ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

ಲಂಡನ್: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು, ಒಟ್ಟು 5, 527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವ ಸಾಧ್ಯತೆಗಳಿವೆ.

ಈ ಸಂಬಂಧ ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14) ಜಯದ್(9) ಎಂಬ ಇಬ್ಬರು ಮಕ್ಕಳಿದ್ದಾರೆ.

ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಅವರ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ.

ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಬ್ರಿಟನ್ ಇತಿಹಾಸದಲ್ಲಿ ಇದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ

Wed Dec 22 , 2021
ವೈಯಕ್ತಿಕ ಜೀವನದಲ್ಲಿ ಏನೇ ಕಿರಿಕ್​ ಇದ್ದರೂ ಕೂಡ ನಟಿ ಸಮಂತಾ  ಅವರು ವೃತ್ತಿಜೀವನದಲ್ಲಿ ಬ್ಯಾಕ್​ ಟು ಬ್ಯಾಕ್​ ಯಶಸ್ಸು ಪಡೆಯುತ್ತಿದ್ದಾರೆ. ನಾಗ ಚೈತನ್ಯ  ಅವರ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ  ಪಡೆದುಕೊಂಡ ಬಳಿಕ ಸಮಂತಾ ಅವರಿಗೆ ಇದ್ದ ಡಿಮ್ಯಾಂಡ್​​ ಹೆಚ್ಚಿದೆ. ಇತ್ತೀಚೆಗೆ ಅವರು ಡ್ಯಾನ್ಸ್​ ಮಾಡಿದ ‘ಹು ಅಂತಿಯಾ ಮಾವ..’ ಹಾಡು ಸೂಪರ್​ ಹಿಟ್​ ಆಯಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು. ಆದರೆ ಒಂದು ವರ್ಗದ ಜನರು […]

Advertisement

Wordpress Social Share Plugin powered by Ultimatelysocial