ಭಾರತದಲ್ಲಿ Twitter Blue ಶುಲ್ಕ ಘೋಷಣೆ.

ನಪ್ರಿಯ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಬಿಲಿಯನೇರ್‌ ಎಲೋನ್‌ ಮಸ್ಕ್‌ ಕೈ ಸೇರಿದ ನಂತರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಟ್ವಿಟರ್‌ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಟ್ವಿಟರ್‌ ಕಂಪೆನಿಯದ್ದೇ ಸುದ್ದಿ ಟ್ರೆಂಡ್‌ ಆಗುವ ಮಟ್ಟಿಗೆ ಅನೇಕ ಬದಲಾವಣೆಗಳು ನಡೆದಿವೆ.ಎಲೋನ್‌ ಮಸ್ಕ್‌ ಟ್ವಿಟರ್‌ ಅನ್ನು ಖರೀದಿಸಿದ ನಂತರ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಬ್ಲೂಟಿಕ್‌ ಗಾಗಿ ಶುಲ್ಕ ನಿಗಧಿಪಡಿಸುವ ಪ್ರಸ್ತಾಪವೂ ಒಂದಾಗಿದೆ. ಅದರಂತೆ ಇದೀಗ ಎಲೋನ್‌ ಮಸ್ಕ್‌ ಬ್ಲೂಟಿಕ್‌ಗಾಗಿ ಎಷ್ಟು ಶುಲ್ಕ ಪಾವತಿಸಬೇಕು ಅನ್ನೊದನ್ನ ಬಹಿರಂಗಪಡಿಸಿದ್ದಾರೆ.ಇನ್ಮುಂದೆ ಟ್ವಿಟರ್‌ನಲ್ಲಿ ಬ್ಲೂಟಿಕ್‌ ಪಡೆಯಲು ಹಣ ಪಾವತಿಸಬೇಕಾಗುತ್ತದೆ. ಅದರಂತೆ ಭಾರತದಲ್ಲಿ ಟ್ವಿಟರ್‌ ಬ್ಲೂಟಿಕ್‌ನ ಬೆಲೆ ಬಹಿರಂಗವಾಗಿದೆ. ಭಾರತದಲ್ಲಿ ಡೆಸ್ಕ್‌ಟಾಪ್ ಮೂಲಕ ಟ್ವಿಟರ್‌ ಬಳಕೆ ಮಾಡುವವರಿಗೆ ಬ್ಲೂಟಿಕ್‌ ಶುಲ್ಕ 650ರೂ. ಇರಲಿದೆ. ಹಾಗೆಯೇ iOS ಮತ್ತು ಆಂಡ್ರಾಯ್ಡ್‌ ಬಳಕೆದಾರರು 900ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹಾಗಾದ್ರೆ ಟ್ವಿಟರ್‌ ಬ್ಲೂ ಶುಲ್ಕ ಎಂದಿನಿಂದ ಪ್ರಾರಂಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಎಲೋನ್‌ ಮಸ್ಕ್‌ ಟ್ವಿಟರ್‌ ಬ್ಲೂಟಿಕ್‌ನ ಚಂದಾದಾರಿಕೆಯನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಭಾರತದಲ್ಲಿ ಟ್ವಿಟರ್‌ ಬ್ಲೂ ಟಿಕ್‌ ಪಡೆಯುವುದಕ್ಕೆ ವಿಭಿನ್ನ ಚಂದಾದಾರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ಮೊಬೈಲ್‌ನಲ್ಲಿ ಟ್ವಿಟರ್‌ ಬ್ಲೂ ಟಿಕ್‌ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಂಡರೆ ತಿಂಗಳಿಗೆ 900ರೂ. ಪಾವತಿಸಬೇಕಾಗುತ್ತದೆ. ಇನ್ನು ಡೆಸ್ಕ್‌ಟಾಪ್‌ ಟ್ವಿಟರ್‌ ಬ್ಲೂಟಿಕ್‌ ಚಂದಾದಾರಿಕೆ ತಿಂಗಳಿಗೆ 650ರೂ. ಆಗಿದೆ. ಇದಲ್ಲದೆ ಟ್ವಿಟರ್ ವೆಬ್‌ನಲ್ಲಿ ವಾರ್ಷಿಕ ಚಂದಾದಾರಿಕೆಯನ್ನು ಸಹ ಘೋಷಿಸಲಾಗಿದ್ದು, ಇದು 6,800ರೂ. ಬೆಲೆಯನ್ನು ಹೊಂದಿದೆ.ಟ್ವಿಟರ್‌ ಬ್ಲೂ ಟಿಕ್‌ ಬಳಕೆದಾರರಿಗೆ ವಿಶೇಷ ಚೆಕ್‌ಮಾರ್ಕ್ ಅನ್ನು ನೀಡಲಿದೆ. ಈ ಹಿಂದೆ ಟ್ವಿಟರ್‌ ಬ್ಲೂ ಟಿಕ್‌ ಕೇವಲ ಸಾರ್ವಜನಿಕ ವ್ಯಕ್ತಿಗಳು ಮತ್ತು ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಇದೀಗ ಬ್ಲೂಟಿಕ್‌ ಎಲ್ಲರಿಗೂ ಲಭ್ಯವಾಗಲಿದೆ. ಆದರೆ ಇದಕ್ಕಾಗಿ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಬ್ಲೂಟಿಕ್‌ ಹೊಂದಿರುವ ಬಳಕೆದಾರರು ಪ್ರತ್ಯುತ್ತರಗಳು, ಮೆನ್ಶನ್‌ ಮತ್ತು ಸರ್ಚ್‌ನಲ್ಲಿ ಹೆಚ್ಚಿನ ಆದ್ಯತೆ ಹೊಂದಿರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಕಕಾಲದಲ್ಲಿ 5 ಡಿವೈಸ್​ಗಳನ್ನು ಪರಿಚಯಿಸಿದ ಒನ್​ಪ್ಲಸ್​ ಕಂಪೆನಿ!.

Thu Feb 9 , 2023
ಚೀನಾದ ಟೆಕ್ ದೈತ್ಯ ಒನ್​ ಪ್ಲಸ್   ಮೆಗಾ ಬಿಡುಗಡೆ ಸಮಾರಂಭದಲ್ಲಿ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ, ಕಂಪನಿಯು ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಒನ್​ಪ್ಲಸ್ 11 ಒನ್​ಪ್ಲಸ್s 11R, ಒನ್​ಪ್ಲಸ್ TV 65 Q2 Pro ಮತ್ತು ಒನ್​ಪ್ಲಸ್ ಬಡ್ಸ್​ ಪ್ರೋ 2 ಅನ್ನು ಬಿಡುಗಡೆ ಮಾಡಿದೆ.ಈ ಮೆಗಾ ಈವೆಂಟ್‌ನಲ್ಲಿ, ಕಂಪನಿಯು ಮೊದಲ ಟ್ಯಾಬ್ಲೆಟ್ ಆಗಿರುವ ಒನ್​ಪ್ಲಸ್ ಪ್ಯಾಡ್ ಅನ್ನು ಪರಿಚಯಿಸಿದೆ, ಇದು ಆಯಪಲ್​ ನ ಐಪ್ಗೆಯಾಡ್​ಗೆ ಸ್ಪರ್ಧಿಸಲಿದೆ. […]

Advertisement

Wordpress Social Share Plugin powered by Ultimatelysocial