ಕೆಲ ಗಂಡಂದಿರು ಕೆಲವೊಂದು ರಹಸ್ಯಗಳನ್ನು ತಮ್ಮ ಪತ್ನಿಯರ ಜೊತೆ ಹಂಚಿಕೊಳ್ಳುವುದಿಲ್ಲ.

ಬೀಜಿಂಗ್​: ಕೆಲ ಗಂಡಂದಿರು ಕೆಲವೊಂದು ರಹಸ್ಯಗಳನ್ನು ತಮ್ಮ ಪತ್ನಿಯರ ಜೊತೆ ಹಂಚಿಕೊಳ್ಳುವುದಿಲ್ಲ. ಪತ್ನಿಗೆ ಗೊತ್ತಿಲ್ಲದಂತೆ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುತ್ತಾರೆ. ಪತ್ನಿಯನ್ನು ಯಾಮಾರಿಸುವ ಪತಿರಾಯ ಒಂದು ವೇಳೆ ಸಿಕ್ಕಿಬಿದ್ದಿರೆ ಏನಾಗಲಿದೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ತಾಜಾ ಉದಾಹರಣೆ.

ಝೌ ಎಂಬ ಉಪನಾಮ ಹೊಂದಿರುವ ಚೀನಾದ ಮೂಲದ ವ್ಯಕ್ತಿಗೆ ಇತ್ತೀಚೆಗೆ ಲಾಟರಿಯಲ್ಲಿ 10 ಮಿಲಿಯನ್​ ಯುವಾನ್ ಬಹುಮಾನವಾಗಿ ಬಂದಿತ್ತು. ಭಾರತೀಯ ಕರೆನ್ಸಿಯ ಪ್ರಕಾರ ಇದರ ಮೌಲ್ಯ 12.39 ಕೋಟಿ ರೂಪಾಯಿ. ಅದರಲ್ಲಿ ತೆರಿಗೆ ಕಡಿತದ ಬಳಿಕ 8.34 ಮಿಲಿಯನ್​ ಯುವಾನ್​ (10.15 ಕೋಟಿ ರೂಪಾಯಿ) ಪಡೆದುಕೊಂಡಿದ್ದ. ​

ಲಾಟರಿಯಲ್ಲಿ ಬಂಪರ್​ ಬಹುಮಾನ ಬಂದಿರುವ ವಿಚಾರವನ್ನು ಝೌ, ತನ್ನ ಪತ್ನಿಗೆ ಹೇಳದೆ ರಹಸ್ಯವಾಗಿ ಇಟ್ಟುಕೊಂಡಿದ್ದ. ಬಹುಮಾನದ ಹಣ ಬ್ಯಾಂಕ್​ ಖಾತೆಗೆ ಜಮಾ ಆದಾಗ, ಅದರಲ್ಲಿ 2.41 ಕೋಟಿ ರೂ. ಅನ್ನು ತನ್ನ ಅಕ್ಕನ ಖಾತೆಗೆ ವರ್ಗಾವಣೆ ಮಾಡಿದ್ದ. ಇದಾದ ಕೆಲವು ದಿನಗಳ ಬಳಿಕ 1,03,000 ಯುವಾನ್​ (13 ಲಕ್ಷ ರೂ.) ಅನ್ನು ತನ್ನ ಮಾಜಿ ಪತ್ನಿಗೆ ಜಮಾ ಮಾಡಿದ್ದ. ಒಂದು ಫ್ಲ್ಯಾಟ್​ ಖರೀದಿಸಲು ಆಕೆಗೆ ಸಹಾಯ ಮಾಡಿದ್ದ.

ಕೆಲವೇ ದಿನಗಳ ಬಳಿಕ ಪತಿ ಝೌ ಮಾಡುತ್ತಿರುವ ಮೋಸದ ಬಗ್ಗೆ ಪತ್ನಿ ಲಿನ್​ಗೆ ತಿಳಿಯಿತು. ಯಾವಾಗ ಈ ವಿಚಾರ ತಿಳಿಯಿತೋ ಗಂಡನ ಮೇಲೆ ಎಲ್ಲಿಲ್ಲದ ಕೋಪ ಬಂದಿತು. ತಕ್ಷಣ ಗಂಡನಿಂದ ಲಿನ್​ ಡಿವೋರ್ಸ್​ ಕೇಳಿದಳು. ಡಿವೋರ್ಸ್​ ಇತ್ಯರ್ಥವಾಗುವ ಬದಲು ತನಗೆ ನ್ಯಾಯ ದೊರಕಿಸಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು. ಝೌ ಅವರ ಸಹೋದರಿ ಮತ್ತು ಮಾಜಿ ಪತ್ನಿಗೆ ಕಳುಹಿಸಲಾದ ಹಣ ಸೇರಿದಂತೆ ಒಟ್ಟು 2.7 ಮಿಲಿಯನ್ ಯುವಾನ್‌ನಲ್ಲಿ ಮೂರನೇ ಎರಡರಷ್ಟು ಹಣವನ್ನು ತನಗೆ ಪಾವತಿಸಲು ಆದೇಶಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಝೌ ಅವರು ಕೆಲವು ದಿನಗಳ ಹಿಂದೆ ಲಾಟರಿ ಬಹುಮಾನ ಗೆದ್ದಿರುವುದು ಮತ್ತು ಒಂದಿಷ್ಟು ಹಣವನ್ನು ಸಹೋದರಿಗೆ ಮತ್ತು ಮಾಜಿ ಪತ್ನಿಗೆ ವರ್ಗಾಯಿಸಿರುವುದು ನ್ಯಾಯಾಲಯಕ್ಕೆ ಗೊತ್ತಾಯಿತು. ಲಾಟರಿಯಲ್ಲಿ ಗೆದ್ದ ಹಣದ ಮೇಲೆ ದಂಪತಿಗೆ ಸಮಾನ ಹಕ್ಕಿದೆ ಮತ್ತು ಅದು ಜಂಟಿ ಆಸ್ತಿಯಾಗಲಿದೆ. ಇಲ್ಲಿ ಅದನ್ನು ಝೌ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಬಳಿಕ ಲಾಟರಿಯಲ್ಲಿ ಬಂದ ಬಹುಮಾನದ ಹಣದಲ್ಲಿ ಶೇ. 60 ರಷ್ಟು ಹಣ (ಸುಮಾರು 6 ಕೋಟಿ ರೂ.) ವನ್ನು ಪತ್ನಿ ಲಿನ್​ಗೆ ನೀಡುವಂತೆ ಕೋರ್ಟ್​ ತೀರ್ಪು ನೀಡಿದೆ.

ಹೆಂಡತಿಯಿಂದ ಲಾಟರಿ ಬಹುಮಾನವನ್ನು ಮರೆಮಾಡುವುದು ಚೀನಾದಲ್ಲಿ ತಪ್ಪಲ್ಲ. ಆದರೆ, ಝೌ ಲಾಟರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಘಟನೆ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ನೀವು ಕೂಡ ನಿಮ್ಮ ಹೆಂಡತಿಯಿಂದ ಯಾವುದೇ ರಹಸ್ಯವನ್ನು ಮರೆಮಾಡಲು ಬಯಸಿದರೆ, ಎರಡು ಬಾರಿ ಯೋಚಿಸುವುದು ಒಳ್ಳೆಯದು!

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು, ಇಲ್ಲಿದೆ ಮಾಹಿತಿ

Fri Feb 17 , 2023
ಬೆಂಗಳೂರು, ಫೆಬವರಿ 17: ರಾಜ್ಯ ಬಿಜೆಪಿ ಸರ್ಕಾರದ ಬಜೆಟನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರ ಶುಕ್ರವಾರ ಮಂಡಿಸಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಭಾರೀ ಮೊತ್ತದ ಹಣವನ್ನು ನೀಡಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಸಿಎಂ ಬೊಮ್ಮಾಯಿ ಅವರು ವರ್ಗವಾರು ಹಣವಾನ್ನು ನೀಡಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂ. ಮೀಸಲು ಇಡಲಾಗಿದೆ. ಬೆಂಗಳೂರಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ ನಿರ್ಮಾಣ, […]

Advertisement

Wordpress Social Share Plugin powered by Ultimatelysocial