ಟೈಯರ್ ಹಾಗೂ ಆಟೋಮೊಬೈಲ್ ಗೆ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಯದಗಿರಿ ಜಿಲ್ಲೆಯ ಶಹಾಪುರ್ ಪಟ್ಟಣದಲ್ಲಿ ಹೊಸ ಬಸ್ಟ್ಯಾಂಡ್ ಹತ್ತಿರ ನಡೆದಿದೆ. ಮಹಾದೇವ ಆಟೋಮೊಬೈಲ್ ಗೆ ನಿನ್ನೆ ಸಾಯಂಕಾಲ ಸುಮಾರು 7.35 ಸುಮಾರಿಗೆ ಶಾರ್ಟ್ ಸರ್ಕಿಟ್ ಇಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ರಸ್ತೆ ಸ್ಥಗಿತಗೊಂಡಿದೆ. ಸುಮಾರು 10 ಲಕ್ಷದ ಟೈಯರ್ ಗಳು ಬಸ್ಮ ವಾಗಿದ್ದು, ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಹಾಪುರ್ ನಗರ ಪೊಲೀಸ್ ಸ್ಟೇಷನ್ […]

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. 16ರಂದು 38 ಪೈಸೆ ಹೆಚ್ಚಳ ಮಾಡಲಾಗಿತ್ತು. ಈಗ ಫೆಬ್ರವರಿ 17ರಂದು […]

ತುಮಕೂರು ಜಿಲ್ಲೆಯ ಶಿರಾಗೇಟ್ ಬಳಿ ಇರುವ ಶ್ರೀದೇವಿ ಶಿಕ್ಷಣ ಸಂಸ್ಥೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶ್ರೀದೇವಿ ಮೆಡಿಕಲ್ ಕಾಲೇಜು,ಇಂಜಿನಿಯರಿಂಗ್ ಕಾಲೇಜು,ಡಿಪ್ಲೋಮಾ ಕಾಲೇಜುಗಳು ಬಿಜೆಪಿ ಮುಖಂಡ ಮಾಜಿ ಎಂಎಲ್ಸಿ ಹುಲಿನಾಯ್ಕರ್ ಒಡೆತನದ ಸಂಸ್ಥೆಯಾಗಿದೆ. ಸೋಮೇಶ್ವರದಲ್ಲಿರೋ ಹುಲಿನಾಯ್ಕರ್ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, ಐಟಿ ಅಧಿಕಾರಿಗಳ ತಂಡವು ಕಡತಗಳ ಪರಿಶೀಲನೆಯಲ್ಲಿ ತೊಡಗಿದೆ. ಇದನ್ನೂ ಓದಿ:ಕಿಡಿಗೇಡಿಗಳು ಕಟಾವು ಮಾಡಿದ್ದ ಹುರುಳಿಗೆ ಬೆಂಕಿ

ಕಿಡಿಗೇಡಿಗಳು ಕಟಾವು ಮಾಡಿದ್ದ ಹುರುಳಿಗೆ ಬೆಂಕಿ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೂತಾಂಡಹಳ್ಳಿ ಗ್ರಾಮದ ರೈತ ರಾಘವೇಂದ್ರ ಎಂಬುವರಿಗೆ ಸೇರಿದ ಮೂರು ಎಕರೆಯ ಹುರುಳಿ ಕಾಳು ಫಸಲು ಸುಟ್ಟು ಭಸ್ಮವಾಗಿದೆ.ಫಸಲು ಕಟಾವು ಮಾಡಿ ಜಮೀನಿನ ಬಳಿ ಇಡಲಾಗಿತ್ತು.ಕಳೆದ ರಾತ್ರಿ ಕಿಡಿಗೇಡಿಗಳ ಕೃತ್ಯಕ್ಕೆ ಇಡೀ ಫಸಲು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ಹುರುಳಿ ಸುಟ್ಟು ಕರಕಲಾಗಿದೆ.ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ […]

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೋರಿಯನ್ನು ಕ್ಲೀನ್ ಮಾಡಲು ಕಲ್ಲು ತೆಗೆದಾಗ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೃತದೇಹದ ಸ್ಯಾಂಪಲ್ ಪಡೆದು ಡಿಎನ್ ಎ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಳೆದ 4ವರ್ಷದ ಹಿಂದೆ ಬಿಬಿಎಂಪಿ ಮೋರಿ ಕಾಮಗಾರಿ ನಡೆಯಿತು. ಅಂದು ಕಾಮಗಾರಿ ವೇಳೆ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯೇಕ್ತವಾಗಿದೆ. 4ವರ್ಷದ ಇಚೇಗೆ ಮಿಸ್ಸಿಂಗ್ ಕಂಪ್ಲೇಂಟ್ ನಲ್ಲಿ ಪತ್ತೆಯಾಗದ ವ್ಯಕ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ […]

ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ಬಸವೇಶ್ವರ ನಗರ ಪೊಲೀಸರು. ಕುರುಬರಹಳ್ಳಿ ಮೆಡಿಕಲ್ ಶಾಪ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನ ಕದ್ದೊಯ್ದಿದ್ದ ಖದೀಮ ಜಹೀರ್ ಅಹ್ಮದ್. ಕಾರ್ಯಾಚರಣೆಯಲ್ಲಿ ಬಂಧಿತನಿಂದ 90 ಸಾವಿರ ಬೆಲೆಯ 3ದ್ವಿಚಕ್ರ ವಾಹನ ವಶ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇದನ್ನೂ ಓದಿ:ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ

ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಗಿರುವ ಘಟನೆ ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ನಡೆದಿದೆ. ಸೂರ್ಯ ಗಾರ್ಮೆಂಟ್ಸ್, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದ್ದು, ಸೂರ್ಯ ಗಾರ್ಮೆಂಟ್ಸ್ ನಲ್ಲಿ 17 ಸಾವಿರ ರುಪಾಯಿ ನಗದು, ಮತ್ತು ಲಕ್ಷಾಂತರ ಬೆಲೆಯ ಬಟ್ಟೆ ಕಳ್ಳತನ ಮಾಡಿ, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಟೂಲ್ […]

ಅಕ್ಕನ ಜೊತೆ ಪದೇ ಪದೇ ಗಲಾಟೆ ಮಾಡುತ್ತಿದ್ದ ಬಾವನ ಮೇಲೆ ರೊಚ್ಚಿಗೆದ್ದ ಬಾಮೈದ ನಿನ್ನೆ ರಾತ್ರಿ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಗರದ ನಂದಿನಿ ಲೇಔಟ್ನಲ್ಲಿ ನಡೆದಿದೆ. ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತಿದ್ದ ಅಜೀಮ್ ಹಲವು ವರ್ಷಗಳ ಹಿಂದೆ ಖಾದರ್ ಸಹೋದರಿಯನ್ನು ಮದುವೆಯಾಗಿದ್ದ. ದಂಪತಿಗಳ ನಡುವೆ ನಿನ್ನೆ ಜಗಳ ನಡೆದಿದ್ದು ಅಕ್ಕನ ಬಾವ ಗಲಾಟೆ ವಿಷಯ ಅರಿತ ಆರೋಪಿ ಖಾದರ್ ತಾನು ವಾಸವಿದ್ದ ಕೂಲಿ […]

ಪಾರಿವಾಳ ಹಿಡಿಯಲು ಹೋಗಿ ದೇವಸ್ಥಾನದ ವಿಮಾನ ಗೋಪುರದ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಯುವಕ ಸಾವು. ವಡ್ಡಗೆರೆ ಗ್ರಾಮದಲ್ಲಿರುವ ಶ್ರೀ ವೀರನಾಗಮ್ಮ ದೇವಾಲಯದ ವಿಮಾನ ಗೋಪುರದ ಮೇಲಿಂದ ಪಾರಿವಾಳ ಹಿಡಿಯಲು ಹೋದ ಯುವಕ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವಾಲಯದ ಆವರಣದಲ್ಲಿ ನಡೆದಿದೆ. ಯುವಕ ಕೊರಟಗೆರೆ ಪಟ್ಟಣದ ನಿವಾಸಿ ಆನಂದ್ 21 ವರ್ಷ ಎಂದು ತಿಳಿದುಬಂದಿದೆ.ಯುವಕನ ಶವವನ್ನು ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ವಿಷಯ […]

ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಿನಲ್ಲಿದ್ದ ಕರು ಸಜೀವ ದಹನವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಗುಡಿಸಿಲಿಗೆ ಬೆಂಕಿ ಬಿದ್ದಿದ್ದು,ಬೆಂಕಿಯ ಅವಘಡದಿಂದ ದೊಡ್ಡ ಆಲಹಳ್ಳಿಯ ಗ್ರಾಮಸ್ಥ ಕಂಗಾಲಾಗಿದ್ದಾರೆ.ದೊಡ್ಡ ಆಲಹಳ್ಳಿಯ ತಾತಯ್ಯ ಎಂಬುವರಿಗೆ ಸೇರಿದ ಕರು. ಇನ್ನು ಬೆಂಕಿ ನಿಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ :ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

Advertisement

Wordpress Social Share Plugin powered by Ultimatelysocial