ಊರ್ವಶಿ ರೌಟೆಲ್ಲಾ ತೊಟ್ಟ ಉಡುಗೆ ಬೆಲೆ 40 ಕೋಟಿ!

ನಟಿ ಊರ್ವಶಿ ರೌಟೆಲ್ಲಾ 2013 ರಲ್ಲೇ ಚಿತ್ರರಂಗ ಪ್ರವೇಶಿಸಿದ್ದಾದರೂ ಈವರೆಗೆ ನಟಿಸಿರುವುದು ಏಳು ಸಿನಿಮಾಗಳಲ್ಲಿ ಮಾತ್ರ. ಕೆಲವು ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಊರ್ವಶಿಗೆ ಸಿನಿಮಾಕ್ಕಿಂತಲೂ ಫ್ಯಾಷನ್‌ ಮೇಲೆ ಹೆಚ್ಚು ಆಸಕ್ತಿ.ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸುವ ಊರ್ವಶಿ ರೌಟೆಲಾ ಭಿನ್ನ-ವಿಭಿನ್ನ ಉಡುಗೆಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರವನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಈ ಹಿಂದೆ ಹಲವು ಬಾರಿ ಊರ್ವಶಿ ಧರಿಸಿರುವ ಫ್ಯಾಷನೆಬಲ್ ಉಡುಗೆಗಳು ಸದ್ದು ಮಾಡಿವೆ.ಇದೀಗ ಊರ್ವಶಿ ರೌಟೆಲಾ ಧರಿಸಿರುವ ಉಡುಪು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದಕ್ಕೆ ಕಾರಣ ಊರ್ವಶಿ ಈಗ ಧರಿಸಿರುವ ಉಡುಗೆಯ ಬೆಲೆ ಬರೋಬ್ಬರಿ 40 ಕೋಟಿ ರುಪಾಯಿ!ದುಬೈನಲ್ಲಿ ಅರಬ್ ಫ್ಯಾಷನ್ ವೀಕ್ ನಡೆದಿದ್ದು, ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಆಗಿ ನಟಿ ಊರ್ವಶಿ ರೌಟೆಲ್ಲಾ ಭಾಗವಹಿಸಿದ್ದರು. ಶೋ ಸ್ಟಾಪರ್ ಆಗಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ಊರ್ವಶಿ ಕಣ್ಣು ಕುಕ್ಕುವಂತೆ ಖಚಿತ ಚಿನ್ನ ಹಾಗೂ ವಜ್ರದಿಂದ ತಯಾರಿಸಿದ ಉಡುಗೆಯನ್ನು ಧರಿಸಿದ್ದರು. ಈ ಉಡುಗೆಯ ಬೆಲೆ 40 ಕೋಟಿ ರುಪಾಯಿಗಳು!ಚಿನ್ನ-ವಜ್ರದಿಂದ ಮಾಡಿದ ಉಡುಗೆ  ಬಿಯಾನ್ಸೆ, ಜೆನಿಫರ್ ಲೊಫೆಜ್ ಇನ್ನೂ ಹಲವು ಜಗತ್‌ಪ್ರಸಿದ್ಧ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನ್ ಮಾಡುವ ಫುರ್ನೊ ಒನ್ ಅಮಾಟೊ ಊರ್ವಶಿ ತೊಟ್ಟಿದ್ದ ಉಡುಗೆಯನ್ನು ಡಿಸೈನ್ ಮಾಡಿದ್ದರು. ಊರ್ವಶಿ ರೌಟೆಲ್ಲ ತೊಟ್ಟಿದ್ದ ಉಡುಗೆ ಕ್ಲಿಯೋಪಾತ್ರಾಳನ್ನು ನೆನಪಿಸುವಂತಿತ್ತು. ಮುಡಿಯಿಂದ ಅಡಿಯವರೆಗೆ ಕೇವಲ ಶುದ್ಧ ಚಿನ್ನದಲ್ಲಿ ಉಡುಗೆಯನ್ನು ಮಾಡಲಾಗಿದ್ದು, ವಜ್ರವನ್ನು ಸಹ ಬಳಸಲಾಗಿದೆ. ಉಡುಗೆ ಮಾತ್ರವಲ್ಲ ಊರ್ವಶಿಯ ತಲೆಗೂ ಚಿನ್ನದ ಆಭರಣವನ್ನು ತೊಡಿಸಲಾಗಿದೆ. ಈ ಉಡುಪಿಗೆ ಗ್ಲಾಮರ್ ಟಚ್‌ ಸಹ ನೀಡಲಾಗಿದೆ. ಊರ್ವಶಿಯ ಈ ದುಬಾರಿ ಉಡುಗೆಯ ಚಿತ್ರಗಳು ಸಾಮಾಜಿಕ ಜಾಲತಾಣದ ಇದೀಗ ವೈರಲ್ ಆಗಿದೆ.ಊರ್ವಶಿ ರೌಟೆಲ್ಲ ಹೀಗೆ ದುಬಾರಿ ಉಡುಗೆಗಳನ್ನು ಧರಿಸುತ್ತಿರುವುದು ಮೊದಲೇನೂ ಅಲ್ಲ. ಅತ್ಯುತ್ತಮ ಮಾಡೆಲ್ ಎಂದು ಗುರುತಿಸಿಕೊಂಡಿರುವ ಊರ್ವಶಿ ಈ ಹಿಂದೆ 37 ಕೋಟಿ ಮೌಲ್ಯದ ಉಡುಗೆ ತೊಟ್ಟಿದ್ದರು. ‘ಡಿವೈನ್ ಇಂಡ್‌ವೆಲ್ಲಿಂಗ್’ ಹೆಸರಿನ ಫ್ಯಾಷನ್ ಕಿರು ಚಿತ್ರದಲ್ಲಿ ಚಿನ್ನ ಹಾಗೂ ವಜ್ರದಿಂದ ಮಾಡಲ್ಪಟ್ಟಿದ್ದ 37 ಕೋಟಿ ಮೌಲ್ಯದ ಉಡುಗೆಯನ್ನು ಊರ್ವಶಿ ತೊಟ್ಟಿದ್ದರು. ಅದಕ್ಕೂ ಮುನ್ನ ಅರಬ್‌ನ ಮೊಹಮ್ಮದ್ ರಮಾದಾನ್ ಮಾಡಿದ್ದ ‘ವರ್ಸೆಸ್ ಬೇಬಿ’ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಊರ್ವಶಿ ಆ ಹಾಡಿನಲ್ಲಿ 15 ಕೋಟಿ ಮೌಲ್ಯದ ವರ್ಸೆಸ್ ಉಡುಗೆ ತೊಟ್ಟಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಯಾರಪ್ಪ ಈ ಪುಣ್ಯತ್ಮಾ; ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಯುವತಿಯಿಂದ 1.27 ಲಕ್ಷ ರೂ ಪಡೆದು ವಂಚನೆ.

Mon Jan 31 , 2022
  ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸವುದಾಗಿ ಯುವತಿಯಿಂದ 1.27 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜೇಶ್ವರ್‌ ಬಂಧಿತ. ಆರೋಪಿಯಿಂದ 1,72,500 ರೂ.ನಗದು, 3 ಮೊಬೈಲ್‌, 4 ಲ್ಯಾಪ್‌ ಟಾಪ್‌, 7 ಸಿಮ್‌ ಕಾರ್ಡ್‌, 21 ಗ್ರಾಂ ಚಿನ್ನದ ಸರ, 3 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.ರೇವಾ ಕಾಲೇಜಿನಲ್ಲಿ ಯುವತಿ ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರಿದ್ದರು. ಆದರೆ, ಆಕೆಗೆ […]

Advertisement

Wordpress Social Share Plugin powered by Ultimatelysocial