ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ

ಸೂರತ್: ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ನಗ್ನ ಚಿತ್ರಗಳ ಮೂಲಕ ಬ್ಲಾಕ್‌ಮೇಲ್ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ.

ಗುಜರಾತ್ ನ ಸೂರತ್ ನಲ್ಲಿ ಈ ಘಟನೆ ನಡೆದಿದ್ದು, 23 ವರ್ಷದ ಯುವಕ ನಿಲೇಶ್ ಲಾಥಿಯಾ ವಿರುದ್ಧ 35 ವರ್ಷದ ಸಂತ್ರಸ್ಥೆ ಆರೋಪಿಸಿದ್ದಾರೆ.

ಕೆಲಸ ಕೊಡಿಸುವ ನೆಪದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ದೂರುದಾರರು ತಮ್ಮ ಪತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಮೋಟಾ ವರಚ ನಿವಾಸಿಯಾಗಿರುವ ನಿಲೇಶ್ ಲಾಥಿಯಾ ಜೊತೆಗೆ ಮಹಿಳೆಗೆ ಪರಿಚಯವಾಗಿದೆ. ಬಳಿಕ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ಸಂತ್ರಸ್ಥೆಯನ್ನು ಹೋಟೆಲ್‌ಗೆ ಕರೆಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ನಗ್ನ ಛಾಯಾಚಿತ್ರಗಳನ್ನೂ ತೆಗೆದುಕೊಂಡು ನಂತರ ಆಕೆಯನ್ನು ಬ್ಲಾಕ್‌ಮೇಲ್ ಮಾಡಲು ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆದ 10 ದಿನಗಳ ನಂತರ ನಿಲೇಶ್ ಮತ್ತೆ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಆಕೆ ತನ್ನ ಬೇಡಿಕೆಯನ್ನು ತಿರಸ್ಕರಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ನಗ್ನ ಛಾಯಾಚಿತ್ರಗಳನ್ನು ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ಆಕೆ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದೀಗ ಧೈರ್ಯ ತಂದುಕೊಂಡ ಮಹಿಳೆ, ಭಾನುವಾರ ಲಾಥಿಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನಾದಲ್ಲಿ ʼಡೈನೋಸಾರ್ ಮರಿʼ ಪತ್ತೆ : ಇದು 72 ದಶಲಕ್ಷ ವರ್ಷಗಳ ಹಿಂದೆ ಸಂರಕ್ಷಿಸಲ್ಪಟ್ಟ ʼಡೈನೋಸಾರ್ ಮೊಟ್ಟೆʼಯಂತೆ

Wed Dec 22 , 2021
ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ವಿಜ್ಞಾನಿಗಳು ಕನಿಷ್ಠ 72 ದಶಲಕ್ಷ ವರ್ಷಗಳ ಹಿಂದೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ʼನ ಭ್ರೂಣವನ್ನ ಕಂಡುಹಿಡಿದಿರುವುದಾಗಿ ಘೋಷಿಸಿದ್ದಾರೆ. ಅದು ಅದರ ಮೊಟ್ಟೆಯಿಂದ ಮೊಟ್ಟೆಯೊಡೆಯಲು ಸಿದ್ಧತೆ ನಡೆಸಿತ್ತು ಎಂದಿದ್ದಾರೆ. ಈ ಪಳೆಯುಳಿಕೆಯನ್ನ ದಕ್ಷಿಣ ಚೀನಾದ ಗಾಂಝೌ (Ganzhou)ನಲ್ಲಿ ಕಂಡುಹಿಡಿಯಲಾಗಿದೆ ಮತ್ತು ಇದು ಹಲ್ಲಿಲ್ಲದ ಥೆರೋಪಾಡ್ (Theropod) ಡೈನೋಸಾರ್ ಅಥವಾ ಒವಿರಾಪ್ಟೋರೊಸಾರ್ (Oviraptorosar) ಎಂದು ಹೇಳಲಾಗ್ತಿದೆ. ಇನ್ನು ಈ ಭ್ರೂಣಕ್ಕೆ ‘ಬೇಬಿ ಯಿಂಗ್ಲಿಯಾಂಗ್’ ಎಂದು ಹೆಸರಿಡಲಾಗಿದೆ. ಇನ್ನು ಬೇಬಿ ಯಿಂಗ್ಲಿಯಾಂಗ್ […]

Advertisement

Wordpress Social Share Plugin powered by Ultimatelysocial