ಅತಿಹೆಚ್ಚು ಮಾರಾಟವಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ?

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಆಪಲ್ ಕಂಪೆನಿಯ ಸ್ಮಾರ್ಟ್‌ಫೋನ್ ಒಂದು ಅಗ್ರಸ್ಥಾನಕ್ಕೇರಿದೆ. ದೇಶದಲ್ಲಿ ಮಾರಾಟವಾಗುವ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಪೈಕಿ ಹಲವು ವರ್ಷಗಳಿಂದ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಆದರೆ, ಈ ಬಾರಿ ದೇಶದಲ್ಲಿ ಮಾರುಕಟ್ಟೆಯ ಶೇ.4 ಪಾಲನ್ನು ಪಡೆಯುವ ಮೂಲಕ ಐಫೋನ್ 13 ಸಾಧನವು 2022ರ Q4 ನಲ್ಲಿ ಅತ್ಯುತ್ತಮ ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ವಿಶೇಷವೆಂದರೆ, ಆಪಲ್ ಐಫೋನ್ 13 ಸಾಧನದ ನಂತರ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳೆಲ್ಲವೂ 10 ರಿಂದ 12 ಸಾವಿರ ಬೆಲೆ ಶ್ರೇಣಿಯಲ್ಲಿವೆ2022ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಜನಪ್ರಿಯ ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 2021 ರಲ್ಲಿ iOS 15 ನೊಂದಿಗೆ ಪ್ರಾರಂಭಿಸಲಾದ ಆಪಲ್ ಕಂಪೆನಿಯ ಐಪೋನ್ 13 ಸಾಧನವು ಮೊದಲ ಸ್ಥಾನ ಪಡೆದುಕೊಂಡಿದೆ.ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಸ್ಯಾಮ್‌ಸಂಗ್ ಕಂಪೆನಿಯ ‘ಗ್ಯಾಲಕ್ಸಿ M13’ ಸ್ಮಾರ್ಟ್‌ಫೋನ್ ಪಡೆದುಕೊಂಡಿದೆ.  ಸ್ಯಾಮ್‌ಸಂಗ್ ಕಂಪೆನಿಯ ‘ಗ್ಯಾಲಕ್ಸಿ A04s’ ಕಳೆದ ದೇಶದಲ್ಲಿ ಆಗಸ್ಟ್ 2022 ರಲ್ಲಿ ಬಿಡುಗಡೆಯಾಗಿರುವ ಗ್ಯಾಲಕ್ಸಿ A04s ಸ್ಮಾರ್ಟ್‌ಫೋನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಯಿಂದ ಸಿದ್ದರಾಮಯ್ಯ ಕುರಿತು ಪುಸ್ತಕ ಬಿಡುಗಡೆ ವಿಚಾರ.

Mon Jan 9 , 2023
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನಮ್ದು ಬದುಕು, ಅವರದ್ದು ಭಾವನೆ ನಮ್ಮ ಕ್ಷೇತ್ರದಲ್ಲಿ ಒಂದು ಶಿಲೆ ಮಾಡ್ಕೊತ್ತೀವಿ ಅಂತಾ ಹೊರಟಿದ್ದೇ ೩೦೦ ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ಸೇನೆ ಆದರೆ ಅದರ ಬಗ್ಗೆ ಬಿಜೆಪಿಯವ್ರು ಮಾತಾಡಿಲ್ಲ ಆದರೆ ಸಣ್ಣ ಶಿಲೆ ಮಾಡ್ತೀನಿ ಅಂದಾಗ ಅದರ ಬಗ್ಗೆ ದೊಡ್ಡದಾಗಿ ಚರ್ಚೆ ಮಾಡಿದ್ರು ಸಂವಿಧಾನದ ಪ್ರಕಾರ ನಾವು ಕೆಲಸ ಮಾಡ್ತಿದ್ಸೇವೆ ಬಿಜೆಪಿ ಯವರಿಗೆ ಕೊವೀಡ್, ಬೆಲೆ ಏರಿಕೆ, ಉದ್ಯೋಗದ ಬಗ್ಗೆ ಮಾತಾಡ್ತಿಲ್ಲ. ಆದರೆ […]

Advertisement

Wordpress Social Share Plugin powered by Ultimatelysocial