2022ರಲ್ಲಿ ಪದವಿ ಪಡೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ- ಟಿಸಿಎಸ್​ನಿಂದ ಅರ್ಜಿ ಆಹ್ವಾನ

TCS BPS Hiring : 2022ರಲ್ಲಿ ಪದವಿ ಪಡೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ- ಟಿಸಿಎಸ್​ನಿಂದ ಅರ್ಜಿ ಆಹ್ವಾನ
ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಫ್ರೆಶರ್ಸ್ಗೆ ಬಂಪರ್ ಆಫರ್ ನೀಡಿದ್ದು, ಐಟಿ ಉದ್ಯಮದಲ್ಲಿ ಫ್ರೆಶರ್ಸ್ ಉದ್ಯೋಗಗಳನ್ನ ನೇಮಕ ಮಾಡಿಕೊಳ್ಳಲು ಟಿಸಿಎಸ್ ನಿರ್ಧರಿಸಿದೆ. ಪದವೀಧರರ ಸಿದ್ಧತೆಯನ್ನು ಪರಿಶೀಲಿಸುವ ರಾಷ್ಟ್ರವ್ಯಾಪಿ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ.
BPS ನೇಮಕಾತಿಗಾಗಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ವಿದ್ಯಾರ್ಹತೆ B.Com, BA, BAF, BBI, BBA, BBM, BMS, BSc – IT/CS/General, BCA, BCS, B.Pharm, M.Pharm
ಪರೀಕ್ಷೆ ದಿನಾಂಕ 26, 2022
ಆಯ್ಕೆ ಹೇಗೆ ಆನ್​ಲೈನ್​ನಲ್ಲಿ TCS iON (NQT) ಪರೀಕ್ಷೆ
ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7

ವಿದ್ಯಾರ್ಹತೆ

B.Com, BA, BAF, BBI, BBA, BBM, BMS, BSc – IT/CS/General, BCA, BCS, B.Pharm, M.Pharm. ಈ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರ್ಣ ಸಮಯ ತರಗತಿಗೆ ಹಾಜರಾಗಿ ಡಿಗ್ರಿ ಪೂರೈಸಿದವರು ಮಾತ್ರ ಅರ್ಜಿ ಸಲ್ಲಿಸಬೇಕು. 2022 ರಲ್ಲಿ ವಿವಿಧ ಕೋರ್ಸ್ಗಳಲ್ಲಿ ಉತ್ತೀರ್ಣರಾದ ಪದವೀಧರರು ಟಿಸಿಎಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಪರೀಕ್ಷೆ ಯಾವಾಗ?

ಜನವರಿ 26, 2022 ರಂದು

ಆಯ್ಕೆ ಹೇಗೆ?

ಸಂಖ್ಯಾತ್ಮಕ ಸಾಮರ್ಥ್ಯ, ಮೌಖಿಕ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ- ಈ ಮೂರು ವಿಭಾಗಗಳಲ್ಲಿ TCS iON (NQT) ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿ 60 ನಿಮಿಷಗಳಾಗಿದ್ದು, ಆನ್ಲೈನ್ ಮೂಲಕವೇ ಅಭ್ಯರ್ಥಿಗಳು ಉತ್ತರಿಸಬೇಕು. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫ್ರೆಶರ್‌ಗಳನ್ನು ಸಂಸ್ಥೆ ನೇಮಿಸಿಕೊಳ್ಳುತ್ತದೆ.

ಹೆಚ್ಚಿನ ಮಾಹಿತಿಗೆ ಈ ಮೇಲ್ ಮೂಲಕ ಕಂಪನಿಯನ್ನು ಸಂಪರ್ಕಿಸಬಹುದು

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು TCS ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

TCS iON (NQT)ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಅಭ್ಯರ್ಥಿಗಳು ಯಾವುದೇ ಬ್ಯಾಕ್‌ಲಾಗ್ ಹೊಂದಿರಬಾರದು. ಜೊತೆಗೆ ಶಿಕ್ಷಣದ ಅಂತರವು ಎರಡು ವರ್ಷಗಳನ್ನು ಮೀರಬಾರದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

Wed Dec 22 , 2021
ಲಂಡನ್: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು, ಒಟ್ಟು 5, 527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವ ಸಾಧ್ಯತೆಗಳಿವೆ. ಈ ಸಂಬಂಧ ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ […]

Advertisement

Wordpress Social Share Plugin powered by Ultimatelysocial