ಶ್ಯಾಮಲಾ ಜಾಗಿರ್ದಾರ್ ಲೇಖಕಿ

1941ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ಯಾಮಲಾ ಜಾಗೀರ್ದಾರ್ ತಮ್ಮ ಏಳನೆಯ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತ ಕಲಿಕೆ ಆರಂಭಿಸಿದರು. ಮುಂದೆ ಆರು ದಶಕಗಳ ಕಾಲ ಅವರ ಸಂಗೀತ, ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತ ನಾಡಿನೆಲ್ಲೆಡೆಯಲ್ಲದೆ, ಹೊರನಾಡಿನಲ್ಲೂ ಪಸರಿಸಿತ್ತು. ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಸಂತ ಶಿಶುನಾಳ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಶ್ಯಾಮಲಾ ಜಾಗೀರ್ದಾರ್ ಅವರನ್ನು ಅರಸಿ ಬಂದಿದ್ದವು. ಸುಗಮ ಸಂಗೀತ ಕಲಾವಿದೆ ಶ್ಯಾಮಲಾ ಜಾಗೀರ್ದಾರ್ ಅವರು ಈ ಲೋಕವನ್ನಗಲಿದ ದಿನ ಡಿಸೆಂಬರ್ 21, 2018.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ವಿಚಿತ್ರ ರೀತಿಯಲ್ಲಿ ಸಾವು!

Wed Dec 21 , 2022
ಕಾರಿನಲ್ಲಿ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡ್ಕೊಂಡು ಸಾವಿಗೆ ಶರಣು. ಅನಾರೋಗ್ಯದಿಂದ ಬೇಸತ್ತು ಕಾರಿನಲ್ಲಿ ಸಾವಿಗೆ ಶರಣಾದ ಟೆಕ್ಕಿ. ಮಹಾಲಕ್ಷ್ಮಿ ಲೇಔಟ್ನ ಕುರುಬರಹಳ್ಳಿ ಜಂಕ್ಷನ್ ಬಳಿ ನಡೆದಿರುವ ಘಟನೆ. ಸಾಪ್ಟ್ ವೇರ್ ಎಂಜಿನಿಯರ್ ವಿಜಯ್‌ ಕುಮಾರ್ (51) ಸಾವಿಗೀಡಾದ ದುರ್ದೈವಿ. ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ನಿವಾಸಿ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್. ಅದ್ರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್. […]

Advertisement

Wordpress Social Share Plugin powered by Ultimatelysocial