ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ

ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ; ಕಂಬನಿ ಮಿಡಿದ ಚಿತ್ರರಂಗ

ತಮಿಳು ಸಿನಿಮಾರಂಗದ ಖ್ಯಾತ ಗಾಯಕ ಮಾಣಿಕ ವಿನಾಯಗಂ ವಿಧಿವಶರಾಗಿದ್ದಾರೆ.

ಭಾನುವಾರ (ಡಿ.26) ರಾತ್ರಿ ಅವರು ಕೊನೆಯುಸಿರು ಎಳೆದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಣಿಕ ವಿನಾಯಗಂ ನಿಧನಕ್ಕೆ ಸೂಕ್ತ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅವರ ಅಗಲಿಕೆಗೆ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದ್ದಿದ್ದಾರೆ.

ನಾಟ್ಯಾಚಾರ್ಯ ಪದ್ಮಶ್ರೀ ವಳುವೂರ್​ ಬಿ ರಾಮಯ್ಯ ಪಿಳೈ ಅವರ ಕಿರಿಯ ಪುತ್ರನಾಗಿದ್ದ ಮಾಣಿಕ ವಿನಾಯಗಂ ಅವರಿಗೆ 73 ವರ್ಷ ವಯಸ್ಸಾಗಿತ್ತು. 800ಕ್ಕೂ ಅಧಿಕ ಸಿನಿಮಾ ಗೀತೆಗಳಿಗೆ ಅವರು ಧ್ವನಿ ನೀಡಿದ್ದರು. ಸಾವಿರಾರು ಭಕ್ತಿಗೀತೆಗಳು ಅವರ ಕಂಠದಲ್ಲಿ ಮೂಡಿಬಂದಿದ್ದವು. ಗಾಯನದ ಜೊತೆಯಲ್ಲಿ ನಟನಾಗಿಯೂ ಅವರು ಗುರುತಿಸಿಕೊಂಡಿದ್ದರು.

2001ರಲ್ಲಿ ಹಾಡುಗಾರಿಕೆ ಆರಂಭಿಸಿದ ಮಾಣಿಕ ವಿನಾಯಗಂ ಅವರು ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದರು. ಭಕ್ತಿ ಗೀತೆ ಮತ್ತು ಜಾನಪದ ಗೀತೆಗಳ ಮೂಲಕ ಅವರು ಫೇಮಸ್​ ಆಗಿದ್ದರು. ‘ತಿರುಡ ತಿರುಡಿ’ ಚಿತ್ರದಲ್ಲಿ ಧನುಷ್​​ಗೆ ತಂದೆ ಆಗಿ ಅವರು ನಟಿಸಿದ್ದರು. ಆನಂತರ ಅನೇಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಅವರು ಮಾಣಿಕ ವಿನಾಯಗಂ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ವರದಿ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳಿಗೆ ನೀಟ್ ಕೊಟ್ಟ ಶಾಕ್: ಸೀಟ್ ಬಿಟ್ಟರೇ ಲಕ್ಷ ಲಕ್ಷ ದಂಡ

Mon Dec 27 , 2021
ಬೆಂಗಳೂರು:ಸಿಇಟಿ ಮೂಲಕ ಸೀಟ್ ಪಡೆಯುವ ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲೋ ಇಲ್ಲವೇ ಅವಧಿ ಮುಗಿದ ಬಳಿಕ ಸೀಟ್ ಬಿಟ್ಟರೇ ಅವರು ಲಕ್ಷಾಂತರ ರೂಪಾಯಿ ದಂಡ ಕಟ್ಟಲೇಬೇಕಾಗುತ್ತದೆ. ಈ ಮೂಲಕ ಈಗ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ ಶುರು ಆಗಿದೆ. ನೀಟ್ ಮೂಲಕ ಸೀಟ್ ಪಡೆದು ಕೆಲವ್ರು ಕೊನೆ ಕ್ಷಣದಲ್ಲಿ ಪಡೆದ ಸೀಟ್ ಬಿಟ್ಟು ಹೋಗಿ ಬಿಡುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶವೇ ಇಲ್ಲ. ಸೀಟ್ ಪಡೆದ ವಿದ್ಯಾರ್ಥಿಗಳು ಇನ್ನೇನೂ ಕೊನೆ ದಿನ ಇದೆ […]

Advertisement

Wordpress Social Share Plugin powered by Ultimatelysocial