‘ರೈಡರ್​’, ‘ಬಡವ ರಾಸ್ಕಲ್​’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೋತ್ಸಾಹ

'ರೈಡರ್​', 'ಬಡವ ರಾಸ್ಕಲ್​' ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ

 ‘ಈ ತಿಂಗಳು ಅನೇಕ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಯಾವುದನ್ನು ನೋಡೋದು ಅಂತ ಯೋಚಿಸಬೇಡಿ. ಎಲ್ಲ ಸಿನಿಮಾಗಳನ್ನೂ ನೋಡಿ’ ಎಂದು ರಮ್ಯಾ ಹೇಳಿದ್ದಾರೆ.

‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸದೇ ಹಲವು ವರ್ಷ ಆಗಿದೆ.

ಆದರೆ ಅವರು ಚಿತ್ರರಂಗದ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸ್ಯಾಂಡಲ್​​ವುಡ್​ನಲ್ಲಿ ಆಗುವ ಬೆಳವಣಿಗೆಗಳನ್ನು ಅವರು ಗಮನಿಸುತ್ತಿದ್ದಾರೆ. ಹೆಚ್ಚು ಕಾಲ ವಿದೇಶದಲ್ಲೇ ಕಾಲ ಕಳೆದರೂ ಕೂಡ ಅವರು ಕನ್ನಡ ಸಿನಿಮಾಗಳನ್ನು ಗಮನಿಸುತ್ತಾ ಇರುತ್ತಾರೆ. ಅದಕ್ಕೆ ಮತ್ತೆ ಮತ್ತೆ ಸಾಕ್ಷಿ ಸಿಗುತ್ತಲೇ ಇದೆ. ಕನ್ನಡದಲ್ಲಿ ರಿಲೀಸ್​ ಆಗುತ್ತಿರುವ ಚಿತ್ರಗಳ ಬಗ್ಗೆ ರಮ್ಯಾ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವಾರ (ಡಿ.24) ನಿಖಿಲ್​ ಕುಮಾರಸ್ವಾಮಿ  ನಟನೆಯ ‘ರೈಡರ್​’  ಮತ್ತು ಡಾಲಿ ಧನಂಜಯ  ಅಭಿನಯದ ‘ಬಡವ ರಾಸ್ಕಲ್​’  ಚಿತ್ರಗಳು ತೆರೆಕಾಣುತ್ತಿವೆ. ಆ ಸಿನಿಮಾಗಳಿಗೆ ರಮ್ಯಾ ಶುಭ ಕೋರಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಆಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಮೂಲಕ ಅವರು ಅವರು ಅಭಿಮಾನಿಗಳಿಗೆ ಆಗಾಗ ಅಪ್​ಡೇಟ್​ ನೀಡುತ್ತ ಇರುತ್ತಾರೆ. ಈಗ ಅವರು ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ‘ರೈಡರ್​’ ಮತ್ತು ‘ಬಡವ ರಾಸ್ಕಲ್​’ ಚಿತ್ರಗಳ ಮೇಲೆ ತಮಗೆ ಎಷ್ಟು ನಿರೀಕ್ಷೆ ಇದೆ ಎಂಬುದನ್ನು ತಿಳಿಸಿದ್ದಾರೆ. ‘ರೈಡರ್’​ ಚಿತ್ರದ ಟೀಸರ್​ ಹಂಚಿಕೊಂಡು ನಿಖಿಲ್​ ಕುಮಾರಸ್ವಾಮಿ ಅವರಿಗೆ ರಮ್ಯಾ ಶುಭ ಕೋರಿದ್ದಾರೆ.

‘ಈ ತಿಂಗಳು ಅನೇಕ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಯಾವುದನ್ನು ನೋಡೋದು ಅಂತ ಯೋಚಿಸಬೇಡಿ. ಎಲ್ಲ ಸಿನಿಮಾಗಳನ್ನೂ ನೋಡಿ’ ಎಂದು ರಮ್ಯಾ ಹೇಳಿದ್ದಾರೆ. ‘ಬಡವ ರಾಸ್ಕಲ್​’ ಚಿತ್ರದ ಪೋಸ್ಟರ್​ ಶೇರ್​ ಮಾಡಿಕೊಂಡಿರುವ ಅವರು ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಧನಂಜಯ ಅವರಿಗೆ ರಮ್ಯಾ ಕಡೆಯಿಂದ ಈ ರೀತಿ ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ರತ್ನನ್​ ಪ್ರಪಂಚ’ ಸಿನಿಮಾ ಬಿಡುಗಡೆ ಆದಾಗಲೂ ಅವರು ಪ್ರೀತಿ ತೋರಿಸಿದ್ದರು.

‘ರತ್ನನ್​ ಪ್ರಪಂಚ’ ಚಿತ್ರವನ್ನು ನೋಡಿ ರಮ್ಯಾ ಮೆಚ್ಚಿಕೊಂಡಿದ್ದರು. ಬಳಿಕ ಅವರು ಇನ್​ಸ್ಟಾಗ್ರಾಮ್​ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ‘ಕಲಾವಿದರಾದ ಡಾಲಿ ಧನಂಜಯ, ಉಮಾಶ್ರೀ, ಪ್ರಮೋದ್​, ಶ್ರುತಿ, ವೈನಿಧಿ, ಅಚ್ಯುತ್​ ಕುಮಾರ್​, ಅನು ಪ್ರಭಾಕರ್​, ರವಿಶಂಕರ್​ ಎಲ್ಲರೂ ಬ್ರಿಲಿಯಂಟ್​. ರೆಬಾ ಮೋನಿಕಾ ಅವರೇ, ನಾನು ನಿಮಗಿಂತಲೂ ಉತ್ತಮವಾಗಿ ನಟಿಸುತ್ತಿರಲಿಲ್ಲ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಮುಡಿಗೆ ಇನ್ನೊಂದು ಗರಿ ಸೇರಿದೆ. ನಿರ್ದೇಶಕ ರೋಹಿತ್​ ಪದಕಿ ಅವರ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ರಮ್ಯಾ ಪೋಸ್ಟ್​ ಮಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಏನಾದ್ರೂ ಕೇಳ್ಬೋದು: ಪ್ರೇಮಕಾಮಗಳ ಆಕರ್ಷಣೆ ಋಣಾತ್ಮಕವೇ?

Wed Dec 22 , 2021
24ರ ಎಂಎಸ್‌ಸಿ ಓದಿರುವ ಯುವತಿ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದುವಾಗ ತುಂಬಾ ಋಣಾತ್ಮಕ ಅಂದರೆ ಲೈಂಗಿಕತೆಯ ಯೋಚನೆಗಳು ಬರುತ್ತವೆ. ಸಂಗಾತಿಯ ಬಗೆಗಿನ ಕಲ್ಪನೆಗಳು ಮೂಡಿ ಕಳೆದುಹೋಗುತ್ತೇನೆ. ಮನೆಯಲ್ಲಿ ಎಲ್ಲರೂ ಮೊದಲು ಉದ್ಯೋಗ ಪಡೆದುಕೊ, ಮದುವೆ ಅನ್ನೋದು ಮುಂದೆ ಇದ್ದೇ ಇದೆ ಎನ್ನುತ್ತಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial