ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳಿ ಗ್ರಾಮದಲ್ಲಿ ಇಂದು ಯುವಕರ ವತಿಯಿಂದ ಪ್ರತಿಭಟನೆ ನಡೆಸಿದರು…ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಹಾಗೂ ನಾಡು ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂಇಎಸ್ ಅವರನ್ನು ಬಂಧಿಸಬೇಕು ಎಂದು ಹೋರಾಟಗಾರರು ಹೇಳಿದರು ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದು ಹೇಳಿದರು..ನಾಡಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದಸ್ವ ಮಾಡಿದ್ದಾರೆ ಇವರನ್ನೆಲ್ಲ ಕ್ರಿಮಿನಲ್ ಕೇಸ್ ಮೇಲೆ ಬಂಧಿಸಬೇಕೆಂದು ಆಗ್ರಹಿಸಿದರು…ಪ್ರತಿಭಟನೆ ಪಾಲ್ಗೊಂಡ ಮುದುಕಪ್ಪ […]

ಅರಕಲಗೂಡು ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಭವನ ಕಳಪೆಯಾಗಿ ಕಾಮಗಾರಿ ಮಾಡಿರುವ ಬಗ್ಗೆ ವಿವಿಧ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಹೆಚ್ಚು ಗಮನಾರ್ಹ ಸುಂದರ ವಾದ ಅಂಬೇಡ್ಕರ್ ಭವನವನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿಕೊಡ ಬೇಕು ಇಲ್ಲವಾದರೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ದಲಿತ ಮುಖಂಡ ವಕೀಲರಾದ BC ರಾಜೇಶ್ ರವರು ಸುಮಾರು 20-25ವರ್ಷಗಳಿಂದ ಅಂಬೇಡ್ಕರ್ ಭವನ ವಿತ್ತುಅಂಬೇಡ್ಕರ್ ಭವನದಲ್ಲಿ […]

ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ  ಎಂದು ಆರೋಪಿಸಿದ್ದಾರೆ…ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರ ಸಭೆ ಬಳಿಕ ಮಾತನಾಡಿದ ಅವರು,ಸಿಎಂ ಕಳೆದ ಬಾರಿ ಅಧಿವೇಶನದಲ್ಲಿ ಹೇಳಿದ್ದರು.10 ದಿನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡ್ತೇನೆ ಎಂದು ಹೇಳಿದ್ರು.ಮೂರು ತಿಂಗಳು ಕಳೆದ್ರು ಮಂಡಳಿ ರಚನೆ ಆಗಿಲ್ಲ.ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 1500 ಕೋಟಿ ಘೋಷಣೆಯಾಗಿದೆ.ಇಲ್ಲಿಯವರೆಗೆ 330 ಕೋಟಿ‌ ಮಾತ್ರ ಖರ್ಚಾಗಿದೆ.ಒಂದೇ ಒಂದು ನೀರಾವರಿ ಯೋಜನೆ, ರಸ್ತೆ ಆಗಿಲ್ಲ.ಎರಡನೇ ದರ್ಜೆ […]

ಕನ್ನಡ ಬಾವುಟ ಸುಟ್ಟಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ರಾಯಣ್ಣನಿಗೆ‌ಇಂತಹ ಅವಮಾನ‌ಆಗುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…ಕನ್ನಡಿಗರ ಬಗ್ಗೆ ಮಹಾರಾಷ್ಟ್ರಕ್ಕೆ ತಾತ್ಸಾರ ಇದೆ .ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವುದುಸಹಿಸಲು ಸಾಧ್ಯವಿಲ್ಲ ವೀರ ಕನ್ನಡಿಗರ ಪೌರುಷ ಮಹಾರಾಷ್ಟ್ರ, ಎಂಇಎಸ್ ಸಂಘಟನೆಗೆ ಗೊತ್ತೇ ಇಲ್ಲ ಅದಕ್ಕೆ ಕೇವಲವಾಗಿ ನೋಡುತ್ತಿದ್ದಾರೆ..ನಾವು ಹೋರಾಟಕ್ಕೂ ಸಿದ್ಧ, ಶಾಂತಿಗೂ ಸಿದ್ದ, ಸಮರಕ್ಕೂ ಸಿದ್ಧಪ್ರೀತಿಗೂ ಸಿದ್ದ ಆದರೆ ಪದೇ ಪದೇ ರಾಜ್ಯದ ವಾಹನಗಳಿಗೆ ಹಾನಿ ಮಾಡಿದ್ದಾರೆ.ಎಲ್ಲಿಗೆ […]

ಬೆಳಗಾವಿಯ ಅಧಿವೇಶನದಲ್ಲಿ ಈಗ ಎಂಇಎಸ್‌ ಕಿಡಿಗೇಡಿಗಳ ದುಷ್ಕೃತ್ಯದ್ದೇ ಮಾತು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಪಕ್ಷಭೇಧ ಮರೆತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ದಕ್ಕೆ ತಂದಿರೋದನ್ನ ಖಂಡಿಸಿವೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಎಂಇಎಸ್‌ಪುಂಡರಿಗೆ ತಕ್ಕ ಪಾಠ ಕಲಿಸೋದಾಗಿ ಹೇಳಿದ್ರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬೀದರ್ : ಬೆಳಗಾವಿ ನಗರದಲ್ಲಿ ಕೆಲ ಪುಂಡರು ಪುಂಡಾಟಿಕೆ ನಡೆಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಮೂರ್ತಿಯನ್ನು ವಿರೂಪಗೊಳಿಸಿದ್ದಾರೆ ಹಾಗೂ ಸರ್ಕಾರಿ ವಾಹನಗಳು ಸೇರಿದಂತೆ ಅನೇಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಂಥ ಪುಂಡರ ವಿರುದ್ಧ ಮುಖ್ಯಮಂತ್ರಿಗಳು ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ […]

ಬೆಳಗಾವಿ ನಗರದಲ್ಲಿಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವ ಖಂಡಿಸಿ ಕನ್ನಡಪರ ಸಂಘಟನೆಗಳು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು ಆದರೆ 144 ಕಲಂ ಜಾರಿಯಾಗಿರುವುದರಿಂದ ಪೊಲೀಸರು ಕನ್ನಡಪರ ಸಂಘಟನೆಗಳನ್ನು ಪ್ರತಿಭಟನೆ ಮಾಡಲು ಪರವಾನಗಿ ನೀಡದೇ ಕಾರಣ ಸಂಘಟನೆ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ ಮುಂದು ಹೋಗಲು ಪ್ರಯತ್ನಿಸಿದರು ಆದರೆ ಪೊಲೀಸರು ಕನ್ನಡ ಸಾಹಿತ್ಯ ಭವನ ಗೇಟಿನ ಹೊರಗಡೆ ಹೋಗದಂತೆ ತಡೆಹಿಡಿದರು ಕೆಲವೊತ್ತು ವಾಗ್ವಾದ ಸರ್ಕಾರದ ವಿರುದ್ಧ ಘೋಷಣೆಗಳು […]

ಕರ್ನಾಟಕ- ಮಹಾರಾಷ್ಟ್ರದ ನಡುವೆ ಸಂಘರ್ಷ ಮಾಡುವ ಸಂಚು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಸಂಘರ್ಷ ಮಾಡುವ ಉದ್ದೇಶದಿಂದ, ಅರಾಜಕತೆವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆಯಿದೆ. ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.ಸುದ್ದಿಗಾರರೊದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? […]

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಬೀಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ ಎಂದು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಸಿಎಂ ಬಸವರಾಜಬೊಮ್ಮಾಯಿ […]

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕರ್ನಾಟಕ ನಾಡ ಧ್ವಜವನ್ನು ಸುಟ್ಟು ಹಾಕಿದ್ದು ವಿರೋಧಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ಚಿಂಚೋಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು .ತಾಲ್ಲೂಕು ಅಧ್ಯಕ್ಷ ಮಜರ್ ಸೌದಾಗರ ಮಾತನಾಡಿ ಯಾವುದೇ ನಾಡಿನ ಧ್ವಜ ಸುಡುವುದು ಕಾನೂನು ಬಾಹಿರವಾಗಿದೆ ಅಲ್ಲದೆ ಬೆಳಗಾವಿ ಜಿಲ್ಲೆಯು ಕರ್ನಾಟಕ ಕರ್ನಾಟಕದ್ದು ನಾಡ ಧ್ವಜ ಸುಟ್ಟುಹಾಕಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ […]

Advertisement

Wordpress Social Share Plugin powered by Ultimatelysocial