ಈ ರಾಶಿಯವರದ್ದು ಲವ್ ಮ್ಯಾರೇಜ್​ ಆಗೋದು ಗ್ಯಾರಂಟಿಯಂತೆ

ಜೋತಿಷ್ಯದಲ್ಲಿ ಜಾತಕಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಅದರ ಪ್ರಕಾರವೇ ಮದುವೆ ಸೇರಿದಂತೆ ಅನೇಕ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಜಾತಕದಲ್ಲಿ ಮದುವೆ ಯೋಗ ಸೇರಿದಂತೆ ಜೀವನದ ಎಲ್ಲಾ ಘಟ್ಟಗಳ ಬಗ್ಗೆ ಮಾಹಿತಿ ಇರುತ್ತದೆ.

ಈ ಜಾತಕದ 7ನೇ ಮನೆಯನ್ನು ಮದುವೆಯ ಸ್ಥಾನ ಎಂದು ಹೇಳಲಾಗುತ್ತದೆ. ಆ ಜಾಗದಲ್ಲಿ ಸೂರ್ಯ, ಚಂದ್ರ ಹಾಗೂ ಲಗ್ನದ ಅನುಸಾರ ಮದುವೆಯ ಬಗ್ಗೆ ನಿರ್ಧಾರ ಮಾಡುತ್ತದೆ. ಅದರಂತೆ ಈ 5 ರಾಶಿಯವರದ್ದು ಲವ್ ಮ್ಯಾರೇಜ್ ಆಗುತ್ತಂತೆ.

ಮೇಷ ರಾಶಿ: ಈ ರಾಶಿಯವರದ್ದು ಲವ್ ಮ್ಯಾರೇಜ್ ಗ್ಯಾರಂಟಿಯಂತೆ. ಅದರಲ್ಲೂ ಇವರು ಹತ್ತಿರದ ಸಂಬಂಧಿ ಅಥವಾ ಸ್ನೇಹಿತರಲ್ಲೇ ಯಾರನ್ನಾದರೂ ಇಷ್ಟಪಟ್ಟು ಮದುವೆ ಆಗುತ್ತಾರಂತೆ. ಅಲ್ಲದೇ, ಇಷ್ಟಪಟ್ಟವರನ್ನ ಕಷ್ಟಪಟ್ಟಾದರೂ ಮದುವೆ ಆಗುತ್ತಾರೆ.

ವೃಷಭ ರಾಶಿ: ಈ ರಾಶಿಯವರು ತುಂಬಾ ಹಠಮಾರಿಗಳು. ಅವರು ಅಂದುಕೊಂಡ ಕೆಲಸ ಮಾಡಿಯೇ ಮುಗಿಸುವವರು. ಅದೆಷ್ಟೇ ಕಷ್ಟವಾದರೂ ಸರಿ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆ ಆಗುವ ಸ್ವಭಾವ ಇವರದ್ದು.

ಮಿಥುನ ರಾಶಿ: ಈ ರಾಶಿಯವರು ಸಹ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆ ಆಗುತ್ತಾರಂತೆ. ಅಲ್ಲದೇ, ತಾವು ಇದ್ದಂತೆ ಒಪ್ಪಿಕೊಳ್ಳುವ ವ್ಯಕ್ತಿಯನ್ನು ಅವರು ಆಯ್ಕೆ ಮಾಡಿ, ಜೀವನ ಸಂಗಾತಿ ಮಾಡಿಕೊಳ್ಳುತ್ತಾರೆ.

ಧನಸ್ಸು ರಾಶಿ: ಈ ರಾಶಿಯವರಿಗೆ ತಮ್ಮ ಇಷ್ಟದಂತೆ ಜೀವನ ನಡೆಸುವ ಆಸೆ ಇರುತ್ತದೆ. ಅದರಲ್ಲೂ ಸಂಗಾತಿಯ ವಿಚಾರವಾಗಿ ಅವರು ಯಾವುದೇ ಕಾರಣಕ್ಕೂ ಬೇರೆಯವರ ನಿರ್ಧಾರವನ್ನು ಒಪ್ಪುವುದಿಲ್ಲ. ಅವರಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಮಕರ ರಾಶಿ: ತಾವು ಪ್ರೀತಿಸಿದ ವ್ಯಕ್ತಿಯನ್ನು ಎಂದಿಗೂ ನಡು ನೀರಿನಲ್ಲಿ ಕೈ ಬಿಡುವುದಿಲ್ಲ. ಅದೆಷ್ಟೇ ಸವಾಲುಗಳು ಎದುರಾದರೂ ಅದನ್ನೆಲ್ಲಾ ಮೀರಿ ಗೆದ್ದು ತೋರಿಸುವ ಶಕ್ತಿ ಇವರಿಗಿದೆ. ಅಲ್ಲದೇ, ಮದುವೆಯ ವಿಚಾರದಲ್ಲಿ ಇವರ ಆಯ್ಕೆಯೇ ಕೊನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ.

Mon Feb 13 , 2023
ಬೆಂಗಳೂರು : ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ (ಫೆ 12) ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದ ವೇಳೆ ದಿಗ್ಗಜ ನಟರು, ನಿರ್ಮಾಪಕರು ಕ್ರಿಕೆಟ್ ರಂಗದ ತಾರೆಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಶೇಷವಾಗಿ ಕಾಂತಾರ ಚಿತ್ರದ ನಟ , ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಔತಣ ಕೂಟಕ್ಕೆ […]

Advertisement

Wordpress Social Share Plugin powered by Ultimatelysocial