TVS MOTORS:ಇ-ಬೈಕ್ ಕಂಪನಿಯ ಖರೀದಿಸಿದ ಟಿವಿಎಸ್ ಮೋಟಾರ್;

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟ ತೀವ್ರ ಬೆಳವಣಿಗೆ ಸಾಧಿಸುತ್ತಿದ್ದು, ಇ-ಮೊಬಿಲಿಟಿಯಲ್ಲಿ ಮುಂಚೂಣಿಗಾಗಿ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕಾಗಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೊಸ ನಿರ್ಣಯದೊಂದಿಗೆ ಇಂಧನ ಆಧರಿತ ವಾಹನ ಬಳಕೆಯನ್ನು ಕಡಿತಗೊಳಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಇವಿ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಡಚ್ ಮೂಲದ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕೂಡಾ ಇವಿ ವಾಹನ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಲ್ಲಿ ಭಾರತದ ಅತಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಸ್ವಿಸ್ ಇ-ಮೊಬಿಲಿಟಿ ಗ್ರೂಪ್‌ನಲ್ಲಿ ಶೇ.75ರಷ್ಟು ಸ್ವಾಧೀನಪಡಿಸಿಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಇವಿ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದು, ವಾರ್ಷಿಕವಾಗಿ 100 ಮಿಲಿಯನ್ ಯುಎಸ್ ಡಾಲರ್ ಆದಾಯ ಹೊಂದಿರುವ ಕಂಪನಿಯಲ್ಲಿ ಟಿವಿಎಸ್ ಮೋಟಾರ್ ಹೊಸ ಅಧ್ಯಾಯ ಆರಂಭಿಸಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಇ-ಬೈಕ್‌ಗಳನ್ನು ಉತ್ಪಾದಿಸುವ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಜರ್ಮನಿ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೀಯಾದಲ್ಲಿ ಉತ್ತಮ ಮಾರಾಟ ಜಾಲ ಹೊಂದಿದ್ದು, ಇದೀಗ ಟಿವಿಎಸ್ ಮೋಟಾರ್ ಒಡೆತನದೊಂದಿನ ಹೊಸ ಯೋಜನೆಗಳ ಮೂಲಕ ಮತ್ತಷ್ಟು ಆದಾಯ ನೀರಿಕ್ಷೆಯಲ್ಲಿದೆ.

ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕಂಪನಿಯು ಈಗಾಗಲೇ ಇ-ಬೈಕ್ ವಿಭಾಗದಲ್ಲಿ ಜನಪ್ರಿಯವಾಗಿರುವ ಸಿಲೊ, ಸಿಂಪೆಲ್, ಅಲೆಗ್ರೊ ಮತ್ತು ಜೆನಿತ್ ಇ-ಬೈಕ್ ಮಾದರಿಗಳೊಂದಿಗೆ ಭಾರೀ ಬೇಡಿಕೆ ಹೊಂದಿದ್ದು, ಭೌತಿಕವಾದ ಮಾರಾಟ ಮಳಿಗೆಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಎರಡು ಪ್ಲಾಟ್‌ಫಾರ್ಮ್‌ಗಳಲ್ಲೂ ಮುಂಚೂಣಿಯಲ್ಲಿದೆ.

ಭೌತಿಕ ಮಾರಾಟ ಮಳಿಗೆಗಳ ಮೂಲಕ ತಡೆರಹಿತ ಮತ್ತು ವಿಶ್ವದರ್ಜೆಯ ಗ್ರಾಹಕ ಅನುಭವವನ್ನು ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿರುವ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕಂಪನಿಯು ಇದೀಗ ಹೊಸ ಹೂಡಿಕೆಯೊಂದಿಗೆ ಟಿವಿಎಸ್ ಮೋಟಾರ್ ಕಂಪನಿಯೊಂದಿಗೆ ಮತ್ತಷ್ಟು ಹೊಸ ಮಾದರಿಗಳನ್ನು ಅಭಿವೃದ್ದಿಪಡಿಸಲಿದೆ.

ಯುರೋಪ್‌ನ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ನಿರ್ಮಾಣದ ಪ್ರಮುಖ ಇ-ಬೈಕ್ ಮಾದರಿಗಳು ಸುಸ್ಥಿರ ಸಾರಿಗೆಯ ಒಟ್ಟಾರೆ ಗ್ರಹಿಕೆಯಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಯುರೋಪ್‌ನಲ್ಲಿ ಮಾರಾಟವಾಗುವ ಒಟ್ಟು ಬೈಸಿಕಲ್‌ಗಳಲ್ಲಿ ಶೇಕಡಾ 16 ರಷ್ಟು ಪಾಲನ್ನು ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಪಡೆದುಕೊಂಡಿದೆ.

ಹೊಸ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಮಾತನಾಡಿರುವ ಟಿವಿಎಸ್ ಮೋಟಾರ್ ಕಂಪನಿಯ ಜಂಟಿ ಎಂಡಿ ಸುದರ್ಶನ್ ವೇಣು ಅವರು ಹೊಸ ಹೂಡಿಕೆಯೊಂದಿಗೆ ಕಂಪನಿಯು ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಭಾರತ ಸೇರಿದಂತೆ ವಿಶ್ವದ ಇತರ ಭಾಗಗಳಿಗೆ ಸ್ವಿಸ್ ಇ-ಮೊಬಿಲಿಟಿ ಉತ್ಪನ್ನಗಳನ್ನು ಪರಿಚಯಿಸುವ ಮಾಹಿತಿ ನೀಡಿದರು.

ಸದ್ಯ ಜರ್ಮನಿ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೀಯಾದಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಸ್ವಿಸ್ ಇ-ಮೊಬಿಲಿಟಿ ಉತ್ಪನ್ನಗಳು ಈ ವರ್ಷಾಂತ್ಯಕ್ಕೆ ಟಿವಿಎಸ್ ಕಾರ್ಯಾಚರಣೆ ಪ್ರಮುಖ ರಾಷ್ಟ್ರಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಇತರೆ ಇ-ಸೈಕಲ್ ಮಾದರಿಗಳಿಂತಲೂ ತುಸು ದುಬಾರಿಯಾದರೂ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಗ್ರಾಹಕರನ್ನು ಸೆಳೆಯಲಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮನುಷ್ಯನು 30 ಅಡಿ ಕೆಳಗೆ ಬಿದ್ದು ದೇಹದ ಪ್ರತಿಯೊಂದು ಮೂಳೆಯನ್ನು ಮುರಿದ ನಂತರ ಸಾವನ್ನು ಮೋಸ ಮಾಡುತ್ತಾನೆ

Sat Jan 29 , 2022
ಮೇಲ್ಛಾವಣಿಯಿಂದ 30 ಅಡಿ ಎತ್ತರಕ್ಕೆ ಬಿದ್ದು ದೇಹದ ಬಹುತೇಕ ಮೂಳೆ ಮುರಿದುಕೊಂಡಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. 53 ವರ್ಷದ ಇಯಾನ್ ಲಾಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸ್ನೇಹಿತರಿಗೆ ಆಂಟೆನಾ ಅಳವಡಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅವರು 30 ಅಡಿಗಳಷ್ಟು ಕುಸಿದರು ಮತ್ತು ಅವರ ದೇಹದ ಪ್ರತಿಯೊಂದು ಮೂಳೆಯನ್ನು ಮುರಿದರು. ನೆಲದ ಮೇಲೆ ಇಳಿದ ನಂತರ, ಅವನು ತನ್ನ ಸ್ನೇಹಿತನಿಗೆ ತನ್ನ ಕಾಲುಗಳನ್ನು ಅನುಭವಿಸುವುದಿಲ್ಲ ಎಂದು ಹೇಳಿದನು. ಅವರನ್ನು […]

Advertisement

Wordpress Social Share Plugin powered by Ultimatelysocial