ಸೋಲಿಲ್ಲದ ಸರದಾರ, ಚಿನ್ನ, ಬೆಳ್ಳಿ ಗೆದ್ದ ‘ಲವ್ಲಿ ಬಾಯ್’ ಇನ್ನಿಲ್ಲ

ಬಾಗಲಕೋಟೆ: ಟಗರಿನ ಕಾಳಗಕ್ಕೆ ಹೆಸರು ಮಾಡಿದ್ದ, ₹8 ಲಕ್ಷ ಬೆಲೆಬಾಳುತ್ತಿದ್ದ ‘ಲವ್ಲಿ ಬಾಯ್’ ಟಗರು ಮಂಗಳವಾರ ಸೀಗಿಕೇರಿ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದೆ.

ನಾಟಕಕಾರ, ಕಲಾವಿದ ಎಚ್.ಎನ್.ಶೇಬನ್ನವರ ಟಗರು ಈ ಭಾಗದಲ್ಲಿಯೇ ಹೆಸರುವಾಗಿತ್ತು. ಎಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಮಾತ್ರ ಕಟ್ಟಿಟ್ಟ ಬುತ್ತಿ.

ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಕೊಟ್ಟಿದ್ದ ‘ಲವ್ಲಿ ಬಾಯ್’ ಎಂಬ ಹೆಸರಿನಿಂದಲೇ ಈ ಟಗರನ್ನು ಕರೆಯಲಾಗುತ್ತಿತ್ತು.

ಚಿನ್ನ, ಬೆಳ್ಳಿ ಅಷ್ಟೇ ಅಲ್ಲದೇ ₹10 ಲಕ್ಷ ಗಳವರೆಗಿನ ನಗದು ಬಹುಮಾನ ಗಿಟ್ಟಿಸಿಕೊಂಡಿದ್ದ ಈ ಟಗರು ಬೈಕು, ಹೋರಿ, ಪ್ರಶಸ್ತಿ ಪತ್ರ…ಹೀಗೆ ಸಾಲು ಸಾಲು ಬಹುಮಾನಗಳನ್ನು ತಂದಿತ್ತು. ₹8 ಲಕ್ಷ ಬೆಲೆಗೆ ಕೇಳಿದ್ದರೂ ಮಾಲಿಕ ಶೇಬನ್ನವರ ಟಗರು ಮಾರಿರಲಿಲ್ಲ. 6 ವರ್ಷ ವಯಸ್ಸಿನ ಟಗರನ್ನು ನೋಡಲು ಅಭಿಮಾನಿಗಳ ದಂಡೇ ಸೇರುತ್ತಿತ್ತು. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಟಗರು ಸಾವಿಗೀಡಾಗಿದ್ದು ಮಾಲಿಕ ಶೇಬನ್ನವರ ದುಃಖದ ಮಡುವಿನಲ್ಲಿದ್ದಾರೆ.

ಶ್ರದ್ಧಾಂಜಲಿ: ಸೀಗಿಕೇರಿ ಗ್ರಾಮದಲ್ಲಿ ಮೃತ ಟಗರಿಗೆ ಶ್ರದ್ಧಾಂಜಲಿ ನಡೆಯಿತು. ಮಾಲೆ, ಹಣೆಗೆ ಬೆಳ್ಳಿ, ಬಂಗಾರದ ಖಡಗ, ಭಂಡಾರ ಬಳಿದು ಪ್ರಶಸ್ತಿಗಳನ್ನು ಅದರ ಮುಂದಿಟ್ಟು ಊರಿನವರು, ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳ ಮಹಾಪೂರವೇ ಗ್ರಾಮಕ್ಕೆ ಹರಿದು ಬಂದಿದ್ದು, ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೈದ್ ದರ್ಬಾರ್ ಕುರಿತು ಗೌಹರ್ ಖಾನ್: 'ವಿಶ್ವದ ಅತ್ಯುತ್ತಮ ಪತಿಯನ್ನು ಹೊಂದಲು ನಾನು ಕೃತಜ್ಞನಾಗಿದ್ದೇನೆ'

Wed Mar 2 , 2022
ಗೌಹರ್ ಖಾನ್ ಅವರ ಪಾತ್ರಗಳಲ್ಲಿ, ಅವರು ಕೆಲಸ ಮಾಡುವ ಮಾಧ್ಯಮಗಳಲ್ಲಿ ಅಥವಾ ಅವರ ಪಾತ್ರಗಳ ಸ್ಥಾನಮಾನದಲ್ಲಿ ಪ್ರಯೋಗದಿಂದ ಎಂದಿಗೂ ದೂರವಿರದ ಉದ್ಯಮದ ನಟರಲ್ಲಿ ಒಬ್ಬರು. ಮತ್ತು ಅದು ನನ್ನನ್ನು ಅವಳ ಕಡೆಗೆ ಆಕರ್ಷಿಸುತ್ತದೆ. ಅವಳು ಯಾವಾಗಲೂ ಜೀವನದಲ್ಲಿ ಮತ್ತು ಪರದೆಯ ಮೇಲೆ ಬಲವಾದ ತಲೆಯ ಮಹಿಳೆಯಾಗಿದ್ದಾಳೆ ಮತ್ತು ನಾನು ಇತ್ತೀಚೆಗೆ ಅವಳೊಂದಿಗೆ ಮೊದಲ ಬಾರಿಗೆ ಸಂಭಾಷಿಸಿದಾಗ, ನಿಜ ಜೀವನದಲ್ಲಿಯೂ ಅವಳು ಎಷ್ಟು ಅದ್ಭುತ ವ್ಯಕ್ತಿ ಎಂದು ನಾನು ನೋಡಿದೆ. ಪ್ರಸ್ತುತ, […]

Advertisement

Wordpress Social Share Plugin powered by Ultimatelysocial