ಈಕೆ ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ

 ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ಬದಿಗೊತ್ತಿ, ಸುತ್ತಲಿನ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಮೂಲಕ ಉತ್ತರ ಪ್ರದೇಶದ ಮಹಿಳೆಯರು ವಿಶೇಷ ಸಾಧನೆ ಮಾಡಿದ್ದಾರೆ. ಅದರಲ್ಲೂ ಪ್ರಿಯಾಂಕಾ ಶರ್ಮಾ ಎಂಬಾಕೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರದಿಂದ ನೇಮಕವಾದ 26 ಸರ್ಕಾರಿ ಮಹಿಳಾ ಬಸ್​ ಚಾಲಕಿಯರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಪ್ರಿಯಾಂಕಾ ಶರ್ಮಾ ಅವರು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC)ಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದು, ಉತ್ತರ ಪ್ರದೇಶದ ಮೊದಲ ಮಹಿಳಾ ಬಸ್​ ಡ್ರೈವರ್​ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, ನನ್ನ ಗಂಡ ಅತಿಯಾದ ಕುಡಿತದ ಚಟದಿಂದ ಮದುವೆಯಾದ ಕೆಲವೇ ವರ್ಷದಲ್ಲಿ ಮೃತಪಟ್ಟರು. ಇಬ್ಬರು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಒಳ್ಳೆಯ ಅವಕಾಶಗಳಿಗಾಗಿ ನಾನು ದೆಹಲಿಗೆ ಸ್ಥಳಾಂತರವಾಗಿದ್ದೆ. ಆರಂಭದಲ್ಲಿ ಒಂದು ಕಾರ್ಖಾನೆಯಲ್ಲಿ ಸಹಾಯಕಳಾಗಿ ಕೆಲಸ ಗಿಟ್ಟಿಸಿಕೊಂಡಿದ್ದೆ. ಆದರೆ, ನಂತರದಲ್ಲಿ ಡ್ರೈವರ್​ ಆಗಿ ಕೆಲಸ ಪಡೆದುಕೊಂಡೆ. ಡ್ರೈವಿಂಗ್​ ಕೋರ್ಸ್​ ಮುಗಿಸಿದ ಬಳಿಕ ಮುಂಬೈಗೆ ಸ್ಥಳಾಂತರವಾದೆ. ಅಲ್ಲದೆ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಂತಹ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾ ಕೆಲಸ ಮಾಡಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಮಹಿಳೆಯರಿಗೆ ಚಾಲಕಿಯರಾಗುವ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಪ್ರಿಯಾಂಕಾ ಧನ್ಯವಾದ ತಿಳಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಗೆ ಶಿವನ ವಿಗ್ರಹ ನೀಡಿದ ಮುಸ್ಲಿಂ ಮಹಿಳೆ

Fri Dec 23 , 2022
     ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಇಂದು ಹರಿಯಾಣದಲ್ಲಿ ಕೊನೆಗೊಳ್ಳಲಿದೆ. ನಾಳೆ (ಡಿಸೆಂಬರ್ 24) ಬೆಳಿಗ್ಗೆ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲಿದೆ. ದೆಹಲಿಯ ಪ್ರಮುಖ ಮಾರ್ಗಗಳಲ್ಲಿ ವ್ಯಾಪಕ ಬಂದೋಬಸ್ತ್‌ ಅನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿಗೆ ಪ್ರವೇಶಿಸುತ್ತಿರುವ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುವುದು ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ. ಕೋವಿಡ್‌ನ ಹೊಸ ತಳಿಯ ಆತಂಕದ ನಡುವೆಯೇ, ಯಾತ್ರೆಗೆ ಜನಬೆಂಬಲ ದೊರೆಯುತ್ತಿದೆ. ದೇಶದಾದ್ಯಂತ ಹಲವು ರಾಜಕೀಯ ನಾಯಕರು, […]

Advertisement

Wordpress Social Share Plugin powered by Ultimatelysocial