ವಿಭಿನ್ನ ಕಥಾಹಂದರ ಹೊಂದಿರುವ “ಸೋಲ್ಡ್” ಚಿತ್ರದಲ್ಲಿ ಡ್ಯಾನಿಶ್ ಸೇಠ್.

ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಡ್ಯಾನಿಶ್ ಸೇಠ್ ಅಭಿನಯದ ಚಿತ್ರ “ಸೋಲ್ಡ್”.ಕಾಮಿಡಿ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುವ ಡ್ಯಾನಿಶ್ ಸೇಠ್, ಈ ಚಿತ್ರದಲ್ಲಿ ಕಾಮಿಡಿ ಹೊರತು ಪಡಿಸಿದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಾನಿ ಆರ್ ಬಲ್ಲುಕರಾಯ, ದೀಪಂ ಕೊಹ್ಲಿ, ಕಾವ್ಯ ಶೆಟ್ಟಿ, ಭರತ್ ಜೆ.ಬಿ, ಸಿದ್ಧಾರ್ಥ್ ಮಾಧ್ಯಮಿಕ, ಉಗ್ರಂ ಮಂಜು, ಭವಾನಿ ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣ ಅಗರವಾಲ್ ನಿರ್ದೇಶಿಸಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಪ್ರೇರಣ ಅವರಿಗೆ ಇದು ಚೊಚ್ಚಲ‌ ನಿರ್ದೇಶನದ ಚಿತ್ರ. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಪ್ರೇರಣ ಸೇರಿದ್ದಾರೆ.ಚಿತ್ರದಲ್ಲಿ ನಟಿಸಿರುವ ದೀಪಂ ಕೊಹ್ಲಿ ಈ ಚಿತ್ರದ ನಿರ್ಮಾಪಕರು.ನಮ್ಮ ಚಿತ್ರತಂಡದ ಎಲ್ಲಾ ಸದಸ್ಯರು 28ರ ಆಸುಪಾಸಿನ‌ ವಯಸ್ಸಿನವರು.
ಉತ್ಸಾಹಿ ಯುವ ತಂಡದಿಂದ ಉತ್ತಮ ಚಿತ್ರವೊಂದು ತಯಾರಾಗಿದೆ. ಮಾರ್ಚ್ 4 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ದೀಪಂ ಕೊಹ್ಲಿ ತಿಳಿಸಿದ್ದಾರೆ.ಒಂದು ಹಾಡಿರುವ ಈ‌ ಚಿತ್ರಕ್ಕೆ ಜೀತ್ ಸಿಂಗ್ ಸಂಗೀತ ನೀಡಿದ್ದಾರೆ. ಸಮೀರ್ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೇಂಟರ್ ಸೆಲ್ಫಿ ಕೇಳುತ್ತಾನೆ, ರಾಖಿ ಸಾವಂತ್ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದು ಇಲ್ಲಿದೆ

Sat Feb 19 , 2022
  ರಾಖಿ ಸಾವಂತ್ ತನ್ನ ದಿಟ್ಟ ಮತ್ತು ಬಹಿರಂಗ ವರ್ತನೆಗೆ ಹೆಸರುವಾಸಿಯಾಗಿದ್ದಾಳೆ. ರಿಯಾಲಿಟಿ ಟಿವಿ ಶೋ ಬಿಗ್ ಬಾಸ್‌ನಲ್ಲಿ ಆಕೆಯ ದಿಟ್ಟ ವರ್ತನೆಯ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ತನ್ನ ಧೈರ್ಯಶಾಲಿ ವರ್ತನೆಯ ಜೊತೆಗೆ, ನಟಿ ತನ್ನ ರೀತಿಯ ಸನ್ನೆಗಳಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ವಿಫಲವಾಗುವುದಿಲ್ಲ. ಫೆಬ್ರವರಿ 18 ರಂದು ನಟಿ, ಮುಂಬೈನಲ್ಲಿ ತನ್ನ ಜಿಮ್‌ನ ಹೊರಗೆ ಪೇಂಟರ್ ಸೆಲ್ಫಿ ಕೇಳಿದಾಗ ಸಂತೋಷದಿಂದ ಅವರನ್ನು ಬಂಧಿಸಿದರು. ಮುಂಬೈನಲ್ಲಿರುವ ತನ್ನ ಜಿಮ್‌ನ […]

Advertisement

Wordpress Social Share Plugin powered by Ultimatelysocial