ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೊಡ್ಮನೆ ಅಭಿಮಾನಿಗಳ ಅದ್ದೂರಿಯಿಂದ ಭಜರಂಗಿ-2 ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳ್ಯದ ಶ್ರೀನಿವಾಸ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಶೋ ಆರಂಭವಾಗಿದ್ದು, ಶಿವರಾಜ್ […]

ನಟ ಶರಣ್ ಅಫೀಶಿಯಲ್ ಹೆಸರಿನಲ್ಲಿ ಆರಂಭವಾಗಿರೊ ಯೂಟ್ಯೂಬ್ ಚಾನಲ್, ಆರಂಭವಾಗಿ ಒಂದು ದಿನ ಆಗಿದೆಯಷ್ಟೆ. ಇದರ ಬಗ್ಗೆ ಇತ್ತೀಚೆಗಷ್ಟೆ ವೀಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡ ಶರಣ್, ನಾನು ನನ್ನದೇ ಆದ ಯೂಟ್ಯೂಬ್ ಚಾನೆಲ್‌ ಒಂದನ್ನು ಆರಂಭಿಸುತ್ತಿದ್ದೇನೆ. ಇದರ ಹಿಂದೆ ದೊಡ್ಡ ಉದ್ದೇಶ ಏನಿಲ್ಲ. ನನ್ನ ಜೀವನದ ಆಗುಹೋಗುಗಳು, ನನ್ನ ನಟನೆಯ ಸಿನಿಮಾ ಮಾಹಿತಿಗಳು ಹಾಗೂ ನನ್ನ ಹವ್ಯಾಸಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹೀಗಾಗಿ ಇವೆಲ್ಲವನ್ನು ಹಂಚಿಕೊಳ್ಳಲು ನನಗೆ ಇದೆ […]

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಬಾರಮುಲ್ಲಾ ಜಿಲ್ಲೆಯ ಚೆರ್ದಾರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಪಥಸಂಚಲನ ನಡೆಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಗೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.   ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada

  ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಬಿಬಿಎಂಪಿ ಕೇಂದ್ರ  ಕಛೇರಿಯ ಆವರಣದ ಮುಂಭಾಗದಲ್ಲಿ ಮಾನ್ಯ ಆಡಳಿತಗಾರರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.ಅಭಿಯಾನದ ಅಂಗವಾಗಿ ಪಾಲಿಕೆ ಅಧಿಕಾರಿ,ನೌಕರರುಗಳು, 1000ಕ್ಕೂ ಹೆಚ್ಚು ಅಧಿಕಾರಿ,ನೌಕರರು ಭಾಗವಹಿಸಿ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ಹಾಡಲಾಯಿತು ಹಾಗೂ ಸಂಕಲ್ಪ ವನ್ನು ತೆಗೆದುಕೊಳ್ಖಲಾಯಿತು…ಈ ವೇಳೆ ವಿಶೇಷ  ಆಯುಕ್ತರುಗಳು ಅಧಿಕಾರಿ,ನೌಕರರುಗಳು ಉಪಸ್ಥಿತರಿದ್ದರು ಹಾಗೂ ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿಯೂ […]

ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡುವುದಕ್ಕೆ ಭಯವೇಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವಾಜ್ ಬೊಮಾಯಿ ಅವರನ್ನು ಪ್ರಶ್ನಿಸಿದ್ದಾರೆ.ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದಕ್ಕೆ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಆದರೆ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅನ್ನುತ್ತಾರೆ. ಅವರು ಹೇಳಿದ್ದು ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಕೆ ಏಕೆ ಭಯ ಎಂದು ಪ್ರಶ್ನಿಸಿದರು.ಬಿಜೆಪಿಯವರಿಗೆ ದುಡ್ಡು ಹಂಚುವುದೇ ಕೆಲಸ. […]

ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸುವಂತೆ ಹಾಗೂ ಅದ್ದೂರಿ ರಾಜ್ಯೋತ್ಸವಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು….ಎಂ.ಇ.ಎಸ್. ಎಂಬ ನಾಡ ದ್ರೋಹಿ ಸಂಘಟನೆ ಬೆಳಗಾವಿಯಲ್ಲಿ ಕನ್ನಡಿಗರ ಭಾವನೆಗಳಿಗೆ ಪದೇ ಪದೇ ಘಾಸಿ ಉಂಟು ಮಾಡುತ್ತಿದೆ. ಮೊನ್ನೆಯೂ ಸಹ ಬೆಳಗಾವಿಯಲ್ಲಿ “ಜೈ ಮಹಾರಾಷ್ಟ್ರ” ಎಂದು ಘೋಷಣೆ ಕೂಗುವ ಮೂಲಕ ನಾಡದ್ರೋಹಿ ಕೆಲಸ ಮಾಡಿದೆ. ಇಂತಹ ಒಂದು ನಾಡದ್ರೋಹಿ ಸಂಘಟನೆಯನ್ನು ನಿಷೇದ ಮಾಡಬೇಕೆಂದು […]

Advertisement

Wordpress Social Share Plugin powered by Ultimatelysocial