ಟ್ಯಾಂಕರ್ ಮತ್ತು ದ್ವಿಚಕ್ರವಾಹನದ ನಡುವೆ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ತಿಪಟೂರು ತಾಲ್ಲೂಕು ವೈ.ಟಿ.ರಸ್ತೆಯ ಹೆಡಗರಹಳ್ಳಿ ಬಳಿ ನಡೆದಿದೆ…ಸತತ 9 ತಿಂಗಳಿನ ನಂತರ ಆರಂಭಗೊಂಡಿರುವ ಕಾಲೇಜಿಗೆ ವಿದ್ಯಾರ್ಥಿ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು,ಶಶಾಂಕ್ (20) ಸ್ಥಳದಲ್ಲೇ ಸಾವನ್ನಪಿದ್ದಾನೆ… ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಡಿಪ್ಲಮೋ ವ್ಯಾಸಂಗ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದು ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…. ಇದನ್ನೂ ಓದಿ :ದೆಹಲಿಯಲ್ಲಿ ಚಿಕನ್ ಮಾರಾಟ ನಿಷೇಧ.!

ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗಳು ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿ ಅಥವಾ ಸಂಸ್ಕರಿಸಿದ ಕೋಳಿಗಳ ಮಾರಾಟ ಮತ್ತು ಸಂಗ್ರಹಣೆಯನ್ನು ಇಂದು ನಿಷೇಧಿಸಿವೆ. ಮೊಟ್ಟೆ ಆಧಾರಿತ ಖಾದ್ಯಗಳು ಅಥವಾ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡಿದರೆ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ಮಾಲೀಕರು ಕ್ರಮ ಎದುರಿಸಬೇಕಾಗುತ್ತದೆ. ಎಂದು ಎನ್ ಡಿಎಂಸಿ ಮತ್ತು ಎಸ್ ಡಿಎಂಸಿ ತಿಳಿಸಿದೆ. ಇದನ್ನೂ ಓದಿ :ಅರುಣಾಚಲ ಪ್ರದೇಶದ ಗಡಿಗೆ ಸಂಬಂಧ

ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ  ವಿವಾದವಿದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದೆ. ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿದೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತಿದೆ. ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್‌ ಬಳಿ ಸಂಭವಿಸಿದೆ. ತಡ ರಾತ್ರಿ ಏಂ 53 ಒಆ 4411 ಐಟ್ವೆಂಟಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದ್ದು ಕಾರು ನಜ್ಜುಗುಜ್ಜಾಗಿದೆ.ಘಟನೆಯಲ್ಲಿ ಬೆಂಗಳೂರು […]

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆ ಹಿನ್ನಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೂ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಸಭೆ ಸೇರಿದ ಜನ ನೀತಿ ಸಂಹಿತೆ ಗಾಳಿಗೆ ತೂರಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು. ಮತದಾರರ ಮುಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದರೆ 500 ಮನೆಗಳು ಅನುದಾನ ನಿಮಗೆ ಕೊಡುತ್ತೇವೆ ನೀತಿ ಸಂಹಿತೆ ಉಲಘನೆ ಮಾಡಿದ್ದಾರೆ. ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಪರಸ್ವರ ಗಲಾಟೆ, ವ್ಯಕ್ತಿ […]

ಕುಡಿದ ಮತ್ತಿನಲ್ಲಿ ಪರಸ್ಪರ ಗಲಾಟೆ ಉಂಟಾಗಿ ವ್ಯಕ್ತಿ ಕೊಲೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲುರು ಪಟ್ಟಣದ ಸಂತೆ ಬೀದಿಯಲ್ಲಿ ತಡರಾತ್ರಿ ನಡೆದಿದೆ. ಚೈನ್ ಬಾಬು ಶಶಿ ಬಳಿ ಹಣ ಸಾಲ ಪಡೆದು ವಾಪಸ್ ನೀಡಲಿಲ್ಲ ಹಣ ವಾಪಸ್ ಕೇಳಿದಕ್ಕೆ ಚೈನ್ ಬಾಬು ಹಲ್ಲೇ ಮಾಡಲು ಮುಂದಾಗಿದ್ದಾನೆ ಈ ವೇಳೆ ಶಶಿ ಮಚ್ಚಿನಿಂದ ಹಲ್ಲೇಮಾಡಿ ಕೊಲೆಗೈದಿರುವುದಾಗಿ ಠಾಣೆಯಲ್ಲಿ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. […]

ಮನೆ ಕಳವು ಮಾಡುತ್ತಿದ್ದ 3 ಜನ ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಸದ್ದುಗುಂಟೆಪಾಳ್ಯದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಹಣ ಲೂಟಿ ಮಾಡಿದ್ದ ಆರೋಪಿ ಇಮ್ರಾನ್ಅಹ್ಮದ್, ಸಯ್ಯದ್ ಜಮೀರ್, ಅಹ್ಮದ್ ಅತ್ತಿಕ್ ಪಾಷಾ, ರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4.5 ಲಕ್ಷ ಬೆಲೆಯ 100 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ :ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ

ಟ್ರಾಫಿಕ್ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಜಹಿಳೆಯಿಂದ ಲಂಚ ತೆಗೆದುಕೊಳ್ಳುತತ್ಇರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ,ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದರೆ ಇನ್ನೊಬ್ಬ ಮಹಿಳೆ ಟ್ರಾಫಿಕ್ ಪೊಲೀಸ್ ಜೊತೆ ಮಾತನಾಡುತ್ತಿದ್ದಾಳೆ, ಆ ಮಹಿಳೆಯನ್ನ ಹತ್ತಿರಕ್ಕೆ ಕರೆದು ಮಹಿಳಾ ಪೊಲೀಸ್ ಪಿಸು ಮಾತುಗಳನ್ನ ಆಡಿದ್ದಾರೆ ಕೂಡಲೇ ಮಹಿಳೆ ಹಣವನ್ನು ತೆಗೆದು ಆಕೆಯ ಪ್ಯಾಂಟ್ ಪ್ಯಾಕೆಟ್ ನೊಳಕ್ಕೆ ಹಾಕಿ ಸ್ಕೂಟಿ ಸಮೇತ […]

ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಐಷಾರಾಮಿ, ದುಬಾರಿ ಕಾರುಗಳು ಮಾತ್ರವಲ್ಲದೆ ಕಡಿಮೆ ಬೆಲೆಯ ಕಾರ್ ಗಳಲ್ಲಿಯೂ ಚಾಲಕರ ಪಕ್ಕದ ಪ್ರಯಾಣಿಕರ ಸೀಟಿಗೆ ಕಡ್ಡಾಯವಾಗಿ ಏರ್ ಬ್ಯಾಗ್ ಅಳವಡಿಸಬೇಕಿದೆ.ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ವಾಹನ ಉದ್ಯಮ ಗುಣಮಟ್ಟ ಸಮಿತಿಗೆ ಈ ಕುರಿತಾಗಿ ಸೂಚಿಸಲಾಗಿದೆ. ಇದನ್ನೂ […]

ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ ಪ್ರಕರಣ. ಪೊಲೀಸ್ ಕಾನ್ಸ್‌ಟೇಬಲ್ ಶೀಲಾ, ಹೆಡ್ ಕಾನ್ಸ್‌ಟೇಬಲ್ ಸುರೇಶ್ ನೇಣಿಗೆ ಶರಣಾದ ದಂಪತಿಗಳು. ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಶೀಲಾ‌ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ. ಡೆತ್ ನೋಟ್ ಬರೆದಿಟ್ಟು ದಂಪತಿಗಳು ಆತ್ಮಹತ್ಯೆ. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:ದೇವಸ್ಥಾನದಲ್ಲಿ ಕಳ್ಳರ ಕೈಚಳಕ

Advertisement

Wordpress Social Share Plugin powered by Ultimatelysocial