ಮಸೀದಿ ವಿಡಿಯೋ ಸಾರ್ವಜನಿಕಗೊಳಿಸುವಂತಿಲ್ಲ: ಕೋರ್ಟ್

 

ವಾರಣಾಸಿ ಮೇ 31: ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿದ ಸಮೀಕ್ಷೆ ಆಯೋಗವು ತೆಗೆದ ವಿಡಿಯೋ ಮತ್ತು ಛಾಯಾಚಿತ್ರಗಳ ಪ್ರತಿಗಳನ್ನು ಕಕ್ಷಿದಾರರು ಪಡೆಯಲು ವಾರಣಾಸಿ ನ್ಯಾಯಾಲಯ ಅನುಮತಿ ನೀಡಿದೆ.

ಸಮೀಕ್ಷೆಯ ವರದಿ, ವಿಡಿಯೋಗಳು, ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಮೇ 19ರಂದು ಸಲ್ಲಿಸಲಾಗಿತ್ತು.

ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಕಮಿಷನರ್ ವರದಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಮಾತ್ರ ಕಕ್ಷಿದಾರರು ವಿಡಿಯೋಗಳು, ಛಾಯಾಚಿತ್ರಗಳನ್ನು ಬಳಸಬಹುದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ವಿಡಿಯೋ, ಚಿತ್ರಗಳನ್ನುಸಾರ್ವಜನಿಕಗೊಳಿಸುವಂತಿಲ್ಲ ಎಂದು ಮೇ 30ರ ಆದೇಶದಲ್ಲಿ ವಾರಣಾಸಿ ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಕಕ್ಷಿದಾರರಿಗೆ ಮಾತ್ರ ವಿಡಿಯೋ ಮತ್ತು ಛಾಯಾಗ್ರಹಣದ ಪ್ರತಿಗಳನ್ನು ಒದಗಿಸಬೇಕು ಮತ್ತು ಕಕ್ಷಿದಾರರು ಅದನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಸಾರ್ವಜನಿಕಗೊಳಿಸುವುದಿಲ್ಲ ಅಥವಾ ಅನಧಿಕೃತ ಬಳಕೆಗಾಗಿ ಹಂಚಿಕೊಳ್ಳುವುದಿಲ್ಲ ಎಂದು ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಮೀಷನರ್ ವರದಿಯ ವಿಡಿಯೋ ಮತ್ತು ಛಾಯಾಗ್ರಹಣದ ಪ್ರತಿಗಳನ್ನು ಕೋರಿ 5 ಹಿಂದೂ ಮಹಿಳಾ ಭಕ್ತರು ಸಲ್ಲಿಸಿರುವ ಅರ್ಜಿಯ ಸಂಬಂಧ ಈ ಆದೇಶ ಬಂದಿದೆ. ಆದರೆ ವಿಡಿಯೋವನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆಯನ್ನು ಮಸೀದಿ ಸಮಿತಿ ವಿರೋಧಿಸಿತ್ತು.

ಸರ್ವೆ ವಿಡಿಯೋ ವೈರಲ್‌
ನ್ಯಾಯಾಲಯದ ಅನುಮತಿಯಿಲ್ಲದೇ ಸಾರ್ವಜನಿಕಗೊಳಿಸುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಕೆಯಾದ ನಂತರ 5 ಹಿಂದೂ ಮಹಿಳಾ ಭಕ್ತರಿಗೆ ಸೋಮವಾರ ವಿಡಿಯೋ ಪ್ರತಿಗಳನ್ನು ಹಸ್ತಾಂತರಿಸಲಾಯಿತು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗಿದ್ದು, ಸರ್ವೆ ವಿಡಿಯೋಗಳು ವೈರಲ್‌ ಆಯಿತು. ಹಲವು ಸುದ್ದಿ ವಾಹಿನಿಗಳು ಸರ್ವೆ ವಿಡಿಯೋಗಳನ್ನು ಪ್ರಸಾರ ಮಾಡಿತು.

ಔರಂಗಜೇಬರ ಕಾಲದ ಮಸೀದಿ

17ನೇ ಶತಮಾನದಲ್ಲಿ ಮೊಗಲ್ ದೊರೆ ಔರಂಗಜೇಬನ ಕಾಲದಲ್ಲಿ ಜ್ಞಾನವಾಪಿ ಮಸೀದಿ ಕಟ್ಟಲಾಗಿದೆ. ಆದರೆ, ಕಾಶಿ ವಿಶ್ವನಾಥ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದ. ಕಾಶಿ ವಿಶ್ವನಾಥ ದೇವಸ್ಥಾನದ ಬದಿಯಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವರುಗಳ ವಿಗ್ರಹಗಳಿದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಕೋರಿ ಐವರು ಮಹಿಳೆಯರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು.

ವಿವಾದಿತ ಸ್ಥಳ ಸೀಲ್

ಸ್ಥಳೀಯ ವಾರಣಾಸಿ ನ್ಯಾಯಾಲಯ ಸರ್ವೆ ಕಮಿಷನ್ ನೇಮಿಸಿ, ಮಸೀದಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದರಂತೆ ಮೇ 19ರಂದು ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸರ್ವೆ ಕಮಿಷನ್ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವ ಲಿಂಗ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಸೀದಿ ಸ್ಥಳವನ್ನು ಸೀಲ್ ಮಾಡಲಾಗಿದೆ. ಸೀಲ್ ಮಾಡಲಾದ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಕೋರ್ಟ್ ಈ ಹಿಂದೆ ಆದೇಶ ನೀಡಿದೆ.

ಮಸೀದಿಯಲ್ಲಿ ಶಿವಲಿಂಗ ಪತ್ತೆ

ವಾರಣಾಸಿ ನ್ಯಾಯಾಲಯದ ಸರ್ವೆ ಆದೇಶವನ್ನು ಪಶ್ನಿಸಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇ 17ರಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಗ್ಯಾನವಾಪಿ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ರಕ್ಷಿಸಲು ವಾರಣಾಸಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ಆದೇಶವು ನಮಾಜ್ ಮಾಡಲು ಮತ್ತು ಧಾರ್ಮಿಕ ಆಚರಣೆಗಳಿಗೆ ಮಸೀದಿಯನ್ನು ಪ್ರವೇಶಿಸುವ ಮುಸ್ಲಿಮರ ಹಕ್ಕನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಂತರ ಮೇ 20ರಂದು, ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಾರಣಾಸಿ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ.ರಾಜ್​ಕುಮಾರ್​ ಅಕಾಡೆಮಿಯ 8 ಮಂದಿಗೆ ರ‍್ಯಾಂಕ್​!

Tue May 31 , 2022
  ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದ(ಯುಪಿಎಸ್​ಸಿ) 2021-22ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಾದ್ಯಂತ 685 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕರ್ನಾಟಕದವರೇ 30ಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ 8 ಅಭ್ಯರ್ಥಿಗಳು ಡಾ.ರಾಜ್​ಕುಮಾರ್​ ಸಿವಿಲ್ ಸರ್ವೀಸ್ ಅಕಾಡೆಮಿಯಲ್ಲಿ ಕೋಚಿಂಗ್​ ಪಡೆದವರು. ಈ ಸುದ್ದಿ ಕೇಳಿ ಖುಷಿಗೊಂಡ ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಸಾಧಕರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ […]

Advertisement

Wordpress Social Share Plugin powered by Ultimatelysocial