ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ “ಹೊಯ್ಸಳ” ಚಿತ್ರದ ಟೀಸರ್ ದಿನಾಂಕ ಅನೌನ್ಸ್ ಆಗಿದೆ .

ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ “ಹೊಯ್ಸಳ” ಚಿತ್ರದ ಟೀಸರ್ ದಿನಾಂಕ ಅನೌನ್ಸ್ ಆಗಿದೆ

ಬಹು ನಿರೀಕ್ಷಿತ “ಹೊಯ್ಸಳ” ಚಿತ್ರದ ಟೀಸರ್, 5th ಫೆಬ್ರವರಿ, ಬೆಳಿಗ್ಗೆ 9:27 ಗೆ ಬಿಡುಗಡೆಯಾಗಲಿದೆ.

ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ ಹೊಯ್ಸಳ ಚಿತ್ರ, ಡಾಲಿ ಧನಂಜಯ ಅವರ 25ನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಧನಂಜಯ ಅವರು ಖಡಕ್ ಪೊಲೀಸ್ ಆಗಿ ಕಾಣಿಸಲಿದ್ದಾರೆ.
ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಅಡಿಯಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ರವರ ನಿರ್ಮಾಣದಲ್ಲಿ, ವಿಜಯ್.ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಚಿತ್ರ ಮಾರ್ಚ್ 30th ರಂದು ಬಿಡುಗಡೆಯಾಗಲಿದೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ,
ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಕುರಿತು ಚರ್ಚೆಗೆ ಸಂಸತ್ತಿನಲ್ಲಿ ವಿಪಕ್ಷಗಳ ಪಟ್ಟು, ಸದನ ಮುಂದೂಡಿಕೆ.

Fri Feb 3 , 2023
ಹೊಸದಿಲ್ಲಿ: ಷೇರುಪೇಟೆಯಲ್ಲಿ ಕೋಲಾಹಲ ಎಬ್ಬಿಸಿದ ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಕುರಿತು ಎರಡನೇ ದಿನವೂ ಚರ್ಚೆ ಹಾಗೂ ತನಿಖೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ ಸಂಸತ್ತಿನ ಎರಡೂ ಸದನಗಳನ್ನು ಶುಕ್ರವಾರ ಮಧ್ಯಾಹ್ನದ ಊಟಕ್ಕೆ ಮುಂದೂಡಲಾಯಿತು. ಸಂಸತ್ತಿನ ಉಭಯ ಸದನಗಳು ಬೇಗನೆ ಮುಂದೂಡಲ್ಪಟ್ಟ ಒಂದು ದಿನದ ನಂತರ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ 16 ವಿರೋಧ ಪಕ್ಷಗಳ ನಾಯಕರು ಮತ್ತೊಮ್ಮೆ ಸಭೆ ನಡೆಸಿದರು. ಸಂಸದೀಯ ಸಮಿತಿ […]

Advertisement

Wordpress Social Share Plugin powered by Ultimatelysocial