ಸಕಲಕಲಾವಲ್ಲಭ ಕಮಲ್ ಹಾಸನ್ ವಿರುದ್ಧ ದೂರು ದಾಖಲು..!

ಖ್ಯಾತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ‘ಪಾತಾಳ ಪಾತಾಳ.’ ಎನ್ನುವ ಸಾಹಿತ್ಯವಿರುವ ಹಾಡು ಇದಾಗಿದ್ದು ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.

ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ.

ಅಂದಹಾಗೆ ಸದ್ಯ ವಿವಾದದಲ್ಲಿ ಸಿಲುಕಿರುವ ಪಾತಾಳ್ ಪಾತಾಳ್ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿರುವ ಹಾಡಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು ಕೊವಿಡ್ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕ ವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ. ಹಾಡಿನ ಅರ್ಥ ‘ಖಜಾನೆಯಲ್ಲಿ ಹಣವಿಲ್ಲ, ಜ್ವರ ಮತ್ತು ರೋಗಗಳು ಹೆಚ್ಚುತ್ತಿರುವ ಸಮಯದಲ್ಲಿ ಕೇಂದ್ರದ (ಕೇಂದ್ರ ಸರ್ಕಾರ) ತಪ್ಪಿನಿಂದಾಗಿ ಏನು ಉಳಿದಿಲ್ಲ.

ಕೀ ಈಗ ಕಳ್ಳನ ಬಳಿ ಇದೆ’ ಎನ್ನುವ ಅರ್ಥದ ಸಾಲು ಈ ಹಾಡಿನಲ್ಲಿ ಇದೆ ಎನ್ನುವ ಕಾರಣಕ್ಕೆ ಕಮಲ್ ಹಾಸನ್ ವಿರುದ್ಧ ದೂರು ದಾಖಲಿಸ ಲಾಗಿದೆ. ಸೆಲ್ವಂ ಎನ್ನುವ ವ್ಯಕ್ತಿ ಮೇ 12ರಂದು ಚೆನ್ನೈ ಪೊಲೀಸ್ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಂದಹಾಗೆ ಕಮಲ್ ಹಾಸನ್ ಸಿನಿಮಾಗಳು ಅಂದ್ಮೇಲೆ ವಿವಾದಗಳು ಕಾಮನ್ ಎನ್ನುವ ಹಾಗೆ ಆಗಿದೆ. ಯಾಕೆಂದರೆ ಈ ಮೊದಲ ಬಿಡುಗಡೆಯಾಗಿರುವ 2004ರಲ್ಲಿ ಬಂದ ವಿರುಮಾಂಡಿ ಮತ್ತು 2013ರಲ್ಲಿ ಬಂದ ವಿಷ್ವರೂಪಮ್ ಸಿನಿಮಾಗಳು ಬಿಡುಗಡೆಗೂ ಮೊದಲೇ ಭಾರಿ ವಿವಾದ ಸೃಷ್ಟಿ ಮಾಡಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಂಕ್ ನೋಟ್'' ಸಿನಿಮಾದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿ ಭಾವನಾ..!

Sat May 14 , 2022
ಜಾಕಿ ಖ್ಯಾತಿಯ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿಂಕ್ ನೋಟ್ ಎಂದು ಹೆಸರು ಇಡಲಾಗಿದೆ. ದುಡ್ಡಿನ ಹಿಂದೆ ಬಿದ್ದಾಗ ಮನುಷ್ಯ ಏನೆಲ್ಲ ಆಗುತ್ತಾನೆ ಎನ್ನುವ ಕುರಿತಾದ ಕಥಾ ಹಂದರ ಈ ಸಿನಿಮಾದಲ್ಲಿದ್ದು, ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ ನಿರ್ದೇಶಕರು. ಮಧ್ಯಮ ವರ್ಗದ ಕುಟುಂಬದಲ್ಲಿ […]

Advertisement

Wordpress Social Share Plugin powered by Ultimatelysocial