ಸೊನಲ್ ಮೊಂಥೆರೋ ಕೈಯಲ್ಲಿರುವ ಚಿತ್ರಗಳು ಯಾವುವು?

 

ತುಳು ಚಿತ್ರರಂಗದಿಂದ ಸ್ಯಾಂಡಲ್‌ವುಡ್‌ಗೆ ಬಂದು ‘ಪಂಚತಂತ್ರ’ ಸಿನಿಮಾದಲ್ಲಿ ತನ್ನ ನಟನೆ ಮತ್ತು ಚೆಲುವಿನಿಂದ ಗಮನ ಸೆಳೆದ ನಟಿ ಸೋನಲ್‌ ಮೊಂಥೆರೋ  ಈಗ ಕನ್ನಡ ಚಿತ್ರರಂಗದ ಬಿಝಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಕನ್ನಡದ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿರುವ ನಟಿ ಸೋನಲ್‌ ಮೊಂಥೆರೋ ಅವರು ಲವಲವಿಕೆ ಜತೆ ಮಾತನಾಡಿದ್ದಾರೆ. ಸೋನಲ್‌ ಮೊಂಥೆರೋ ಸ್ಯಾಂಡಲ್‌ವುಡ್‌ನಲ್ಲಿ ಬಿಝಿಯಾಗಲು ‘ಪಂಚತಂತ್ರ’ ಸಿನಿಮಾವೇ ಕಾರಣ ಎನ್ನುತ್ತಾರೆ. ಅದಾದ ನಂತರ ಅವರು ‘ರಾಬರ್ಟ್‌’ ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರ ಜೋಡಿಯಾಗಿ ಕಾಣಿಸಿಕೊಂಡರು. ಇದಾದ ನಂತರ ಸೋನಲ್‌ ಮೊಂಥೆರೋ ಖ್ಯಾತಿ ಜಾಸ್ತಿಯಾಯಿತು ಎನ್ನಬಹುದು. ಇವರಿಬ್ಬರದ್ದು ಬೆಸ್ಟ್‌ ಜೋಡಿ ಎಂಬ ಮಾತು ಸಹ ಕೇಳಿ ಬಂತು. ‘ನಾನು ಈಗ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಒಳ್ಳೊಳ್ಳೆ ಕಥೆಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ರಾಬರ್ಟ್‌ ನಂತರ ವಿನೋದ್‌ ಪ್ರಭಾಕರ್‌ ಅವರ ಜತೆ ‘ಮಾದೇವ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಇದರ ಜತೆಗೆ ಬಿಡುಗಡೆಗೆ ‘ನಟ್ವರ್‌ಲಾಲ್‌’ ಎಂಬ ಸಿನಿಮಾ ಸಿದ್ಧವಾಗಿದೆ. ಒಬ್ಬ ನಟಿಯಾಗಿ ವಿಭಿನ್ನ ಶೈಲಿಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಸೋನಲ್‌ ಮೊಂಥೆರೋ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದಿಶಾ ಪಟ್ಟಣದಲ್ಲಿ ನಡೆದಿದೆ.

Fri Jan 27 , 2023
ಮಧ್ಯ ಪ್ರದೇಶ (ವಿದಿಶಾ), ಜ.27- ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಬಿಜೆಪಿ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದಿಶಾ ಪಟ್ಟಣದಲ್ಲಿ ನಡೆದಿದೆ. ಕುಟುಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮಾತ್ರೆ ಸೇವಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದಿಶಾ ನಗರದ ಮಂಡಲ ಉಪಾಧ್ಯಕ್ಷ ಮತ್ತು ಬಿಜೆಪಿ ಕಾಪೆರ್ರೇಟರ್ ಸಂಜೀವ್ ಮಿಶ್ರಾ (45) ಎಂಬುವವರು ತಮ್ಮ ಮಕ್ಕಳ ಅನಾರೋಗ್ಯದ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಬರೆದುಕೊಂಡಿದ್ದರು. ತೀವ್ರವಾಗಿ […]

Advertisement

Wordpress Social Share Plugin powered by Ultimatelysocial