CRICKET:ರಿಷಭ್ ಪಂತ್ ಹುಡುಗಾಟ;

ಟೀಂ ಇಂಡಿಯಾದಲ್ಲಿ ಸದ್ಯ ಬ್ಯಾಟಿಂಗ್ ವಿಭಾಗದ ಚಿಂತೆ ಹೆಚ್ಚಾಗತೊಡಗಿದೆ. ಅದ್ರಲ್ಲೂ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ನಾಯಕ ಕೊಹ್ಲಿ ತಲೆಗೆಡಿಸಿದೆ. ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಸತತ ವೈಫಲ್ಯವು ಟೀಂ ಇಂಡಿಯಾಗೆ ಹೊಡೆತ ನೀಡಿದೆ.

ಇದ್ರ ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಹುಡುಗಾಟ ತಂಡಕ್ಕೆ ಬೆಲೆ ತೆರುವಂತಾಗಿದೆ.

ಹೌದು ಪೂಜಾರ, ರಹಾನೆ ಜೊತೆಗೆ ರಿಷಭ್ ಪಂತ್ ಕೂಡ ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಟೆಸ್ಟ ಕ್ರಿಕೆಟ್‌ನಲ್ಲಿ ಜವಾಬ್ದಾರಿಯುತವಾಗಿ ಓರ್ವ ಬ್ಯಾಟ್ಸ್‌ಮನ್ ಆಗಿ ಇಲ್ಲಿಯವರೆಗೂ ಕಾಣಿಸಿಕೊಳ್ಳದ ಪಂತ್ ಸುಲಭವಾಗಿ ವಿಕೆಟ್ ಕೈ ಚೆಲ್ಲಿ ಪೆವಿಲಿಯನ್ ಸೇರಿಕೊಳ್ಳುತ್ತಿರುವುದು ಟೀಕಾಕಾರರ ಕಣ್ಣು ಕೆಂಪಾಗಿಸಿದೆ.

ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ನೋಡಿದ್ರೆ ಅತ್ಯಂತ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸುವುದರ ಜೊತೆಗೆ, ಒಂದೇ ಕೈನಲ್ಲಿ ಬ್ಯಾಟ್‌ ಬೀಸುವುದು ಕ್ರಿಕೆಟ್ ಪಂಡಿತರ ಟೀಕೆಗೆ ಕಾರಣವಾಗಿದೆ.

ರಿಷಭ್ ಪಂತ್ 14 ಇನ್ನಿಂಗ್ಸ್‌ನಲ್ಲಿ ಗಳಿಸಿದ್ದು 1 ಅರ್ಧಶತಕಹೌದು ರಿಷಬ್ ಪಂತ್ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಬಾರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿಯೂ ತುಂಬಾ ಕುಸಿದಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಸಹಾ ಜವಾಬ್ದಾರಿಯುತವಾಗಿ ಆಡಿದ್ದರು. ಆದರೆ ವಿರಾಟ್ ಕೊಹ್ಲಿ , ದ್ರಾವಿಡ್ ಬೆಂಬಲವನ್ನೇ ತನ್ನ ಬಲವಾಗಿರಿಸಿಕೊಂಡಿರುವ ರಿಷಬ್ ಪಂತ್‌ ಸಿಕ್ಕ ಅವಕಾಶದಲ್ಲಿ ಉತ್ತಮ ಆಟವಾಡಲು ವಿಫಲಗೊಂಡಿದ್ದಾರೆ.

ಕೇವಲ ವಿಕೆಟ್ ಕೀಪರ್ ಆಗಿ ಅಷ್ಟೇ ತಂಡಕ್ಕೆ ಕೊಡುಗೆ ನೀಡುವುದಷ್ಟೇ ಅಲ್ಲದೆ, ಆತನನ್ನ ಓರ್ವ ಬ್ಯಾಟ್ಸ್‌ಮನ್ ಆಗಿಯೂ ತಂಡಕ್ಕೆ ಆಯ್ಕೆ ಮಾಡಿರಲಾಗುತ್ತದೆ. ಆದ್ರೆ ಪಂತ್ ತಮ್ಮ ಬ್ಯಾಟಿಂಗ್ ಅನ್ನೇ ಮರೆತಂತಿದೆ.

ಕೆಟ್ಟ ಶಾಟ್‌ಗೆ ಔಟಾಗಿದ್ದ ಪಂತ್‌

ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಅತ್ಯಂತ ಕೆಟ್ಟ ಶಾಟ್ ಆಡಿ ಡಕ್ ಔಟ್ ಆಗಿದ್ದ ರಿಷಭ್ ಪಂತ್, ಕೇಪ್‌ಟೌನ್‌ನಲ್ಲಿ ಐವತ್ತು ಅಥವಾ ಶತಕ ಬಾರಿಸುವ ನಿರೀಕ್ಷೆ ಇತ್ತು. ಅದಕ್ಕೆ ತಕ್ಕ ಹಾಗೆ ತಾಳ್ಮೆಯ ಆಟವಾಡದ ರಿಷಭ್ ಮತ್ತೊಮ್ಮೆ ಕಡಿಮೆ ರನ್‌ಗೆ ವಿಕೆಟ್ ಒಪ್ಪಿಸಿದ್ರು. ವಿರಾಟ್ ಕೊಹ್ಲಿ ಜೊತೆ 50 ರನ್ ಜೊತೆಯಾಟ ನೀಡಿದ್ದೇ ಹೆಚ್ಚು.

27ರನ್‌ಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿದ ರಿಷಭ್

50 ಎಸೆತಗಳಲ್ಲಿ 27 ರನ್ ಗಳಿಸಿದ್ದ ರಿಷಭ್ ಪಂಟ್, ಮಾರ್ಕೊ ಯಾನ್ಸನ್ ಎಸೆತದಲ್ಲಿ ನೇರವಾಗಿ ಫಿಲ್ಟರ್ ಗೆ ಕ್ಯಾಚ್ ನೀಡಿದರು. ಹೀಗಾಗಿ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಅಶ್ವಿನ್ ಕೂಡ 2 ರನ್ ಗಳಿಸಿ ಔಟಾದಾಗ ಭಾರತ ತಂಡ 175 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಮುಗ್ಗರಿಸಿತು.

ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ವಿರಾಟ್ ಕೊಹ್ಲಿ ಐವತ್ತು ದಾಟಿದರು. ಇದು ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ವಿರಾಟ್ ಕೊಹ್ಲಿ ಆಕರ್ಷಕವಾಗಿ ಕವರ್ ಡ್ರೈವ್ ಶಾಟ್ ಗಳಿಗೆ ಆಡಿ ರನ್ ಸೇರಿಸಿದ್ರು. ವಿರಾಟ್ ಕೊಹ್ಲಿ 71ನೇ ಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ನಂಬಿದ್ದರು. ಆದ್ರೆ ಈ ಆಸೆಗೆ ಕಗಿಸೊ ರಬಾಡ ತಣ್ಣೀರೆರಚುವ ಮೂಲಕ ವಿರಾಟ್ ವಿಕೆಟ್ ಪಡೆದರು.

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ 223 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ವಿಕೆಟ್ ಕಳೆದುಕೊಂಡು 17ರನ್ ಕಲೆಹಾಕಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BULLS:ಬೆಂಗಳೂರು ಬುಲ್ಸ್‌ಗೆ ಇಂದು ಬಲಿಷ್ಠ ಡೆಲ್ಲಿ ಸವಾಲು;

Wed Jan 12 , 2022
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 11ರ ಮಂಗಳವಾರದವರೆಗೂ ಒಟ್ಟು 48 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಪಾಟ್ನಾ ಪೈರೇಟ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಬೆಂಗಳೂರು ಬುಲ್ಸ್ ತೃತೀಯ ಸ್ಥಾನದಲ್ಲಿವೆ. ಹೀಗೆ ಈ ಬಾರಿಯ […]

Related posts

Advertisement

Wordpress Social Share Plugin powered by Ultimatelysocial