ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ!

ಬೆಂಗಳೂರು,ಫೆ.19- ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವರೆಗೂ ವಿಧಾನಮಂಡಲದಲ್ಲಿ ನಮ್ಮ ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ವಿಧಾನಸೌಧದ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್‍ನವರಿಗೆ ತ್ರಿವರ್ಣಧ್ವಜದ ಬಗ್ಗೆ ಗೌರವವಿಲ್ಲ.ಹೀಗಾಗಿ ಅವರು ಕೇಸರಿ ಧ್ವಜ ಹಾರಿಸುವ ಷಡ್ಯಂತರ ಹೊಂದಿದ್ದಾರೆ. ಅದನ್ನು ಈಶ್ವರಪ್ಪ ಸಭ್ಯತನದಿಂದ ಬಾಯಿಬಿಟ್ಟಿದ್ದಾರೆ ಎಂದು ಹೇಳಿದರು.ಸರ್ಕಾರ ಮೊದಲು ಈಶ್ವರಪ್ಪನವರ ರಾಜೀನಾಮೆಯನ್ನು ತೆಗೆದುಕೊಳ್ಳಬೇಕು. ಉಳಿದ ವಿಚಾರಗಳನ್ನು ಚರ್ಚೆ ಮಾಡಬೇಕು. ರಾಷ್ಟ್ರಧ್ವಜ ಮತ್ತು ದೇಶಭಕ್ತಿಯ ವಿಷಯದಲ್ಲಿ ಯಾವುದೇ ರಿಯಾಯ್ತಿ ಇಲ್ಲ. ಇದು 130 ಕೋಟಿ ಜನರ ಭಾವನೆಗಳ ವಿಚಾರ.ದೇಶದ ಸ್ವಾಭಿಮಾನಕ್ಕೆ ಸಂಬಂಸಿದ ಪ್ರಶ್ನೆ ಎಂದರು.ದೇಶ ಧ್ವಜಕ್ಕೆ ಅವಮಾನ ಮಾಡಿದವರು ಸಂಪುಟದಲ್ಲಿ ಮುಂದುವರೆಯಲು ಯೋಗ್ಯರೇ ಎಂದು ಪ್ರಶ್ನಿಸಿದರು. ಸೋಮವಾಗ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಸಾದ ಪರಿಶ್ರಮವು ಮಂಗಳ ಗ್ರಹದಲ್ಲಿ 1 ನೇ ವರ್ಷವನ್ನು ಪೂರ್ಣಗೊಳಿಸುತ್ತದೆ

Sat Feb 19 , 2022
  ಫೆಬ್ರವರಿ 18, 2021 ರಂದು ಮಂಗಳ ಗ್ರಹವನ್ನು ಸ್ಪರ್ಶಿಸಿದ ನಂತರ ನಾಸಾದ ಪರ್ಸೆವೆರೆನ್ಸ್ ರೋವರ್ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸರಿಸುಮಾರು 1,025 ಕೆ.ಜಿ ತೂಕದ, ಪರ್ಸೆವೆರೆನ್ಸ್ ಮಂಗಳ ಗ್ರಹದ ಮೇಲೆ ಸುರಕ್ಷಿತವಾಗಿ ಇಳಿಸಿದ ಅತ್ಯಂತ ಭಾರವಾದ ರೋವರ್ ಆಗಿದೆ ಮತ್ತು ಅದರ ಲ್ಯಾಂಡಿಂಗ್‌ನ ನಾಟಕೀಯ ವೀಡಿಯೊಗಳೊಂದಿಗೆ ಹಿಂತಿರುಗುತ್ತದೆ. ಆರು-ಚಕ್ರದ ವಿಜ್ಞಾನಿಗಳು ಮತ್ತೊಂದು ಗ್ರಹದ ಮೊದಲ ರಾಕ್ ಕೋರ್ ಮಾದರಿಗಳನ್ನು ಒಳಗೊಂಡಂತೆ ರೆಡ್ ಪ್ಲಾನೆಟ್‌ನಲ್ಲಿ ಅನೇಕ ಒಳನೋಟಗಳನ್ನು ಸಾಧಿಸಿದ್ದಾರೆ […]

Advertisement

Wordpress Social Share Plugin powered by Ultimatelysocial