ಆಯತಪ್ಪಿ ಆಕ್ಮಸಿಕವಾಗಿ ಕಾರೊಂದು ಸೇತುವೆಗೆ ಗುದ್ದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗ್ರಾಮದ ಬಳಿ ನಡೆದಿದೆ.ಮಧುಗಿರಿ ಕಡೆಯಿಂದ ಮದುವೆ ಸಮಾರಂಭ ಮುಗಿಸಿಕೊಂಡು ಬರುತ್ತಿದ್ದಾಗ ಅವಘಢ ಸಂಭವಿಸಿದ್ದು,ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಇನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ಶಾಸಕರಾದ ಡಾ ಜಿ ಪರಮೇಶ್ವರ್ ಅಪಘಾತವಾದವರನ್ನು ಕಂಡು,ತಕ್ಷಣ ತಮ್ಮ ಬೆಂಗಾವಲು ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಬೇಡವೇ ಬೇಡ ಟೋಲ್ ಶುಲ್ಕ ಬೇಡ

ಫಾಸ್ಟ್ಯಾಗ್ ಇಲ್ಲದಿರೋ ವಾಹನಗಳಿಗೆ , ಟೋಲ್ ಶುಲ್ಕ ದ್ವಿಗುಣವಾದ ಹಿನ್ನೆಲೆಯಲ್ಲಿ “ಬೇಡವೇ ಬೇಡ ಟೋಲ್ ಶುಲ್ಕ ಬೇಡ “ ಎಂಬ ಘೋಷಣೆಯೊಂದಿಗೆ ಸರ್ವ ಸಂಘಟನೆಗಳ ಒಕ್ಕೂಟದ ದಿಂದ “ಹೊಸಕೂಟೆ ಟೋಲ್” ಬಳಿ ಬೃಹತ್ ಸರ್ವಿಸ್ ರಸ್ತೆ ಕೊಡಿ ಇಲ್ಲವೇ ಟೋಲ್ ವಸೂಲಿ ಬಿಟ್ಟು ಬಿಡಿ ಎಂದು ಹೊಸಕೂಟೆ ಟೊಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಎಂ ಶಿವಕುಮಾರ್ ನಾಯಕ್ ಸರಿ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಚಿತಣ್ಣ […]

ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು..ವಿಷಯ ತಿಳಿದ ತಕ್ಷಣವೇ ಕಡೂರು ಮಾಜಿ ಶಾಸಕರು ಅದಾ YSV_ದತ್ತಣ್ಣ ನವರು ಕಡೂರು ತಾಲ್ಲೂಕ್ ಹುಲಿನಹಳ್ಳಿ ಗ್ರಾಮಕ್ಕೆ ಮಳೆ ಮತ್ತು ಕತ್ತಲನು ಲೆಕ್ಕಿಸದೆ ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಗೆ ಕರೆಮಾಡಿ ಉಳಿದ ಕುರಿಗಳಿಗೆ ಪರಿಶೀಲನೆ ಮಾಡಿ ತಕ್ಷಣ ಓಷದಿ ನೀಡಿ ಎಂದು ತಿಳಿಸಿದರು… ಹಾಗೂ ಕುರಿಗಾಯಿಗಳಿಗೆ ವಯಕ್ತಿಕ ಧನ ಸಹಾಯ ಮಾಡಿ ದ್ಯರ್ಯ ಹೇಳಿದ ಇದನ್ನೂ […]

ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕಸಿಂಗನಗುತ್ತಿ ಗ್ರಾಮದ ಬಳಿ ನಡೆದಿದೆ.ಬೆಂಕಿ ಅವಘಡದಿಂದ ಜಮೀನಿನಲ್ಲಿದ್ದ ಪಿವಿಸಿ ಪೈಪುಗಳು,ಡ್ರಿಪ್ ಪೈಪ್ ಗಳು ಸಂಪೂರ್ಣ ಸುಟ್ಟು ಹೋಗಿದೆ.ಜೊತೆಗೆ ಶೇಂಗಾ,ತೊಗರಿ,ಕಡಲೆ ಬೆಳೆಗಳು ಸುಟ್ಟು ಹಾಳಾಗಿದೆ.ಅನೇಕ ತೆಂಗಿನ ಗಿಡಗಳು ನಿಂಬೆ ಗಿಡಗಳು ಪೇರಲ ಗಿಡಗಳು ನಾಶವಾಗಿದ್ದು, ರೈತ ಶ್ರೀಧರ್ ಬಾರಿಕೇರ್ ಹಾಗೂ ಅವರ ತಾಯಿ ಕಂಗಾಲಾಗಿದ್ದಾರೆ.ಇನ್ನು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ […]

ಕಿರುತೆರೆ ಲೋಕದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದೊಡ್ಮನೆ ವಿನ್ಯಾಸ ಹೇಗಿರಲಿದೆ ಎಂಬ ಕೌತುಕದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಆರಂಭಕ್ಕಾಗಿ ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಫೆ.28ರಂದು ಅದ್ದೂರಿಯಾಗಿ ಲಾಂಚ್ ಆಗಲಿರುವ ಈ ರಿಯಾಲಿಟಿ ಶೋ ಬಗ್ಗೆ ಭಾರಿ ನಿರೀಕ್ಷೆ ಮನೆ ಮಾಡಿದೆ. ಸ್ಪರ್ಧಿಗಳು ಯಾರು ಎಂಬುದರ ಜೊತೆಗೆ ಈ […]

ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಳಿ ನಡೆದಿದೆ.ಇನ್ನು ಅಪಘಾತದಲ್ಲಿ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರೋಜ(30) ಸೋಮವ್ವ (48) ಮೃತ ದುರ್ದೈವಿಗಳು.ಇನ್ನು ಅಪಘಾತವಾದ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಾಡಾನೆಗಳ ಅಬ್ಬರಕ್ಕೆ 10-15 ತೆಂಗಿನ ಸಸಿ ನಾಶ

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಆನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದೆ. ಕಾಡಾನೆಗಳ ಅಬ್ಬರಕ್ಕೆ 10-15 ತೆಂಗಿನ ಸಸಿಗಳು ನಾಶವಾಗಿದೆ.3-5 ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು,ವೆಂಕಟಲಕ್ಷ್ಮಮ್ಮ, ಮಲ್ಲೇಶ್ ಎಂಬುವರಿಗೆ ಸೇರಿದ ಬೆಳೆಯನ್ನು ಸಂಪೂರ್ಣ ಧ್ವಂಸ ಮಾಡಿದೆ. ಕಳೆದ 1 ತಿಂಗಳಿಂದ ಸತತವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದು,ಆನೆಗಳ ದಾಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ:ಚಿರತೆ ದಾಳಿಗೆ ಕುರಿ ಸಾವು

ಚಿರತೆ ದಾಳಿಗೆ ಕುರಿ ಸಾವನಪ್ಪಿರುವ ಘಟನೆ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿಯ ವೀರಯ್ಯ ನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.ಇನ್ನು ಶಿವಣ್ಣ ಎಂಬುವರಿಗೆ ಸೇರಿದ ಕುರಿ ಎಂದು ಹೇಳಲಾಗುತ್ತಿದೆ. ತಡರಾತ್ರಿ ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ನಡೆಸಿದೆ. ಸತತ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ದಾಳಿ ಮಾಡುತ್ತಿದ್ದರೂ ನಿರ್ಲಕ್ಷ್ಯ ತೋರಿಸುತ್ತಿರುವ ಅರಣ್ಯ ಅಧಿಕಾರಿಗಳು, ಸದ್ಯ ಭಯಬೀತರಾಗಿರುವ ಸುತ್ತಮುತ್ತಲಿನ ಗ್ರಾಮಸ್ಥರು. ಇದನ್ನೂ ಓದಿ:ಮರಳನ್ನು 3000 ರಿಂದ 4000 ರೂ ಗೆ ಮಾರಾಟ

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜವಳು ಪ್ರದೇಶದ ಬೆಟ್ಟಗಳ ಕೆಳಗೆ ರೈತರ ಜಮೀನುಗಳಲ್ಲಿ ಮರಳುಗಳ್ಳರು ಹಗಲು ರಾತ್ರಿ ಎನ್ನದೇ ಮರಳನ್ನು ಅಗೆಯುತ್ತಿದ್ದಾರೆ.. ಮರಳನ್ನು ಒಂದು ಟ್ರ್ಯಾಕ್ಟರಗೆ 3000 ರಿಂದ 4000 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈ ಮರಳು ಮನೆ ಕಟ್ಟಲು ಯೋಗ್ಯವಲ್ಲವಾದರೂ ಮರಳುಗಳ್ಳರು ಮರಳನ್ನು ಹಳ್ಳದ ಮರಳು ಏಂದು ಮಾರಾಟ ಮಾಡುತ್ತಿದ್ದರೆ. ಇದರಿಂದ ಮನೆಯೂ ಎರಡು ಮೂರು ವರ್ಷದಲ್ಲಿಯೇ ಬಿಳುವ ಹಂತಕ್ಕೆ ತಲುಪುತ್ತದೆ. . ಅಕ್ರಮ ಮರಳುಗಾರಿಕೆ ನಡೆಯುತ್ತಿದರು. ಮರಳುಗಾರಿಕೆ […]

ಆನೆ ಹಿಂಡುಗಳ ದಾಳಿಯಿಂದ ರೈತನ ತಲೆ ನಜ್ಜಗುಜ್ಜಾಗಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಭತ್ತಲಹಳ್ಳಿ ಬಳಿ ಘಟನೆ ನಡೆದಿದೆ. ರಾತ್ರಿ ತೋಟದ ಬಳಿ ಕಾವಲಿಗೆಂದು ವೆಂಕಟೇಶಪ್ಪ ತೆರಳುತ್ತಿದ್ದ ವೇಳೆ ಆನೆ ಹಿಂಡುಗಳು ವೆಂಕಟೇಶಪ್ಪನ ಮೇಲೆ ದಾಳಿ ನಡೆಸಿ ತಲೆ ನಜ್ಜಗುಜ್ಜಾಗಿ ಮಾಡಿದೆ ವ್ಯೇಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಳೆದ 6 ತಿಂಗಳಲ್ಲಿ ಆನೆ ಹಿಂಡುಗಳ ದಾಳಿಗೆ 3 ನೇ ಬಲಿಯಾಗಿದ್ದು, ಆನೆ ದಾಳಿ ಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ […]

Advertisement

Wordpress Social Share Plugin powered by Ultimatelysocial