ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ರದ್ದುಪಡಿಸಲು ದತ್ತವಾಗಿರುವ ಅಧಿಕಾರವನ್ನು ಅಪರೂಪಕ್ಕೆ ಬಳಸಬೇಕು!

  ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ರದ್ದುಪಡಿಸಲು ದತ್ತವಾಗಿರುವ ಅಧಿಕಾರವನ್ನು ಅಪರೂಪಕ್ಕೆ ಬಳಸಬೇಕು. ಅದು ಕೂಡಾ ಅಪರೂಪದಲ್ಲಿ ಅಪರೂಪ ಎಂಬ ಪ್ರಕರಣಗಳಿಗಷ್ಟೇ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೂವರ ವಿರುದ್ಧ ದಾಖಲಿಸಿದ್ದ ವಂಚನೆ, ನಕಲಿ ದಾಖಲೆ ಸೃಷ್ಟಿ ಕುರಿತ ಪ್ರಕರಣವನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎಸ್‌.ರವೀಂದ್ರ ಭಟ್‌ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.ಮೇಲ್ನೋಟದ ಸಾಕ್ಷ್ಯವನ್ನಷ್ಟೇ ಆಧರಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲು ಮತ್ತು ಖಾಸಗಿ ಅಥವಾ ವೈಯಕ್ತಿಕ ವೈಮನಸ್ಯದಿಂದಾಗಿ ಆರೋಪಿಗಳ ವಿರುದ್ಧದ ದ್ವೇಷಸಾಧನೆಗಾಗಿ ಪ್ರಕರಣ ದಾಖಲಿಸಿರುವ ಸಂದರ್ಭಗಳಲ್ಲಿ ಈ ಅಧಿಕಾರವನ್ನು ಬಳಸಬಹುದು ಎಂದು ಪೀಠ ಹೇಳಿತು.ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಮೊಕದ್ದಮೆ ದಾಖಲಿಸಲಾಗಿದೆ. ಸೆಕ್ಷನ್ 156 (3)ರ ಅನ್ವಯ ಮ್ಯಾಜಿಸ್ಟ್ರೇಟರು ಆದೇಶ ನೀಡುವ ಮುನ್ನ ಸುಪ್ರೀಂ ಕೋರ್ಟ್‌ ಜಾರಿಗೊಳಿಸಿರುವ ಕಾನೂನು ಅರ್ಥಮಾಡಿಕೊಂಡಿಲ್ಲ ಎಂದು ಪೀಠ ಹೇಳಿತು.ಸಿಆರ್‌ಪಿಸಿ ಕಾಯ್ದೆ 1973ರ ಸೆಕ್ಷನ್‌ 156 (3)ರಡಿ ದತ್ತವಾಗಿರುವ ಅಧಿಕಾರದಡಿ ಮ್ಯಾಜಿಸ್ಟ್ರೇಟ್‌ ಅವರು, ಅಪರಾಧ ಗೋಚರವಾಗುವ ಸಂದರ್ಭದಲ್ಲಿ ಮಾತ್ರವೇ ತನಿಖೆ ನಡೆಸುವಂತೆ ಪೊಲೀಸರಿಗೆ ಅಧಿಕಾರ ನೀಡಬಹುದಾಗಿದೆ ಎಂದು ಸ್ಪಷ್ಟಪಡಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಟೋಲ್ 'ಊಹಾತ್ಮಕ' ಕುರಿತು LIC IPO ಡೇಟಾದ ನಿಯಮಗಳು

Sat Feb 19 , 2022
  2021 ರ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ದೇಶವು ಸಾಂಕ್ರಾಮಿಕದ ವಿನಾಶಕಾರಿ ಎರಡನೇ ಅಲೆಯನ್ನು ಸಹಿಸಿಕೊಂಡಿದೆ. ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೆ ಕೋವಿಡ್ -19 ಸಾವುಗಳನ್ನು ವರದಿ ಮಾಡುವ ಅತ್ಯಂತ ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಸಾವುಗಳನ್ನು ವರದಿ ಮಾಡುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತದೆ ಎಂದು ಅದು ಹೇಳಿಕೆಯಲ್ಲಿ […]

Advertisement

Wordpress Social Share Plugin powered by Ultimatelysocial