ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ

ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್​ ಉತ್ತರವೇನು?

ವೈಯಕ್ತಿಕ ಜೀವನದಲ್ಲಿ ಏನೇ ಕಿರಿಕ್​ ಇದ್ದರೂ ಕೂಡ ನಟಿ ಸಮಂತಾ  ಅವರು ವೃತ್ತಿಜೀವನದಲ್ಲಿ ಬ್ಯಾಕ್​ ಟು ಬ್ಯಾಕ್​ ಯಶಸ್ಸು ಪಡೆಯುತ್ತಿದ್ದಾರೆ.

ನಾಗ ಚೈತನ್ಯ  ಅವರ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ  ಪಡೆದುಕೊಂಡ ಬಳಿಕ ಸಮಂತಾ ಅವರಿಗೆ ಇದ್ದ ಡಿಮ್ಯಾಂಡ್​​ ಹೆಚ್ಚಿದೆ. ಇತ್ತೀಚೆಗೆ ಅವರು ಡ್ಯಾನ್ಸ್​ ಮಾಡಿದ ‘ಹು ಅಂತಿಯಾ ಮಾವ..’ ಹಾಡು ಸೂಪರ್​ ಹಿಟ್​ ಆಯಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು. ಆದರೆ ಒಂದು ವರ್ಗದ ಜನರು ಸಮಂತಾರನ್ನು ದ್ವೇಷಿಸುತ್ತಿದ್ದಾರೆ. ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​  ಮಾಡಲಾಗುತ್ತಿದೆ.

ಸಮಾನ್ಯವಾಗಿ ಟ್ರೋಲ್​ಗಳಿಗೆ ಸಮಂತಾ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವು ಟ್ರೋಲ್​ಗಳನ್ನು ಸಿಹಿಸಿಕೊಳ್ಳುವುದು ಕಷ್ಟ. ಇತ್ತೀಚೆಗೆ ನೆಟ್ಟಿಗನೊಬ್ಬ ತುಂಬ ಖಾರವಾಗಿ ಸಮಂತಾ ಬಗ್ಗೆ ಕಮೆಂಟ್​ ಮಾಡಿದ್ದ. ಅದನ್ನು ಕಂಡು ಸಮಂತಾ ಅಭಿಮಾನಿಗಳಿಗೆ ಬೇಸರವಾಗಿದೆ. ‘ವಿಚ್ಛೇದನ ಪಡೆದು ಹಾಳಾದ ಸೆಕೆಂಡ್​ ಹ್ಯಾಂಡ್​ ಐಟಂ ಈ ಸಮಂತಾ. ಸಂಭಾವಿತ ವ್ಯಕ್ತಿಯಿಂದ ತೆರಿಗೆ ರಹಿತ 50 ಕೋಟಿ ರೂ. ಹಣವನ್ನು ದರೋಡೆ ಮಾಡಿದ್ದಾರೆ’ ಎಂದು ಆತ ಕಮೆಂಟ್​ ಮಾಡಿದ್ದಾನೆ.

ಈ ಕಮೆಂಟ್​ ಕಂಡು ಸಮಂತಾ ಬೇಸರ ಮಾಡಿಕೊಂಡಿದ್ದಾರೆ. ಆದರೆ ಅವರು ತುಂಬ ಸಭ್ಯವಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮಗೆ ದೇವರ ಆಶೀರ್ವಾದ ಸಿಗಲಿ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸಮಂತಾ ಬಗ್ಗೆ ಕೇಳಿಬಂದ ಅಂತೆ-ಕಂತೆಗಳು ಒಂದೆರಡಲ್ಲ. ಯೂಟ್ಯೂಬ್​ನಲ್ಲಿ ಅವರ ಕುರಿತು ಇಲ್ಲಸಲ್ಲದ ಅನೇಕ ಗಾಸಿಪ್​ಗಳನ್ನು ಹರಡಿಸಲಾಗಿತ್ತು. ಅವುಗಳ ವಿರುದ್ಧ ಅವರು ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು.

ಸಮಂತಾ ಕೈಯಲ್ಲಿ ಈಗ ಅನೇಕ ಆಫರ್​ಗಳಿವೆ. ಫಿಲಿಪ್​ ಜಾನ್​ ನಿರ್ದೇಶನದ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಇಂಗ್ಲಿಷ್​ ಸಿನಿಮಾದಲ್ಲಿ ದ್ವಿಲಿಂಗಿ​ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂಗಿಕ ಆಸಕ್ತಿ ಇರುವ ತಮಿಳು ಮಹಿಳೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ ಅವರು ವಿಶೇಷ ಆಸಕ್ತಿ ಇಟ್ಟುಕೊಂಡಿದ್ದಾರೆ. ‘ಇದು ನನಗೆ ಹೊಸ ಪ್ರಪಂಚ. ನಾನು ಕೊನೆ ಬಾರಿಗೆ ಆಡಿಷನ್​ ನೀಡಿದ್ದು 2009ರಲ್ಲಿ ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. 12 ವರ್ಷಗಳ ಬಳಿಕ ಮತ್ತೆ ಆಡಿಷನ್​ ನೀಡಿದ್ದೇನೆ. ಮತ್ತೆ ಅದೇ ರೀತಿ ನರ್ವಸ್​ ಆಗಿದ್ದೇನೆ. ಫಿಲಿಪ್​ ಜಾನ್ ಜೊತೆ ಕೆಲಸ ಮಾಡುವುದು ತುಂಬ ಅಪರೂಪದ ಅವಕಾಶ. ಈ ಪಾತ್ರಕ್ಕೆ ಆಯ್ಕೆ ಆಗಿರುವುದು ತುಂಬ ಖುಷಿ ಆಗುತ್ತಿದೆ. ಈ ಪಯಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ರೈಡರ್​', 'ಬಡವ ರಾಸ್ಕಲ್​' ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೋತ್ಸಾಹ

Wed Dec 22 , 2021
 ‘ಈ ತಿಂಗಳು ಅನೇಕ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಯಾವುದನ್ನು ನೋಡೋದು ಅಂತ ಯೋಚಿಸಬೇಡಿ. ಎಲ್ಲ ಸಿನಿಮಾಗಳನ್ನೂ ನೋಡಿ’ ಎಂದು ರಮ್ಯಾ ಹೇಳಿದ್ದಾರೆ. ‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸದೇ ಹಲವು ವರ್ಷ ಆಗಿದೆ. ಆದರೆ ಅವರು ಚಿತ್ರರಂಗದ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸ್ಯಾಂಡಲ್​​ವುಡ್​ನಲ್ಲಿ ಆಗುವ ಬೆಳವಣಿಗೆಗಳನ್ನು ಅವರು ಗಮನಿಸುತ್ತಿದ್ದಾರೆ. ಹೆಚ್ಚು ಕಾಲ ವಿದೇಶದಲ್ಲೇ ಕಾಲ ಕಳೆದರೂ ಕೂಡ ಅವರು ಕನ್ನಡ ಸಿನಿಮಾಗಳನ್ನು ಗಮನಿಸುತ್ತಾ ಇರುತ್ತಾರೆ. ಅದಕ್ಕೆ ಮತ್ತೆ […]

Advertisement

Wordpress Social Share Plugin powered by Ultimatelysocial