕ್ಕೆ ಮಾಲೀಕರ ಆಕ್ರೋಶ

Tue Dec 27 , 2022
ಹೋಟೆಲ್​​​ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಪಾಲಿಕೆಯ ಈ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರು ಕಿಡಿ ಕಾರಿದ್ದಾರೆ.ನಗರದಲ್ಲಿ ಸಾವಿರಾರು ಹೊಟೇಲ್‌ಗಳಿದ್ದು, ಎಲ್ಲೆಲ್ಲಿ 30ಕ್ಕಿಂತ ಹೆಚ್ಚು ಸೀಟಿಂಗ್ ಇದ್ಯೋ ಅಲ್ಲೆಲ್ಲಾ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಮಾಡಬೇಕು ಎಂದು ಬಿಬಿಎಂಪಿ ನೋಟಿಸ್ ನೀಡಿದೆ.ಪ್ರತ್ಯೇಕ ಸ್ಮೋಕಿಂಗ್​ ಝೋನ್​ ಮಾಡುವುದು ಕಡ್ಡಾಯ, ಬಾರ್​, ರೆಸ್ಟೋರೆಂಟ್​​, ಕಾಫಿ ಡೇಗಳಲ್ಲಿ ಕೂಡ ಸ್ಮೋಕಿಂಗ್​ ಝೋನ್​ ಮಾಡಬೇಕು.ಸ್ಮೋಕಿಂಗ್​ ಝೋನ್​ ಮಾಡದೇ ಉದ್ಯಮ ನಡೆಸುತ್ತಿರುವ ಕಾನೂನಿನ ಉಲ್ಲಂಘನೆ […]

Advertisement

Wordpress Social Share Plugin powered by Ultimatelysocial