ತೆಲುಗು ನಿರ್ಮಾಪಕ ದಿಲ್ ರಾಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ.

ದ್ಯ ಕೇಳಿಬಂದಿರುವ ಹೊಸ ನ್ಯೂಸ್ ಏನೆಂದರೆ, ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು. ಅಲ್ಲಿಗೆ ಇದು ಅವರ ಮೂರನೇ ತೆಲುಗು ಸಿನಿಮಾವಾಗಲಿದೆ! ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ.
ಅವರ ಮುಂದಿನ ಸಿನಿಮಾ ‘ಸಲಾರ್’ನ ಕೆಲಸಗಳು ಬಿರುಸಿನಿಂದ ಸಾಗಿವೆ. ಸೆ. 28ರಂದು ಆ ಸಿನಿಮಾ ತೆರೆಗೆ ಬರಲಿದ್ದು’ಸಲಾರ್’ಗಾಗಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಮೊದಲ ಬಾರಿಗೆ ಒಂದಾಗಿದ್ದಾರೆ. ಸದ್ಯ ಕೇಳಿಬಂದಿರುವ ಹೊಸ ನ್ಯೂಸ್ ಏನೆಂದರೆ, ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು.

ಅಲ್ಲಿಗೆ ಇದು ಅವರ ಮೂರನೇ ತೆಲುಗು ಸಿನಿಮಾವಾಗಲಿದೆ. ‘ವಾರಿಸು’ ಸಿನಿಮಾದ ಮೂಲಕ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ತೆಲುಗು ನಿರ್ಮಾಪಕ ‘ದಿಲ್’ ರಾಜು ಸಾಲು ಸಾಲು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಅದರಲ್ಲಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೂಡ ಇದೆ. ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ, ‘ಪ್ರಶಾಂತ್ ನೀಲ್ ಜೊತೆಗೆ ‘ರಾವಣಂ’ ಎಂಬ ಸಿನಿಮಾ ಮಾಡಲಿದ್ದೇನೆ.

ಅದು ದೊಡ್ಡಮಟ್ಟದ ಸಿನಿಮಾ ಆಗಿರಲಿದೆ..’ ಎಂದು ‘ದಿಲ್’ ರಾಜು ಹೇಳಿಕೊಂಡಿದ್ದಾರೆ. ಆ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ. ‘ದಿಲ್’ ರಾಜು ಬಳಿ ನಟ ಪ್ರಭಾಸ್ ಅವರ ಕಾಲ್ಶೀಟ್ ಇದೆ. ಹಾಗಾಗಿ, ಪ್ರಶಾಂತ್ ನೀಲ್ ಮಾಡಲಿರುವ ‘ರಾವಣಂ’ ಸಿನಿಮಾಗೆ ಅವರೇ ಹೀರೋ ಆಗುವ ಸಾಧ್ಯತೆಗಳಿವೆ.

ಆದರೆ ಈ ಸಿನಿಮಾ ಸದ್ಯಕ್ಕಂತೂ ಶುರುವಾಗುವ ಲಕ್ಷಣಗಳಿಲ್ಲ. ಕಾರಣ, ಪ್ರಭಾಸ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅತ್ತ ಪ್ರಶಾಂತ್ ನೀಲ್ ಕೂಡ ‘ಸಲಾರ್’ ಮುಗಿಸಿದ ಮೇಲೆ ಎನ್ಟಿಆರ್ ಜೊತೆಗೆ ಸಿನಿಮಾ ಮಾಡಬೇಕಿದೆ. ಬಹುಶಃ ‘ದಿಲ್’ ರಾಜು ಅವರ ಈ ಕನಸಿನ ‘ರಾವಣಂ’ ಸಿನಿಮಾ 2024ರ ಅಂತ್ಯದಲ್ಲಿ ಆರಂಭವಾಗಬಹುದು ಎನ್ನಲಾಗಿದೆ.

ಮತ್ತೊಂದು ಮೂಲಗಳ ಪ್ರಕಾರ, ರಾಮ್ ಚರಣ್ ಈ ಸಿನಿಮಾದಲ್ಲಿ ಹೀರೋ ಆಗಲಿದ್ದಾರೆ ಎಂಬ ಟಾಕ್ ಕೂಡ ಇದೆ. ಯಾರೇ ಹೀರೋ ಆದರೂ, ಈ ಸಿನಿಮಾವಂತೂ ಸದ್ಯಕ್ಕೆ ಟೇಕ್ಆಫ್ ಆಗುವುದಿಲ್ಲ. ಏತನ್ಮಧ್ಯೆ, ದಿಲ್ ರಾಜು ನಿರ್ಮಾಣದಲ್ಲಿ ಶಂಕರ್ ಅವರ ಆರ್ಸಿ 15, ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಡಿ ಬಾಸ್ ದೇವಸ್ಥಾನ ಕಟ್ಟಿಸ್ತೇನೆ' ಎಂದಿದ್ದ ಅಭಿಮಾನಿ ನಿಧನ.

Wed Jan 18 , 2023
        ಬರೋಬ್ಬರಿ ಇಪ್ಪತ್ತೆರಡು ತಿಂಗಳುಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಗಣರಾಜ್ಯೋತ್ಸವದ ದಿನದಂದು ಕ್ರಾಂತಿ ಬಿಡುಗಡೆಯಾಗಲಿದ್ದು, ದರ್ಶನ್ ಅಭಿಮಾನಿಗಳು ಬಹಳ ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ. ಇದೇ ರೀತಿ ಕ್ರಾಂತಿ ಚಿತ್ರ ನೋಡಬೇಕು, ಕ್ರಾಂತಿ ಚಿತ್ರ ದಾಖಲೆಯನ್ನು ಮಾಡಬೇಕು ಎಂದು ಆಸೆಯನ್ನು […]

Advertisement

Wordpress Social Share Plugin powered by Ultimatelysocial