ವಿಶ್ವದ ಅತಿ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ಇನ್ನಿಲ್ಲ.

ಜ.18. ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 118 ವರ್ಷದ ಫ್ರೆಂಚ್ ನನ್ ವಿಧಿವಶರಾಗಿದ್ದಾರೆ. ಸಿಸ್ಟರ್ ಆಂಡ್ರೆ ಎಂಬ ಹೆಸರಿನಿಂದಲೂ ಇವರು ಪ್ರಖ್ಯಾತರಾಗಿದ್ದರು. ದಕ್ಷಿಣ ಫ್ರಾನ್ಸ್ ನಲ್ಲಿ ಫೆಬ್ರವರಿ 11, 1904 ರಲ್ಲಿ ಜನಿಸಿದ್ದ ಇವರು ಎರಡು ವಿಶ್ವ ಯುದ್ಧಗಳಿಗೂ ಸಾಕ್ಷಿಯಾಗಿದ್ದರು.

ಕಳೆದ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಅವರು ನಿಧನರಾಗಿದ್ದಾರೆ.

ಈ ಮೊದಲು ಜಪಾನಿನ ಕನೆ ತನಕಾ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಹೀಗಾಗಿ ಸಿಸ್ಟರ್ ಆಂಡ್ರೆ ಅವರನ್ನು ಯುರೋಪಿನ ಅತಿ ಹಿರಿಯ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. 119 ವರ್ಷದ ತನಕಾ ಕಳೆದ ವರ್ಷ ವಿಧಿವಶರಾದ ಬಳಿಕ ಸಿಸ್ಟರ್ ಆಂಡ್ರೆ ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರಟಗೆರೆ ಪಟ್ಟಣದ ಹತ್ತಾರು ಸ್ಥಳದಲ್ಲಿ ಮಫ್ತಿಯಿಂದ ಕಾರ್ಯಚರಣೆ.

Wed Jan 18 , 2023
ಪುಂಡರಿಗೆ ಬಿಸಿ ಮುಟ್ಟಿಸಲು ಮಾರುವೇಷ ಹಾಕಿದ ಚೇತನ್ ಗೌಡಕೊರಟಗೆರೆ ಪಟ್ಟಣದ ಹತ್ತಾರು ಸ್ಥಳದಲ್ಲಿ ಮಫ್ತಿಯಿಂದ ಕಾರ್ಯಚರಣೆಪಿಎಸೈ ಚೇತನ್‌ಗೌಡ ಕಾರ್ಯಚರಣೆಗೆ ಬೆಚ್ಚಿಬಿದ್ದ ಪುಂಡರ ಗುಂಪುಬೈಕ್ ವಿಲೀಂಗ್ ಮತ್ತು ಅತಿವೇಗದ ಚಾಲನೆಗೆ ಪಿಎಸೈ ಕಡಿವಾಣಕಾಲೇಜು ವಿದ್ಯಾರ್ಥಿಗಳ ದೂರಿನ ಅನ್ವಯ ರಸ್ತೆಗೆ ಇಳಿದ ಪಿಎಸೈ ಪುಂಡರಿದ ಹತ್ತಾರು ದ್ವಿಚಕ್ರ ವಾಹನ ವಶಕ್ಕೆ ಪಡೆದ ಪೊಲೀಸರ ತಂಡ ಮೈದಾನ, ಕಾಲೇಜು, ಟೀಅಂಗಡಿ ಸಮೀಪ ಕಾರ್ಯಚರಣೆಮಫ್ತಿವೇಷ ಮತ್ತ ಮುಖಕ್ಕೆ ಮಾಸ್ಕ್ ಧರಿಸಿ ಪಿಲ್ಡಿಗಿಳಿದ ಪಿಎಸೈಪಿಎಸೈ ಚೇತನ್‌ಗೌಡ ಮಫ್ತಿ ಕಾರ್ಯಚರಣೆಗೆ […]

Advertisement

Wordpress Social Share Plugin powered by Ultimatelysocial