ರೈತರಿಗೆ ಭರ್ಜರಿ ಸುದ್ದಿ! ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್‌ನ 10ನೇ ಕಂತಿನ ಹಣ

PM Kisan Update: ರೈತರಿಗೆ ಭರ್ಜರಿ ಸುದ್ದಿ! ಈ ದಿನ ಖಾತೆಗೆ ಬರಲಿದೆ ಪಿಎಂ ಕಿಸಾನ್‌ನ 10ನೇ ಕಂತಿನ ಹಣ

ನವದೆಹಲಿ: PM Kisan 10th Installment Update:- ರೈತರಿಗೆ ಸಂತಸದ ಸುದ್ದಿಯಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ 10ನೇ ಕಂತಿನ ಹಣಕ್ಕಾಗಿ ಕಾಯುವಿಕೆ ಕೊನೆಗೊಳ್ಳಲಿದೆ. ವಾಸ್ತವವಾಗಿ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ ಕಂತಿನ ಹಣ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ.

ಇದರ ಸಂದೇಶವನ್ನು ಫಲಾನುಭವಿಗಳಿಗೂ ರವಾನಿಸಲಾಗಿದೆ. ಈ ನಿಟ್ಟಿನಲ್ಲಿ ಜನವರಿ 1ರಂದು ಪ್ರಧಾನಿ ಮೋದಿ(Narendra Modi) ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.

10ನೇ ಕಂತಿನ ಹಣ ಯಾವಾಗ ಬರುತ್ತೆ?

ರೈತರಿಗೆ ಕಳುಹಿಸಿದ ಸಂದೇಶದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2022ರಂದು ಮಧ್ಯಾಹ್ನ 12 ಗಂಟೆಗೆ ಪಿಎಂ ಕಿಸಾನ್ ಯೋಜನೆ(PM Kisan Samman Nidhi Yojana)ಯಡಿ 10ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಈ ದಿನ ಪ್ರಧಾನಿ ಮೋದಿ ಅವರು ರೈತ ಉತ್ಪಾದಕ ಸಂಸ್ಥೆಗಳಿಗೆ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ರೈತರು pmindiawebcast.nic.in ಅಥವಾ ದೂರದರ್ಶನ ಮೂಲಕ ಈ ಕಾರ್ಯಕ್ರಮಕ್ಕೆ ಸೇರಬಹುದು.

ಇದನ್ನೂ ಓದಿ: ಈಗ ಹಣ ಪಾವತಿಸದೇ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು, ಈ ಮಾರ್ಗವನ್ನು ಅಳವಡಿಸಿಕೊಂಡರೆ ಸಾಕು

ನೀವೂ ಈ ರೀತಿ ಪರಿಶೀಲಿಸಿ

ನೀವು ‘ಪಿಎಂ ಕಿಸಾನ್’ ಯೋಜನೆ(PM Kisan Samman Nidhi Scheme)ಗೆ ನೋಂದಾಯಿಸಿದ್ದರೆ ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದರ ಬಗ್ಗೆ ಪರಿಶೀಲಿಸಬಹುದು. ಇಲ್ಲಿ ನೀಡಲಾದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಬಹುದು.

ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ

1) ಮೊದಲು ನೀವು ‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ’ಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ.

2) ಈಗ ಅದರ ಮುಖಪುಟದಲ್ಲಿ ನೀವು Farmers Corner ಆಯ್ಕೆಯನ್ನು ನೋಡುತ್ತೀರಿ.

3) Farmers Corner ವಿಭಾಗದಲ್ಲಿ ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

4) ಈಗ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.

5) ಇದರ ನಂತರ ನೀವು ‘Get Report’ ಮೇಲೆ ಕ್ಲಿಕ್ ಮಾಡಿ.

6) ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಇದನ್ನೂ ಓದಿ: Post Office ಈ ಸೂಪರ್‌ಹಿಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ ಪಡೆಯಿರಿ

ನಿಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಿ

1) ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.

2) ಈಗ ಬಲಭಾಗದಲ್ಲಿರುವ Farmers Corner ಮೇಲೆ ಕ್ಲಿಕ್ ಮಾಡಿ.

3) ಇದರ ನಂತರ ನೀವು ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

4) ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.

5) ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

6) ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್​ ಮಾಡಿದ `ಶ್ರೀವಲ್ಲಿ'!

Thu Dec 23 , 2021
  ರಶ್ಮಿಕಾ ಮಂದಣ್ಣ ಯಾವುದೇ ಚಿತ್ರರಂಗದತ್ತ ನೋಡಿದರೂ ಅಲ್ಲಿ ರಶ್ಮಿಕಾ ಮಂದಣ್ಣ ಇರುತ್ತಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಿರಿಕ್​ ಪಾರ್ಟಿ  ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಕರ್ನಾಟಕ ಕ್ರಶ್​  ಎನಿಸಿಕೊಂಡಿದ್ದರು. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಇದೀಗ ನ್ಯಾಷನಲ್​ ಕ್ರಶ್ ​ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಏನ್​ ಮಾಡಿದರು ಸುದ್ದಿಯಾಗುತ್ತೆ. ಅದರಲ್ಲೂ ಕನ್ನಡ ಬಗ್ಗೆ ನಟಿ ತೋರಿಸಿರುವ ನಿರ್ಲಕ್ಷ್ಯ ಮಾತ್ರ ಕನ್ನಡಿಗರ […]

Advertisement

Wordpress Social Share Plugin powered by Ultimatelysocial