ಕೊರೊನಾ ಸೋಂಕಿತರ ಪ್ರಕರಣ ಅಮೆರಿಕದಲ್ಲಿ ವ್ಯಾಪಕಗೊಂಡಿದೆ.ಒಂದೇ ದಿನದಲ್ಲಿ 2,45,000 ಪ್ರಕರಣ ದೃಢ ಮೃತಪಡುತ್ತಿರುವವರ ಸಂಖ್ಯೆ3 ಪಟ್ಟು ಹೆಚ್ಚು. ಹೊಸ ಸೋಂಕಿತರ ಸಂಖ್ಯೆ 6 ಪಟ್ಟು ಹೆಚ್ಚು.ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಅಮೆರಿಕದಲ್ಲಿ ಒಂದೇ ದಿನ 2 ಲಕ್ಷದ 45 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, 3,600 ಮಂದಿ ಮೃತಪಟ್ಟಿದ್ದಾರೆ . 3 ತಿಂಗಳ ಹಿಂದೆ ಸೋಂಕಿನಿಂದಾಗಿ ಸಾವಿಗೀಡಾಗುತ್ತಿದ್ದವರಿಗಿಂತ ಈಗ ಮೃತಪಡುತ್ತಿರುವವರ ಸಂಖ್ಯೆ ಮೂರು […]

ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ ಸಂದರ್ಭ ಜನರು ಪಾಲಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಡಿ.30ರಿಂದ 2021ರ ಜ.2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಸೇರಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಸಾಮೂಹಿಕ ಕೂಟಗಳನ್ನು ನಿಷೇಧಿಸಿ ಆದೇಶ ಹೊರಡಿ ಸಿದೆ. ಆಚರಣೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು […]

ಕಾಂಗ್ರೆಸ್ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ,ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆಕ್ರೋಶ. ಗದಗದಲ್ಲಿ ಮಾತನಾಡಿದ ಅವರು ಸಿಎನ್ಎ ಕಾನೂನು ತಂದಾಗ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿಂದೆ ಕಾಂಗ್ರೆಸ್ ಇತ್ತು ಎಂದು […]

ಕೋಡಿಹಳ್ಳಿ ಚಂದ್ರಶೇಖರ್ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಮುಖಂಡರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಹಲವರು ಮುಷ್ಕರ ಮುಂದುವರೆಸಿದ್ದಾರೆ. ರಾಜ್ಯದ ಜನರು ಈ ದೊಂಬರಾಟವನ್ನು ಗಮನಿಸುತ್ತಿದ್ದಾರೆ ಇಲಾಖೆಗೆ ಸಂಬಂಧಿಸದ ವ್ಯಕ್ತಿಯೊಬ್ಬ ಸ್ವಪ್ರತಿಷ್ಠೆಗಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇದರ ಹಿಂದಿನ ಕೈವಾಡದ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು, […]

ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ […]

ರಾಜ್ಯದ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ಬಳಿ, ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತಾರಕಕ್ಕೆ ಏರಿದ್ದು. ಪ್ರತಿಭಟನಾ ನಿರತ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ…ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ವ್ಯಾಪಕ ಸ್ವರೂಪ ಪಡೆದಿದ್ದು. ಟೌನ್ ಹಾಲ್ ಬಳಿ ಜಮಾವಣೆಗೊಂಡಿರುವ ವಿವಿಧ ಕನ್ನಡ ಪರ ಸಂಘಟನೆಗಳು, ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿವೆ. ಟೌನ್ ಹಾಲ್ ಬಳಿ […]

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.ಕರ್ನಾಟಕ ಬಂದ್ ಹಿನ್ನೆಲೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ. ನಗರದ ಬಿಬಿಎಂಪಿ ಕಚೇರಿ ಬಳಿ ಬ್ಯಾರಿಗೇಟ್ ಹಾಕಿ ಸಂಪೂರ್ಣ ಬಂದ್ ಮಾಡಿದ್ದಾರೆ. ಇನ್ನೂ ಕೆಆರ್ ಪುರ, ಟಿನ್ ಫ್ಯಾಕ್ಟರಿ ಬಳಿ ಪೊಲೀಸರ […]

Advertisement

Wordpress Social Share Plugin powered by Ultimatelysocial