ಪುಟ್ಟ ತಂಗಿಯನ್ನು ಮಡಿಲಿನಲ್ಲಿ ಇರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ: ಹೃದಯ ಸ್ಪರ್ಶಿ ಫೋಟೋ ವೈರಲ್

ಈ ಬಾರಿ 10 ವರ್ಷದ  ಮಣಿಪುರಿ ಬಾಲಕಿ ತನ್ನ ತಂಗಿ ಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಗೆ   ಹೋಗುತ್ತಿರುವ ಫೋಟೋ ನೆಟಿಜನ್‌ಗಳ ಗಮನ ಸೆಳೆದಿದೆ. ತಂಗಿಯನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಪಾಠ ಸಹ ಕೇಳಿದ್ದಾಳೆ.

ಮಕ್ಕಳಲ್ಲಿ (Children) ಯಾವುದೇ ಕಲ್ಮಶ ಇರಲ್ಲ. ಎಲ್ಲರನ್ನೂ ತುಂಬಾನೇ ಪ್ರೀತಿ(Love And Care)ಯಿಂದ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಪುಟ್ಟ ಮಕ್ಕಳು ಮಾಡುವ ಕೆಲಸಗಳು ದೊಡ್ಡವರನ್ನು ದಿಗ್ಬ್ರಮೆಗೊಳಿಸುತ್ತವೆ. ತಮಗಿಂತ ಕಿರಿಯರನ್ನು ಮಕ್ಕಳು ನೋಡಿಕೊಳ್ಳುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತದೆ. ಈ ರೀತಿಯ ವಿಡಿಯೋ(Videos)ಗಳನ್ನು ನೀವು ಸೋಶಿಯಲ್ ಮೀಡಿಯಾ(Social Media)ದಲ್ಲಿ ನೋಡಿರುತ್ತಿರಿ. ಆ ಮಕ್ಕಳು ತೆಗೆದುಕೊಳ್ಳುವ ಕಾಳಜಿ ಎಂತಹವರನ್ನು ನಿಬ್ಬೆರುಗೊಳಿಸುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ಜವಾಬ್ದಾರಿ ಮಕ್ಕಳಿಗೆ ಹೇಗೆ ಬರುತ್ತೆ ಎಂದು ಜನರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಅರುಣಾಚಲ ಪ್ರದೇಶದ ಪುಟ್ಟ ಹುಡುಗಿ ಯೊಬ್ಬಳು ಅಳುತ್ತಿದ್ದ ತನ್ನ ಸಹಪಾಠಿಯನ್ನು ಸಮಾಧಾನಪಡಿಸುವ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಈ ಬಾರಿ 10 ವರ್ಷದ (10 Year Old Girl )ಮಣಿಪುರಿ ಬಾಲಕಿ ತನ್ನ ತಂಗಿ(Sister)ಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಗೆ (School) ಹೋಗುತ್ತಿರುವ ಫೋಟೋ ನೆಟಿಜನ್‌ಗಳ ಗಮನ ಸೆಳೆದಿದೆ. ತಂಗಿಯನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಪಾಠ ಸಹ ಕೇಳಿದ್ದಾಳೆ.ಈ ಫೋಟೋವನ್ನು ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್   ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲಿಯಾ ಭಟ್- ರಣ್ಬೀರ್ ಮದುವೆ ದಿನಾಂಕ ನಿಗದಿ!

Tue Apr 5 , 2022
ಬಾಲಿವುಡ್‌ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ವಿವಾಹವಾಗುತ್ತಾರೆ ಎಂಬುದು ಹೊಸ ಸುದ್ದಿಯೇನಲ್ಲ. ಈ ಜೋಡಿ ವಿವಾಹವಾಗಲಿದ್ದಾರೆ ಎಂದು ಕಳೆದ ವರ್ಷದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಈಗ ಈ ಜೋಡಿಯ ವಿವಾಹ ದಿನಾಂಕ ಹಾಗೂ ಸ್ಥಳ ನಿಗದಿಯಾಗಿದೆ. ಆಲಿಯಾ ಬಟ್-ರಣ್ಬೀರ್ ಕಪೂರ್ ಅವರುಗಳು ಏಪ್ರಿಲ್‌ನಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತು, ಆದರೆ ದಿನಾಂಕ ಪ್ರಕಟಿಸಲಾಗಿರಲಿಲ್ಲ. ಆದರೆ ಈಗ ದಿನಾಂಕವೂ ನಿಗದಿಯಾಗಿದ್ದು, ಏಪ್ರಿಲ್ 17 ರಂದು ಈ ತಾರಾ ಜೋಡಿ ಹಸೆಮಣೆ […]

Advertisement

Wordpress Social Share Plugin powered by Ultimatelysocial