ಟೆಸ್ಟ್ ಕ್ರಿಕೆಟ್​ನಲ್ಲಿ 300 ರನ್ ಟಾರ್ಗೆಟ್ ಕೊಟ್ಟು ಭಾರತ ಸೋತದ್ದೇ ಇಲ್ಲ; ಇಂದು ಏನಾಗುತ್ತೆ?

cricket: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಿರ್ಣಾಯಕ ಹಂತದಲ್ಲಿದೆ. ಗೆಲ್ಲಲು 305 ರನ್ ಗುರಿ ಪಡೆದಿರುವ ಸೌತ್ ಆಫ್ರಿಕಾ 94 ರನ್​ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ. ಪಂದ್ಯದ ಎರಡನೇ ದಿನ ಮಳೆ ಅಡ್ಡಿಯಾದಂತೆ ಇಂದು ಕೊನೆಯ ದಿನವೂ ಮಳೆಯ ನಿರೀಕ್ಷೆ ಇತ್ತು.
ಆದರೆ, ಭಾರತದ ಅದೃಷ್ಟಕ್ಕೆ ಇಂದು ಆಟ ನಡೆಯುತ್ತಿದೆ.

ಮಳೆ ಬರದೇ ಎರಡು ಸೆಷೆನ್ಸ್ ಆಟ ನಡೆದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಸೌತ್ ಆಫ್ರಿಕಾ ಈಗಾಗಲೇ ಮೂರು ಪ್ರಮುಖ ಬ್ಯಾಟುಗಾರರನ್ನ ಕಳೆದುಕೊಂಡಿದೆ. ಏಡನ್ ಮರ್ಕ್ರಮ್, ಕೀಗನ್ ಪೀಟರ್ಸನ್ ಮತ್ತು ರಾಸೀ ವಾನ್ ಡರ್ ಡುಸೆನ್ ಅವರು ಪೆವಿಲಿಯನ್​ಗೆ ಮರಳಿದ್ದಾರೆ. ಕೆಳಮಧ್ಯಮ ಕ್ರಮಾಂಕದಲ್ಲಿ ಆಡುವ ಕೇಶವ್ ಮಹಾರಾಜ್ ಕೂಡ ಔಟಾಗಿದ್ಧಾರೆ. ಈಗ ಅರ್ಧಶತಕ ಗಳಿಸಿ ಬಂಡೆಯಂತೆ ನಿಂತಿರುವ ಡೀನ್ ಎಲ್ಗಾರ್, ಟೆಂಬಾ ಬವುಮಾ ಮತ್ತು ಕ್ವಿಂಟನ್ ಡೀಕಾಕ್ ಅವರಷ್ಟೇ ಪ್ರಮುಖ ಬ್ಯಾಟುಗಾರರು ಉಳಿದಿರುವುದು. ಈ ಮೂವರಲ್ಲಿ ಒಂದೆರಡು ದೊಡ್ಡ ಜೊತೆಯಾಟ ಬಂದರೆ ಮಾತ್ರ ಸೌತ್ ಆಫ್ರಿಕಾ ಗೆಲ್ಲಲು ಸಾಧ್ಯ. ಆದರೆ, ಗೆಲ್ಲಲು ಗಳಿಸಬೇಕಿರುವ 211 ರನ್​ಗಳ ಹಾದಿ ಸೌತ್ ಆಫ್ರಿಕಾಗೆ ಬಹಳ ಕಠಿಣ ಆಗಲಿದೆ.

ಮುನ್ನೂರಕ್ಕೂ ಹೆಚ್ಚು ರನ್ ಗುರಿ ಕೊಟ್ಟು ಭಾರತ ಸೋತದ್ದಿಲ್ಲ:ಒಂದು ಕುತೂಹಲಕಾರಿ ಅಂಕಿಅಂಶ ಇದೆ. ಭಾರತ ತನ್ನ ಎದುರಾಳಿಗಳಿಗೆ ಇದೂವರೆಗೆ 10 ಬಾರಿ 300ಕ್ಕೂ ಹೆಚ್ಚು ರನ್​ಗಳ ಗುರಿ ಕೊಟ್ಟಿದೆ. ಇದರಲ್ಲಿ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಒಮ್ಮೆ ಮಾತ್ರ ಪಂದ್ಯ ಡ್ರಾ ಆಗಿದೆ. ಸೌತ್ ಆಫ್ರಿಕಾಗೆ ಗೆಲ್ಲಲು 305 ರನ್ ಗುರಿ ಕೊಟ್ಟಿರುವ ಭಾರತ ಈ ಪಂದ್ಯ ಗೆಲ್ಲುವ ಸಾಧ್ಯತೆಯಂತೂ ಸದ್ಯ ದಟ್ಟವಾಗಿದೆ.

ಮಳೆ ಬರುತ್ತಾ?
ಹವಾಮಾನ ವರದಿ ಪ್ರಕಾರ ಸೆಂಚೂರಿಯನ್​ನಲ್ಲಿ ಮಧ್ಯಾಹ್ನದ ವೇಳೆ ಮಳೆ ಬರುವ ಸಾಧ್ಯತೆ ಶೇ. 65ರಷ್ಟು ಇದೆ. ಒಂದು ವೇಳೆ ಮಳೆ ಬಂದರೆ ಸಂಜೆಯ ವೇಳೆಗೆ ಕಡಿಮೆ ಆಗುತ್ತದೆ. ಆದರೆ, ಮಧ್ಯಾಹ್ನದವರೆಗೂ ಮಳೆ ಬರದೇ ಹೋದಲ್ಲಿ ಇಂದು ಬೆಳಗಿನ ಮೊದಲ ಸೆಷೆನ್ ಆಟ ನಡೆಯಲು ಅಡ್ಡಿ ಇರುವುದಿಲ್ಲ.
ಈ ಮೊದಲ ಸೆಷನ್​ನಲ್ಲಿ ಮಾಡಲಾಗುವ 30 ಓವರ್​ಗಳಲ್ಲಿ ಭಾರತದ ಬೌಲರ್​ಗಳು ಸೌತ್ ಆಫ್ರಿಕಾದ ಉಳಿದಿರುವ ಆರು ವಿಕೆಟ್​ಗಳನ್ನ ಪಡೆಯಬಲ್ಲರಾ ಕಾದು ನೋಡಬೇಕು.
ಆದರೆ, ಡೀನ್ ಎಲ್ಗಾರ್, ಟೆಂಬಾ ಬವುಮಾ ಮತ್ತು ಕ್ವಿಂಟಾನ್ ಡೀಕಾಕ್ ಅವರು ವರ್ಲ್ಡ್ ಕ್ಲಾಸ್ ಬ್ಯಾಟುಗಾರರಾಗಿದ್ದು, ಇವರು ಕಚ್ಚಿ ನಿಂತು ಆಡಿದರೆ ಭಾರತದ 305 ರನ್ ಗುರಿಯನ್ನ ಮುಟ್ಟಲು ಸೌತ್ ಆಫ್ರಿಕಾಗೆ ಸಾಧ್ಯ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಿರ್ಭಂದನೆಗಳಿಂದ ಆರ್ಥಿಕ ಪರಿಸ್ಥಿತಿ ಹಗೆಡುತ್ತೆ- ದಿದಿ

Thu Dec 30 , 2021
  ಕೊರೋನಾ ಸಂಬಂಧಿತ ನಿರ್ಬಂಧಗಳನ್ನು ಎಲ್ಲೆಡೆಯೂ ಹೇರುವುದಕ್ಕೆ ಸಾಧ್ಯವಿಲ್ಲ ಅದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮುಂದಿನ ತಿಂಗಳಿನಿಂದ ಗಂಗಾ ಸಾಗರ್ ಮೇಳ ನಡೆಯಲಿರುವ ದಕ್ಷಿಣ 24 ಪರಗಣಾಸ್ ಜಿಲ್ಲೆಯ ಸಾಗರ್ ದ್ವೀಪದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಹಲವು ಮಂದಿಗೆ ರೈಲು, ವಿಮಾಗಳಲ್ಲಿ ಪ್ರಯಾಣದ ಮಾರ್ಗ ಬದಲಾವಣೆ ಮಾಡುವ ಪ್ರದೇಶವಾಗಿರುವುದರಿಂದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial